ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ Ampere Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬರುತ್ತಿದೆ. ಆಂಪಿಯರ್ ಕಂಪನಿಯು ಸಹ ಇವಿ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಮತ್ತೊಂದು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಸುಧೀರ್ಘ ಅವಧಿಯ ಪ್ರಯಾಣದಲ್ಲಿ ಹಲವಾರು ಬದಲಾವಣೆ ಪರಿಚಯಿಸುವುದರ ಜೊತೆಗೆ ಇವಿ ವಾಹನ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಮೈಲೇಜ್ ರೇಂಜ್ ಹೊಂದಿರುವ ಮ್ಯಾಗ್ನಸ್ ಇಎಕ್ಸ್(Magnus EX) ಮಾದರಿಯನ್ನು ಬಿಡುಗಡೆ ಮಾಡಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಮ್ಯಾಗ್ನಸ್ ಇಎಕ್ಸ್ ಮಾದರಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಆಂಪಿಯರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಇವಿ ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಆಂಪಿಯರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ದೀರ್ಘ ಶ್ರೇಣಿಯ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 121 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ 1200-ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಇವಿ ಸ್ಕೂಟರ್ ಆರಂಭಿಕ ಮಾದರಿಗಳ ವಿಭಾಗದಲ್ಲಿರುವ ಅತ್ಯಧಿಕ ರೇಟಿಂಗ್ ಹೊಂದಿರುವ ಆವೃತ್ತಿಯಾಗಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮ್ಯಾಗ್ನಸ್ ಇಎಕ್ಸ್ ಇ-ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್, ಹಗುರವಾದ ಮತ್ತು ಪೋರ್ಟಬಲ್ ಸುಧಾರಿತ ಲೀಥಿಯಂ ಬ್ಯಾಟರಿ ಜೋಡಿಸಿರುವುದರಿಂದ ಸ್ಕೂಟರ್ ಮಾಲೀಕರು ಪ್ಲಗ್-ಆನ್-ದಿ-ವಾಲ್ ಚಾರ್ಜ್ ಪಾಯಿಂಟ್‌ನಲ್ಲಿ ಯಾವುದೇ 5-amp ಸಾಕೆಟ್ ಮೂಲಕ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಇವಿ ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್ ಬ್ಯಾಟರಿ ಸೆಟಪ್ ಸೇರಿಸಿರುವುದರಿಂದ ಮನೆ, ಕಚೇರಿ, ಕಾಫಿ ಶಾಪ್ ಅಥವಾ ಯಾವುದೇ ಕಡೆಗಳಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಈ ಸ್ಕೂಟರ್‌ನಲ್ಲಿ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸ್ಕೂಟರ್ ಮಾಲೀಕರು ತಮ್ಮ ಆದ್ಯತೆಗೆ ಅನುಗುಣವಾಗಿ ಇಕೋ ಮೋಡ್ ಮತ್ತು ಪವರ್ ಮೋಡ್‌ನಲ್ಲಿ ರೈಡ್ ಮಾಡಬಹುದಾಗಿದ್ದು, ಇಕೋ ಮೋಡ್‌ನಲ್ಲಿ ಸ್ಕೂಟರ್ ಮೈಲೇಜ್ ಗರಿಷ್ಠ ಪ್ರಮಾಣದಲ್ಲಿ ಹಿಂದಿರುಗಲಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಪವರ್ ಮೋಡ್ ಮೂಲಕ ಉತ್ತಮ ವೇಗ ಪಡೆದುಕೊಳ್ಳಬಹುದಾಗಿದ್ದು, ಸೊನ್ನೆಯಿಂದ 40 ಕಿ.ಮೀ ಸ್ಪೀಡ್‌ನಲ್ಲಿ ಚಲಿಸಲು 10 ಸೇಕೆಂಡು ತೆಗೆದುಕೊಳ್ಳುತ್ತದೆ. ಹಾಗೆಯೇ ಸ್ಕೂಟರ್ ಚಾಲನೆ ಅನುಕೂಲಕರವಾಗಿ ಹೊಸ ವಿನ್ಯಾಸದ ವಿಶಾಲವಾದ ಆಸನಗಳನ್ನು ನೀಡಲಾಗಿದ್ದು, 450 ಎಂಎಂ ಲೆಗ್‌ರೂಮ್ ಸ್ಪೇಸ್ ಸಿಗುತ್ತದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ವಿಸ್ತರಿತ ಲೆಗ್‌ರೂಮ್ ಸ್ಪೇಸ್ ನೀಡಿರುವುದರಿಂದ ಎತ್ತರವಿರುವವರು ಕೂಡಾ ಈ ಸ್ಕೂಟರ್ ಅನ್ನು ಸುಲಭವಾಗಿ ರೈಡ್ ಮಾಡಬಹುದಾಗಿದ್ದು, ಎಲ್ಇಡಿ ಹೆಡ್‌ಲೈಟ್, ​​ಕೀ ಲೆಸ್ ಎಂಟ್ರಿ, ವೆಹಿಕಲ್ ಫೈಂಡರ್, ಆಂಟಿಥೆಫ್ಟ್ ಅಲಾರಂ ಸೌಲಭ್ಯಗಳು ಸ್ಕೂಟರ್ ಚಾಲನೆಯನ್ನು ಮತ್ತಷ್ಟು ಸರಳಗೊಳಿಸುತ್ತವೆ.

ವಿಸ್ತರಿತ ಮೈಲೇಜ್ ರೇಂಜ್ Ampere Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹಾಗೆಯೇ ಹೊಸ ಸ್ಕೂಟರ್ ಮಾದರಿಯು ಮೆಟಾಲಿಕ್ ರೆಡ್, ಗ್ರ್ಯಾಫೈಟ್ ಬ್ಲ್ಯಾಕ್ ಮತ್ತು ಗ್ಯಾಲಕ್ಟಿಕ್ ಗ್ರೇ ಎಂಬ ಮೂರು ಬಣ್ಣದ ಆಯ್ಕೆಯನ್ನು ಹೊಂದಿದ್ದು, ಹೊಸ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಎಲೆಕ್ಟ್ರಿಕ್ ವಾಹನಗಳ ಮಾರಾಟವು 2020ರಿಂದ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಆಂಪಿಯರ್ ಸೇರಿದಂತೆ ವಿವಿಧ ಇವಿ ವಾಹನ ಮಾರಾಟ ಕಂಪನಿಗಳು ಉತ್ತಮ ಬೇಡಿಕೆ ದಾಖಲಿಸಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ 190 ನಗರಗಳಲ್ಲಿ ತನ್ನ ಮಾರಾಟ ಜಾಲ ಹೊಂದಿರುವ ಆಂಪಿಯರ್ ಕಂಪನಿಯು ಬರೋಬ್ಬರಿ 500 ಮಾರಾಟ ಮಳಿಗೆಗಳ ಮೂಲಕ ಗ್ರಾಹಕರ ತಲುಪಲು ಯಶಸ್ವಿಯಾಗಿದ್ದು, ಕಂಪನಿಯು ಇದುವರೆಗೆ 1.20 ಲಕ್ಷ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದೊಂದಿಗೆ ಹೊಸ ಗುರಿಸಾಧನೆಗೆ ಪಾತ್ರವಾಗಿದೆ.

ವಿಸ್ತರಿತ ಮೈಲೇಜ್ ರೇಂಜ್ Ampere ಹೊಸ Magnus EX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ರಿಯೋ, ವಿ48, ಮ್ಯಾಗ್ನಸ್ 60, ಜೀಲ್ ಮಾದರಿಗಳ ಜೊತೆ ಇದೀಗ ಹೊಸದಾಗಿ ಮ್ಯಾಗ್ನಸ್ ಇಎಕ್ಸ್ ಮಾದರಿಯು ಸಹ ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ. ಅಪ್‌ಗ್ರೇಡ್ ಮಾದರಿಗಳಲ್ಲಿ ಶೇ.10 ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದೆ.

More from DriveSpark

Article Published On: Friday, October 15, 2021, 9:00 [IST]
English summary
Ampere magnus ex long ranged electric scooter launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+