ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಪ್ರೀಮಿಯಂ ಸ್ಕೂಟರ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಪ್ರಿಲಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಸ್ಎಕ್ಸ್ಆರ್ ಸರಣಿಯಲ್ಲಿ ಹೊಸದಾಗಿ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾಕ್ಸಿ ಸ್ಕೂಟರ್ ಸೆಗ್ಮೆಂಟ್ ಮಾದರಿಯಲ್ಲೇ ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ರಸ್ತೆಗಿಳಿದಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಭಾರತದಲ್ಲಿ ಪ್ರೀಮಿಯಂ ಸ್ಕೂಟರ್‌ಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ವಿವಿಧ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಲ್ಲಿರುವ ತಮ್ಮ ಜನಪ್ರಿಯ ಮ್ಯಾಕ್ಸಿ ಸ್ಕೂಟರ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುತ್ತಿವೆ. ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಕೂಡಾ ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ಕೂಡಾ ತನ್ನ ಹೊಸ ಸ್ಕೂಟರ್ ಮಾದರಿಯಾದ ಎಸ್ಎಕ್ಸ್ಆರ್ 125 ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಎಸ್ಎಕ್ಸ್ಆರ್ ಸರಣಿಯಲ್ಲಿ ಈಗಾಗಲೇ ಹೊಸದಾಗಿ 160 ಆವೃತ್ತಿಯನ್ನು ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿರುವ ಎಪ್ರಿಲಿಯಾ ಕಂಪನಿಯು ಇದೀಗ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.15 ಲಕ್ಷ ಬೆಲೆ ಹೊಂದಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಎಸ್ಎಕ್ಸ್ಆರ್ 160 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಖರೀದಿಗಾಗಿ ಎಪ್ರಿಲಿಯಾ ಕಂಪನಿಯು ಈಗಾಗಲೇ ರೂ. 5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದ್ದು, ಹೊಸ ಸ್ಕೂಟರ್ ಆವೃತ್ತಿಯು ಎಸ್ಎಕ್ಸ್ಆರ್ 160 ಮಾದರಿಗಿಂತ ಎಕ್ಸ್‌ಶೋರೂಂ ಪ್ರಕಾರ ರೂ. 11 ಸಾವಿರ ಮಾತ್ರ ಕಡಿಮೆ ಬೆಲೆ ಹೊಂದಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್‌ ಮಾದರಿಯು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್‌ಗಿಂತಲೂ ತುಸು ಕಡಿಮೆ ವೀಲ್ಹ್‌ಬೆಸ್ ಹೊಂದಿದ್ದು, ಎಸ್ಎಕ್ಸ್ಆರ್ 160 ಮಾದರಿಯಲ್ಲಿ 160ಸಿಸಿ ಎಂಜಿನ್ ಆಯ್ಕೆ ಹೊಂದಿದ್ದರೆ ಎಸ್ಎಕ್ಸ್ಆರ್ 125 ಮಾಕ್ಸಿ ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ನೀಡಲಾಗಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಹೊಸ ಸ್ಕೂಟರ್ ಮಾದರಿಯಲ್ಲಿ ಎಂಜಿನ್ ಮತ್ತು ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಎರಡು ಸ್ಕೂಟರ್‌ ಆವೃತ್ತಿಗಳಲ್ಲೂ ಒಂದೇ ಮಾದರಿಯ ಸ್ಪೀಟ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ವೀಂಡ್ ಸ್ಕ್ರೀನ್, ಆರಾಮದಾಯಕವಾದ ಸಿಂಗಲ್ ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್, ಫ್ರಂಟ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಹಾಗೆಯೇ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವ ಒಂದೇ ಸೂರಿನಡಿಯಲ್ಲಿ ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದ್ದು, ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಮೈಲೇಜ್ ಇಂಡಿಕೇಟರ್, ಆರ್‌ಪಿಎಂ ಮೀಟರ್, ಟಾಪ್ ಸ್ಪೀಡ್ ಮೀಟರ್, ಫ್ಯೂಲ್ ಇಂಡಿಕೇಟರ್ ವೀಕ್ಷಿಸಬಹುದಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 10.5-ಬಿಎಚ್‌ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್‌ ಮಾದರಿಯು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 9.3-ಬಿಎಚ್‌ಪಿ, 9.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಗ್ರಾಹಕರು ಹೊಸ ಸ್ಕೂಟರ್‌ಗಳನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಗ್ಲಾಸಿ ರೆಡ್, ಮ್ಯಾಟೆ ಬ್ಲ್ಯೂ, ಗ್ಲಾಸಿ ವೈಟ್ ಮ್ಯಾಟೆ ಬ್ಲ್ಯಾಕ್ ಬಣ್ಣ ಹೊಂದಿದ್ದು, ಸುಜುಕಿ ಬರ್ಗಮನ್ ಸ್ಟ್ರೀಟ್ 125 ಮಾದರಿಗೆ ಉತ್ತಮ ಪೈಪೋಟಿ ನೀಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಎಸ್ಆರ್‌ಎಕ್ಸ್ 125 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಿದ ಎಪ್ರಿಲಿಯಾ

ಆದರೂ ಪ್ರೀಮಿಯಂ ಮಾದರಿಯಾಗಿರುವ ಎಸ್ಎಕ್ಸ್ಆರ್ 125 ಸ್ಕೂಟರ್ ಬೆಲೆಯು ಬರ್ಗಮನ್ ಸ್ಟ್ರೀಟ್ 125 ಮಾದರಿಗಿಂತಲೂ ರೂ. 26 ಸಾವಿರದಷ್ಟು ದುಬಾರಿಯಾಗಿದ್ದು, ಹೊಸ ಫೀಚರ್ಸ್ ಮತ್ತು ಬ್ರಾಂಡ್ ಗುಣಮಟ್ಟದ ಆಧಾರ ಮೇಲೆ ಗ್ರಾಹಕರನ್ನು ಸೆಳೆಯಲಿದೆ.

More from DriveSpark

Article Published On: Thursday, May 13, 2021, 12:41 [IST]
English summary
Aprilia SXR 125 Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+