ಬಿಡುಗಡೆಗೂ ಮುನ್ನವೇ ಎಪ್ರಿಲಿಯಾ ಎಸ್ಎಕ್ಸ್ಆರ್ 125 ಬೆಲೆ ಮಾಹಿತಿ ಬಹಿರಂಗ
ಭಾರತದಲ್ಲಿ ಪ್ರೀಮಿಯಂ ಸ್ಕೂಟರ್‌ಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ವಿವಿಧ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಲ್ಲಿರುವ ತಮ್ಮ ಜನಪ್ರಿಯ ಮ್ಯಾಕ್ಸಿ ಸ್ಕೂಟರ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುತ್ತಿವೆ.

ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಕೂಡಾ ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ನಿರ್ಮಾಣದ ಮೊದಲ ಮ್ಯಾಕ್ಸಿ ಸ್ಕೂಟರ್ ಮಾದರಿಯಾದ ಎಸ್ಎಕ್ಸ್ಆರ್ 160 ಆವೃತ್ತಿಯನ್ನು ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಹೊಸ ಮ್ಯಾಕ್ಸಿ ಸ್ಕೂಟರ್ ಸರಣಿಯಲ್ಲಿ ಮತ್ತೊಂದು ಹೊಸ ಆಯ್ಕೆ ನೀಡಲಾಗುತ್ತಿದೆ.

ಎಸ್ಎಕ್ಸ್ಆರ್ 160 ಆಧರಿಸಿ ನಿರ್ಮಾಣಗೊಂಡಿರುವ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿರುವ ಎಪ್ರಿಲಿಯಾ ಕಂಪನಿಯು ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ ರೂ. 5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ.

ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಎಸ್ಎಕ್ಸ್ಆರ್ 160 ಸ್ಕೂಟರ್‌ಗಿಂತ ರೂ.9 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದ್ದು, ಎಸ್ಎಕ್ಸ್ಆರ್160 ಮ್ಯಾಕ್ಸಿ ಸ್ಕೂಟರ್ ಮಾದರಿಯು ಸದ್ಯ ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 1.26 ಲಕ್ಷ ಬೆಲೆ ಪಡೆದುಕೊಂಡಿದೆ.

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯಲ್ಲಿ ಎಂಜಿನ್ ಆಯ್ಕೆಗೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ದೊಡ್ಡ ಗಾತ್ರದ ವಿನ್ಯಾಸವು ಇತರೆ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚು ಭಿನ್ನವಾಗಿ ಕಾಣಲು ಪ್ರಮುಖ ಕಾರಣವಾಗಿದೆ. ಇದೀಗ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಸಹ ಎಸ್ಎಕ್ಸ್ಆರ್ 160 ಮಾದರಿಯಲ್ಲಿರುವಂತೆ ಹಲವಾರು ವಿನೂತನ ಫೀಚರ್ಸ್ ಹೊಂದಿರಲಿದ್ದು, ಗಾತ್ರದಲ್ಲಿ ಮತ್ತು ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಎರಡು ಸ್ಕೂಟರ್‌ಗಳಲ್ಲಿ ಪ್ರಮುಖ ವ್ಯತ್ಯಾಸಗಳಾಗಿವೆ.

ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್‌ಗಿಂತ ತುಸು ಕಡಿಮೆ ವೀಲ್ಹ್‌ಬೆಸ್ ಹೊಂದಿದ್ದು, ಎಸ್ಎಕ್ಸ್ಆರ್ 160 ಮಾದರಿಯಲ್ಲಿ 160ಸಿಸಿ ಎಂಜಿನ್ ಆಯ್ಕೆ ಹೊಂದಿದ್ದರೆ ಎಸ್ಎಕ್ಸ್ಆರ್ 125 ಮಾಕ್ಸಿ ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ಹೊಂದಿದೆ.

ಮೇಲಿನ ಪ್ರಮುಖ ಎರಡು ವ್ಯತ್ಯಾಸಗಳನ್ನು ಹೊರತುಪಡಿಸಿ ಎರಡು ಸ್ಕೂಟರ್ ಆವೃತ್ತಿಗಳಲ್ಲೂ ಸ್ಪೀಟ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ವೀಂಡ್ ಸ್ಕ್ರೀನ್, ಆರಾಮದಾಯಕವಾದ ಸಿಂಗಲ್ ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯದೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದ್ದು, ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವ ಒಂದೇ ಸೂರಿನಡಿ ನಿಯಂತ್ರಿಸುವ ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿವೆ.

ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಮೈಲೇಜ್ ಇಂಡಿಕೇಟರ್, ಆರ್‌ಪಿಎಂ ಮೀಟರ್, ಅರೇಜ್ ಮತ್ತು ಟಾಪ್ ಸ್ಪೀಡ್ ಮೀಟರ್, ಫ್ಯೂಲ್ ಇಂಡಿಕೇಟರ್ ಜೊತೆ ಕನೆಕ್ಟೆಡ್ ಫೀಚರ್ಸ್‌ಗಳನ್ನು ಸಹ ಜೋಡಿಸಬಹುದು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಆಸಕ್ತ ಗ್ರಾಹಕರಿಗೆ ಹೊಸ ಸ್ಕೂಟರ್‌ಗಳಲ್ಲಿ ಕನೆಕ್ಟೆಡ್ ಫೀಚರ್ಸ್‌ಗಳನ್ನು ಹೆಚ್ಚುವರಿ ಮೊತ್ತಕ್ಕೆ ಅಳವಡಿಸಕೊಳ್ಳಬಹುದಾಗಿದ್ದು, ಕನೆಕ್ಟೆಡ್ ಫೀಚರ್ಸ್ ಇದ್ದಲ್ಲಿ ಸ್ಕೂಟರ್ ಮಾಲೀಕರು ಸ್ಮಾರ್ಟ್ ಫೋನ್ ಮೂಲಕವೇ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಅಪ್ಲೀಕೆಷನ್‌ನಲ್ಲೇ ನಿಯಂತ್ರಣ ಮಾಡಬಹುದಾಗಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 10.5-ಬಿಎಚ್‌ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 9.3-ಬಿಎಚ್‌ಪಿ, 9.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಗ್ರಾಹಕರು ಹೊಸ ಸ್ಕೂಟರ್‌ಗಳನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಗ್ಲಾಸಿ ರೆಡ್, ಮ್ಯಾಟೆ ಬ್ಲ್ಯೂ, ಗ್ಲಾಸಿ ವೈಟ್ ಮ್ಯಾಟೆ ಬ್ಲ್ಯಾಕ್ ಬಣ್ಣ ಹೊಂದಿದೆ. ಸದ್ಯ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಬುಕ್ಕಿಂಗ್ ಆರಂಭಿಸಿರುವ ಎಪ್ರಿಲಿಯಾ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ವಿತರಣೆ ಆರಂಭಿಸಿದೆ.


Click it and Unblock the Notifications








