ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್
ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಪ್ರಿಲಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಸ್ಎಕ್ಸ್ಆರ್ ಸರಣಿಯಲ್ಲಿ ಹೊಸದಾಗಿ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಸ್ಕೂಟರ್ ಸೆಗ್ಮೆಂಟ್ ಮಾದರಿಯಲ್ಲೇ ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಪ್ರೀಮಿಯಂ ಸ್ಕೂಟರ್‌ಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ವಿವಿಧ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಲ್ಲಿರುವ ತಮ್ಮ ಜನಪ್ರಿಯ ಮ್ಯಾಕ್ಸಿ ಸ್ಕೂಟರ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುತ್ತಿವೆ. ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಕೂಡಾ ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ಕೂಡಾ ತನ್ನ ಹೊಸ ಸ್ಕೂಟರ್ ಮಾದರಿಯಾದ ಎಸ್ಎಕ್ಸ್ಆರ್ 125 ಬಿಡುಗಡೆ ಮಾಡುತ್ತಿದೆ.

ಎಸ್ಎಕ್ಸ್ಆರ್ ಸರಣಿಯಲ್ಲಿ ಈಗಾಗಲೇ ಹೊಸದಾಗಿ 160 ಆವೃತ್ತಿಯನ್ನು ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿರುವ ಎಪ್ರಿಲಿಯಾ ಕಂಪನಿಯು ಇದೀಗ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್ ಮುಂದಿನ ಕೆಲವೇ ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಎಸ್ಎಕ್ಸ್ಆರ್ 160 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಖರೀದಿಗಾಗಿ ಎಪ್ರಿಲಿಯಾ ಕಂಪನಿಯು ಈಗಾಗಲೇ ರೂ. 5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದ್ದು, ಹೊಸ ಸ್ಕೂಟರ್ ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿದೆ.

ಆಸಕ್ತ ಗ್ರಾಹಕರಿಗೆ ಕಂಪನಿಯು ಕೋವಿಡ್ ಮಾರ್ಗಸೂಚಿ ಅನ್ವಯ ಟೆಸ್ಟ್ ರೈಡ್ ಒದಗಿಸುತ್ತಿದ್ದು, ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್‌ಗಿಂತಲೂ ತುಸು ಕಡಿಮೆ ವೀಲ್ಹ್‌ಬೆಸ್ ಹೊಂದಿದೆ. ಎಸ್ಎಕ್ಸ್ಆರ್ 160 ಮಾದರಿಯಲ್ಲಿ 160ಸಿಸಿ ಎಂಜಿನ್ ಆಯ್ಕೆ ಹೊಂದಿದ್ದರೆ ಎಸ್ಎಕ್ಸ್ಆರ್ 125 ಮಾಕ್ಸಿ ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ನೀಡಲಾಗಿದೆ.

ಹೊಸ ಸ್ಕೂಟರ್ ಮಾದರಿಯಲ್ಲಿ ಎಂಜಿನ್ ಮತ್ತು ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಎರಡು ಸ್ಕೂಟರ್ ಆವೃತ್ತಿಗಳಲ್ಲೂ ಒಂದೇ ಮಾದರಿಯ ಸ್ಪೀಟ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ವೀಂಡ್ ಸ್ಕ್ರೀನ್, ಆರಾಮದಾಯಕವಾದ ಸಿಂಗಲ್ ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯದೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹಾಗೆಯೇ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವ ಒಂದೇ ಸೂರಿನಡಿಯಲ್ಲಿ ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದ್ದು, ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಮೈಲೇಜ್ ಇಂಡಿಕೇಟರ್, ಆರ್‌ಪಿಎಂ ಮೀಟರ್, ಅರೇಜ್ ಮತ್ತು ಟಾಪ್ ಸ್ಪೀಡ್ ಮೀಟರ್, ಫ್ಯೂಲ್ ಇಂಡಿಕೇಟರ್ ವೀಕ್ಷಿಸಬಹುದಾಗಿದೆ.
ಜೊತೆಗೆ ಆಸಕ್ತ ಗ್ರಾಹಕರು ಕನೆಕ್ಟೆಡ್ ಫೀಚರ್ಸ್‌ಗಳನ್ನು ಸಹ ಜೋಡಿಸಬಹುದಾಗಿದ್ದು, ಹೊಸ ಸ್ಕೂಟರ್ ಫೀಚರ್ಸ್‌ಗಳ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 10.5-ಬಿಎಚ್‌ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 9.3-ಬಿಎಚ್‌ಪಿ, 9.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಗ್ರಾಹಕರು ಹೊಸ ಸ್ಕೂಟರ್‌ಗಳನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಗ್ಲಾಸಿ ರೆಡ್, ಮ್ಯಾಟೆ ಬ್ಲ್ಯೂ, ಗ್ಲಾಸಿ ವೈಟ್ ಮ್ಯಾಟೆ ಬ್ಲ್ಯಾಕ್ ಬಣ್ಣ ಹೊಂದಿದೆ. ಸದ್ಯ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಬುಕ್ಕಿಂಗ್ ಆರಂಭಿಸಿರುವ ಎಪ್ರಿಲಿಯಾ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ವಿತರಣೆ ಆರಂಭಿಸಿದ್ದು, ಹೊಸ ಸ್ಕೂಟರ್ ಬೆಲೆಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 1.16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








