Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ Pulsar NS160 ಮತ್ತು Pulsar 150 SD ಬೈಕ್‌ಗಳ ಮೇಲೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಈ Pulsar ಬೈಕ್‌ಗಳ ಮೇಲೆ ಕಡಿಮೆ ಡೌನ್ ಪೇಮೆಂಟ್ ಯೋಜನೆಯನ್ನು ಕೂಡ ನೀಡುತ್ತಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

20 ವರ್ಷಗಳ "Pulsar ಮೇನಿಯಾ" ಸಂಭ್ರಮಕ್ಕಾಗಿ ಬಜಾಜ್ ಆಟೋ ಕಂಪನಿಯು Pulsar NS160 and Pulsar 150 SD ಬೈಕ್‌ಗಳ ಖರೀದಿ ಮೇಲೆ ರೂ.4,000 ನಗದು ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ರೂ.18,348 ಕಡಿಮೆ ಡೌನ್ ಪೇಮೆಂಟ್ ಯೋಜನೆಯನ್ನು ಸಹ ನೀಡುತ್ತಿದೆ. ಈ ಎರಡೂ ಆಫರ್ ಗಳ ಮೇಲೆ ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆದ್ದರಿಂದ, ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಅಧಿಕೃತ ಬಜಾಜ್ ಆಟೋ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಈ ಆಫರ್ ಗಳು ಸೀಮಿತ ಅವಧಿಯವರೆಗೂ ಮಾತ್ರ ಲಭ್ಯವಿರುತ್ತದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇದರಲ್ಲಿ Pulsar NS160 ಬೈಕ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ಇದರ ಬೆಲೆಯು ರೂ,1,15,091 ಗಳಾಗಿದೆ. ಈ ಬೈಕ್ ಮೆಟಾಲಿಕ್ ಪರ್ಲ್ ವೈಟ್, ಬರ್ನ್ಡ್ ರೆಡ್ ಮತ್ತು ಪ್ಯೂಟರ್ ಗ್ರೇ ಎಂಬ ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿದೆ ಇನ್ನು ಈ ಬೈಕ್ ಬೈಕ್ 2017 ಎಂಎಂ ಉದ್ದ, 804 ಎಂಎಂ ಅಗಲ, 1060 ಎಂಎಂ ಎತ್ತರ ಮತ್ತು 1372 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Pulsar NS160 ಬೈಕಿನಲ್ಲಿ 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ ಹೆಚ್ಚಿನ ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಈ ಎಂಜಿನ್ 9,000 ಆರ್‍‍ಪಿಎಂನಲ್ಲಿ 17.2 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Pulsar NS160 ಬೈಕಿನ ವಿನ್ಯಾಸವು Pulsar NS1200 ಬೈಕಿನ ಮಾದರಿಯಂತಿದೆ. ಹೊಸ ಪಲ್ಸರ್ ಎನ್‍ಎಸ್160 ಬೈಕ್ ಅಗ್ರೆಸಿವ್ ಲುಕ್ ನೊಂದಿಗೆ ಈ ಬೈಕಿನ ವಿನ್ಯಾಸವು ಆಕರ್ಷಕವಾಗಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಷನ್ ಹೊಂದಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂನಲ್ಲಿ 260 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಡಂರ್ಡ್ ಆಗಿ ಅಳವಡಿಸಲಾಗಿದೆ. ಬಿಎಸ್-6 ಪಲ್ಸರ್ ಎನ್‍ಎಸ್ 160 ಬೈಕ್ ಪೋಸಿಲ್ ಗ್ರೇ, ವೈಲ್ಡ್ ರೆಡ್ ಮತ್ತು ಸ್ಯಾಫೈರ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Pulsar NS160 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ 160 ಜಿಕ್ಸರ್, ಯಮಹಾ ಎಫ್‍‍ಝಡ್ 160 4ವಿ ಮತ್ತು ಹೀರೋ ಎಕ್ಸ್‌ಟ್ರೀಮ್‌ 160ಆರ್‍ ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು Pulsar 150 SD ಬೈಕ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ಈ ಬೈಕಿನ ಬೆಲೆಯು ರೂ,1,04,365 ಗಳಾಗಿದೆ, ಈ ಬೈಕಿನಲ್ಲಿ 150 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ವಾಲ್ವ್ ಏರ್-ಕೂಲ್ಡ್ ಹೊಂದಿರುವ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 13.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮಾದರಿಯು ಬಜಾಜ್ ಆಟೋದ ಪೇಟೆಂಟ್ ಪಡೆದ ಡಿಟಿಎಸ್-ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ತಂತ್ರಜ್ಞಾನವನ್ನು ಹೊಂದಿದ್ದು, ಇದು ಬೈಕ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Pulsar 150 SD ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲಿ ಟ್ವಿನ್ ಶಾಕ್ ಅಬ್ಸಾರ್‍‍ಬರ್‍‍ಗಳನ್ನು ಒದಗಿಸಲಾಗಿದ್ದು, ಜೊತೆಗೆ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡ್ರಂ ಬ್ರೇಕ್‍ಗಳನ್ನು ನೀಡಲಾಗಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಈ ಅಂಕಿ ಅಂಶಗಳ ಪ್ರಕಾರ,ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 1,57,971 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ದ್ವಿಚಕ್ರ ವಾಹನ ಮಾರಾಟ ಪ್ರಮಾಣವು 11% ನಷ್ಟು ಇಳಿಕೆಯಾಗಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು 2020ರ ಆಗಸ್ಟ್‌ ತಿಂಗಳಿನಲ್ಲಿ ಬಜಾಜ್ ಆಟೋ ಕಂಪನಿಯು 1,78,220 ಯುನಿಟ್ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು. ರಫ್ತಿನ ಬಗ್ಗೆ ಹೇಳುವುದಾದರೆ ಕಂಪನಿಯ ರಫ್ತು ಪ್ರಮಾಣವು 26% ನಷ್ಟು ಹೆಚ್ಚಾಗಿದೆ. ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು ಒಟ್ಟು 1,80,339 ಯುನಿಟ್ ದ್ವಿಚಕ್ರ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

Pulsar NS160, Pulsar 150 SD ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಮೊದಲ Pulsar ಬೈಕ್ ಅನ್ನು 2003ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಕಂಪನಿಯು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕ್‌ಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ತರಲಾಗುತ್ತಿದ್ದು, ಇದಕ್ಕಾಗಿ Pulsar ಸರಣಿಯ ಬೈಕ್‌ಗಳ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಈ Pulsar ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿವೆ,

Most Read Articles

Kannada
English summary
Bajaj auto announced rs 4 000 cash benefit on pulsar ns160 and pulsar 150 sd details
Story first published: Tuesday, September 7, 2021, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X