Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳಿನಲ್ಲಿ 56%ನಷ್ಟು ಏರಿಕೆಯಾದ ಬಜಾಜ್ ಕಂಪನಿಯ ಬೈಕ್ ಮಾರಾಟ
ಬಜಾಜ್ ಆಟೋ ಕಂಪನಿಯು 2021ರ ಮಾರ್ಚ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಪುಣೆ ಮೂಲದ ಬೈಕ್ ತಯಾರಕ ಕಂಪನಿಯಾದ ಬಜಾಜ್ ಮಾರ್ಚ್ ತಿಂಗಳಿನಲ್ಲಿ ಒಟ್ಟು 3,30,133 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಈ ಪ್ರಮಾಣವು ಕಳೆದ ವರ್ಷದ ಮಾರ್ಚ್ ತಿಂಗಳಿಗೆ ಹೋಲಿಸಿದರೆ 56%ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಕಂಪನಿಯು ಒಟ್ಟು 2,10,976 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಒಟ್ಟು 98,412 ಯುನಿಟ್ ವಾಹನಗಳನ್ನು ಮಾಡಲಾಗಿತ್ತು.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 1,81,393 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ರಫ್ತು ಅಂಕಿ ಅಂಶಗಳ ಬಗ್ಗೆ ಹೇಳುವುದಾದರೆ, ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳು 1,48,740 ಯುನಿಟ್‌ಗಳನ್ನು ರಫ್ತು ಮಾಡಿದೆ.
MOST READ: ನಿರ್ವಹಣಾ ವೆಚ್ಚ ತಗ್ಗಿಸಲು ವಾಣಿಜ್ಯ ವಾಹನಗಳಿಗಾಗಿ ಹೊಸ ಎಂಜಿನ್ ಪರಿಚಯಿಸಿದ ಟಾಟಾ ಮೋಟಾರ್ಸ್

ಕಳೆದ ವರ್ಷ ಮಾರ್ಚ್‌ನಲ್ಲಿ 1,12,564 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಬೈಕುಗಳ ರಫ್ತು ಪ್ರಮಾಣವು 32%ನಷ್ಟು ಹೆಚ್ಚಾಗಿದೆ. ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು 2020ರ ಮಾರ್ಚ್'ನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ವರದಿ ಮಾಡಿದೆ.

ಲಾಕ್‌ಡೌನ್'ನಿಂದಾಗಿ ಎಲ್ಲಾ ವ್ಯವಹಾರ ಚಟುವಟಿಕೆಗಳು ತಿಂಗಳುಗಟ್ಟಲೇ ಸ್ಥಗಿತವಾಗಿದ್ದವು. ಬಜಾಜ್ ಸೇರಿದಂತೆ ಎಲ್ಲಾ ವಾಹನ ತಯಾರಕ ಕಂಪನಿಗಳಿಗೆ ಕಳೆದ ವರ್ಷದ ಮಾರ್ಚ್‌ನಲ್ಲಿ ಕೆಲವು ದಿನಗಳವರೆಗೆ ಮಾತ್ರ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿತ್ತು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2020ರ ವರ್ಷವು ಭಾರತದ ಆಟೋ ಮೊಬೈಲ್ ಉದ್ಯಮಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಸವಾಲಿನ ವರ್ಷವಾಗಿತ್ತು. ವರ್ಷದಿಂದ ವರ್ಷದ ಮಾರಾಟದ ಬಗ್ಗೆ ಹೇಳುವುದಾದರೆ ಬಜಾಜ್ ಆಟೋ 2019-20ರ ಆರ್ಥಿಕ ವರ್ಷದಲ್ಲಿ 39,47,568 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

2020-21ರ ಆರ್ಥಿಕ ವರ್ಷದಲ್ಲಿ 36,05,893 ಯುನಿಟ್ ವಾಹನಗಳು ಮಾರಾಟವಾಗಿವೆ. ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ ಬಜಾಜ್ ಆಟೋ ಕಂಪನಿಯ ಮಾರಾಟವು 9%ನಷ್ಟು ಕುಸಿದಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಹಣಕಾಸು ವರ್ಷದಲ್ಲಿ ಮಾರಾಟವನ್ನು ಹೆಚ್ಚಿಸಲು ಬಜಾಜ್ ಕಂಪನಿಯು ಅಪ್ ಡೇಟ್ ಮಾಡಲಾದ ಪಲ್ಸರ್ 220 ಎಫ್, ಪಲ್ಸರ್ 150 ಹಾಗೂ ಪಲ್ಸರ್ 250 ಸೇರಿದಂತೆ ಹಲವು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ.

ಬಜಾಜ್ ಕಂಪನಿಯು ಕಳೆದ ತಿಂಗಳು ಪ್ಲಾಟಿನಾ 100 ಇಎಸ್ ಹಾಗೂ 100 ಸಿಸಿ ಪ್ಲಾಟಿನಾ ಬೈಕುಗಳನ್ನು ಅಪ್ ಡೇಟ್ ಮಾಡಿದೆ. ಇದರ ಜೊತೆಗೆ ಕಂಪನಿಯು ಪಲ್ಸರ್ 150 ಹಾಗೂ ಪಲ್ಸರ್ 180 ಬೈಕುಗಳನ್ನು ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪನಿಯು ಇತ್ತೀಚೆಗೆ ಹೊಸ ಪಲ್ಸರ್ 200 ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ. ಈ ಬೈಕ್ ಸಹ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಈಗ ಪಲ್ಸರ್ 250 ಬೈಕ್ ಅನ್ನು ಪರೀಕ್ಷಿಸಲಾಗುತ್ತಿದೆ.

ಪಲ್ಸರ್ 250, ಪಲ್ಸರ್ ಸರಣಿಯಲ್ಲಿರುವ ಶಕ್ತಿಶಾಲಿ ಬೈಕ್ ಆಗಿರಲಿದೆ. ಮೂಲಗಳ ಪ್ರಕಾರ ಕಂಪನಿಯು ಹಬ್ಬದ ಸಮಯದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸುವಸಾಧ್ಯತೆಗಳಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಪಲ್ಸರ್ 250 ಬೈಕ್ ಹೊಚ್ಚ ಹೊಸ ಎಂಜಿನ್ ಹೊಂದಿರಲಿದೆ. ಈ ಬೈಕಿನಲ್ಲಿರುವ ಎಂಜಿನ್ ಅನ್ನು ಗಾಳಿಯಿಂದ ತಂಪಾಗಿಸಲಾಗುವುದು. ಈ ಎಂಜಿನ್'ನಲ್ಲಿ 4 ವಾಲ್ವ್ ಟೆಕ್ನಾಲಜಿಯನ್ನು ಬಳಸಲಾಗುವುದಿಲ್ಲವೆಂದು ಹೇಳಲಾಗಿದೆ.