ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಜಾಜ್ ಪಲ್ಸರ್ 250 ಬೈಕ್
ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಬಜಾಜ್ ಕಂಪನಿಯು ಭಾರತದಲ್ಲಿ ಪಲ್ಸರ್ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ.

ಕಂಪನಿಯು ಪಲ್ಸರ್ ಬ್ರಾಂಡ್‌ನ 20ನೇ ವಾರ್ಷಿಕೋತ್ಸವವನ್ನು ಬರುವ ನವೆಂಬರ್‌ನಲ್ಲಿ ಆಚರಿಸಲಿದೆ. ಇದೇ ಸಂದರ್ಭದಲ್ಲಿ ಬಜಾಜ್ ಪಲ್ಸರ್ 250ಎಫ್ ಬೈಕನ್ನು ಬಿಡುಗಡೆಗೊಳಿಸಬಹುದು. ಹೊಸ ಪಲ್ಸರ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲು ಬಜಾಜ್ ಆಟೋ ಸಿದ್ಧವಾಗಿದೆ. ವರದಿಗಳ ಪ್ರಕಾರ, ಬಜಾಜ್ ಆಟೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಮಾತನಾಡಿ, ಹೊಸ ಪ್ಲಾಟ್‌ಫಾರ್ಮ್ ನೊಂದಿಗೆ ಕಂಪನಿಯು ಮಾಡಿದ ಅತ್ಯಂತ ದೊಡ್ಡ ಪಲ್ಸರ್ ಬಿಡುಗಡೆಯಾಗಲಿದೆ.ಭವಿಷ್ಯದಲ್ಲಿ ಇದು ಅತ್ಯಂತ ಪ್ರಮುಖವಾದ ಮಾದರಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಮುಂಬರುವ ಪ್ಲಸರ್ ಮಾದರಿಯ ಹೆಸರು ಮತ್ತು ವಿವರಗಳನ್ನು ಅವರು ಬಹಿರಂಗಪಡಿಸದಿದ್ದರೂ, ಇದು ಹೊಸ 2021ರ ಬಜಾಜ್ ಪಲ್ಸರ್ 250 ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ವರ್ಷ ಎಲ್ಲಾ ಹೊಸ ಪಲ್ಸರ್ ಮಾದರಿಗಳನ್ನು ಬಿಡುಗಡೆ ಮಾಡುವುದರ ಹೊರತಾಗಿ, ಬ್ರ್ಯಾಂಡ್ ಮಾದರಿಗಳ ಮೇಲೆಯು ಹೆಚ್ಚು ಗಮನಹರಿಸುತ್ತಿದೆ. ಬಜಾಜ್ ತನ್ನ ಪ್ರತ್ಯೇಕ ಇವಿ ಸಬ್-ಬ್ರಾಂಡ್ ಅನ್ನು ಪ್ರಾಯೋಗಿಕ ಮತ್ತು ಪರಿಣಾಮಕಾರಿ ಮಾದರಿಗಳನ್ನು ಉತ್ಪಾದಿಸಲು ಬಳಸುತ್ತದೆ

ಬಜಾಜ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳು, ಮೋಟಾರ್‌ಸೈಕಲ್‌ಗಳು, 3 ಚಕ್ರಗಳು ಮತ್ತು 4 ಚಕ್ರಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ನಂತರದ ಭಾಗವನ್ನು ವಾಣಿಜ್ಯ ವಾಹನ ಸ್ಪೆಕ್ಟ್ರಮ್‌ಗೆ ಗುರಿಪಡಿಸಲಾಗುವುದು. ಈ ವರ್ಷದ ಜುಲೈನಲ್ಲಿ ಇವಿಗಳ ಅಭಿವೃದ್ಧಿಗಾಗಿ ಹೊಸ ಸಬ್-ಬ್ರಾಂಡ್‌ಗಾಗಿ ಬ್ರಾಂಡ್ ಅನುಮೋದನೆಗಳಿಗೆ ಸಹಿ ಹಾಕಿದೆ.

ಬಜಾಜ್ ಆಟೋ ತನ್ನ ಹೊಸ ಪಲ್ಸರ್ 250 ಬೈಕನ್ನು ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ ಬೈಕ್‌ಗಳಿಗಾಗಿ ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸುತ್ತಿದೆ. ಹೊಸ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹೊಚ್ಚ ಹೊಸ ಪಲ್ಸರ್ 250 ಮಾದರಿಯು ಪಾದಾರ್ಪಣೆ ಮಾಡಲಿದೆ.

ಹೊಸ ಬಜಾಜ್ ಪಲ್ಸರ್ ಬೈಕ್ ಭಾರತದಲ್ಲಿ ಬೈಕ್ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಸ್ಪೈ ಚಿತ್ರಗಳಿಂದ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಈ ಹೊಸ ಬೈಕ್ ಹೆಡ್‌ಲ್ಯಾಂಪ್ ವಿಭಾಗದ ಪಕ್ಕದಲ್ಲಿರುವ ಕ್ವಾರ್ಟರ್ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಫೇರಿಂಗ್-ಮೌಂಟೆಡ್ ರಿಯರ್-ವ್ಯೂ ಮಿರರ್ಸ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಈ ಹೊಸ ಪಲ್ಸರ್ ಬೈಕಿನಲ್ಲಿ ಗ್ರ್ಯಾಬ್ ರೈಲ್ ಮತ್ತು ವಿಭಿನ್ನ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಪಡೆಯುತ್ತದೆ. ಇನ್ನು ಅಲಾಯ್ ವ್ಹೀಲ್ಸ್, ಟೈರ್ ಹಗ್ಗರ್, ಡಿಸ್ಕ್ ಬ್ರೇಕ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿದೆ. ಇನ್ನು ಈ ಹೊಸ ಪಲ್ಸರ್ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಮುಂಬರುವ ಬಜಾಜ್ ಪಲ್ಸರ್ 250 ಹೊಚ್ಚಹೊಸ 250 ಸಿಸಿ ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ.

ಈ ಎಂಜಿನ್ ಸುಮಾರು 24 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಬೈಕಿನಲ್ಲಿ ಸ್ಪ್ಲಿಟ್ ಸೀಟುಗಳನ್ನು ಸಹ ಹೊಂದಿರುತ್ತದೆ, ಈ ಸೆಮಿ-ಫೇರ್ಡ್ ಬೈಕ್ ಸ್ವಲ್ಪ ಸ್ಪೋರ್ಟಿನೆಸ್ ಲುಕ್ ಅನ್ನು ಹೊಂದಿರುತ್ತದೆ.

2021ರ ಬಜಾಜ್ ಪಲ್ಸರ್ 250ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆಕ್ಸಲ್ಗಳಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಓಳಗೊಂಡಿರುತ್ತದೆ.

ಇತ್ತೀಚೆಗೆ ಬಜಾಜ್ ಡೋಮಿನಾರ್ 250 ಬೈಕ್ ಕೂಡ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಹೊಸ ಬಜಾಜ್ ಡೋಮಿನಾರ್ 250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್, ರೇಸಿಂಗ್ ರೆಡ್ ಮತ್ತು ಮ್ಯಾಟ್ ಸಿಲ್ವರ್, ಮತ್ತು ಸಿಟ್ರಸ್ ರಶ್ ಮತ್ತು ಮ್ಯಾಟ್ ಸಿಲ್ವರ್ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯನು ಪಡೆದುಕೊಂಡಿದೆ. ಇನ್ನು ಈಗಗಾಲೇ ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾನ್ಯನ್ ರೆಡ್ ಮತ್ತು ಚಾರ್ಕೋಲ್ ಬ್ಲಾಕ್ ಬಣ್ಣಗಳ ಆಯ್ಕೆಯ ಮಾದರಿಗಳು ಲಭ್ಯವಿದೆ.

ಈ ಹೊಸ ಡೋಮಿನಾರ್ 250 ಬೈಕ್ ಅಲಾಯ್ ವ್ಹೀಲ್ ಗಳ ವಿನ್ಯಾಸವು ಕ್ವಾರ್ಟರ್-ಲೀಟರ್ ಬೈಕಿನಲ್ಲಿರುವ ಫಿನಿಶ್‌ನಂತೆಯೇ ಉಳಿದಿದೆ. ಎಂಜಿನ್ ಗಾರ್ಡ್, ಇಂಧನ ಟ್ಯಾಂಕ್ ಮತ್ತು ವಿಸ್ತರಣೆಗಳು, ಸೈಡ್ ಪ್ಯಾನಲ್‌ಗಳು, ಮುಂಭಾಗದ ಕೌಲ್ ಪ್ರದೇಶ, ಇತ್ಯಾದಿಗಳನ್ನು ಕೆಂಪು, ಕಪ್ಪು ಅಥವಾ ಹಸಿರು ಬಣ್ಣದಲ್ಲಿದೆ.

2021ರ ಬಜಾಜ್ ಪಲ್ಸರ್ 250ಎ ಬೈಕಿನ ಬೆಲೆಯು ಸುಮಾರು ರೂ.1.32 ಲಕ್ಷದಿಂದ ರೂ.1.34 ಲಕ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಬೈಕ್ ಶೀಘ್ರದಲ್ಲೇ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಬಜಾಜ್ ಪಲ್ಸರ್ 250 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಕ್ಸರ್ 250, ಯಮಹಾ ಎಫ್‌ಜೆಡ್ -25 ಮತ್ತು ಕೆಟಿಎಂ ಡ್ಯೂಕ್ 250 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








