ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯಲ್ಲಿರುವ ಜನಪ್ರಿಯ ದ್ವಿಚಕ್ರ ವಾಹನಗಳ ಬೆಲೆಯನ್ನು ಪರಿಷ್ಕರಿಸಿದೆ. ಇದರಲ್ಲಿ ಬಜಾಜ್ ಅವೆಂಜರ್ 160 ಸ್ಟ್ರೀಟ್ ಮತ್ತು ಅವೆಂಜರ್ 220 ಕ್ರೂಸ್ ಬೈಕ್‌ಗಳು ಕೂಡ ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಅವೆಂಜರ್ 160 ಸ್ಟ್ರೀಟ್ ಮತ್ತು ಅವೆಂಜರ್ 220 ಕ್ರೂಸ್ ಬೈಕ್‌ಗಳು ತುಸು ದುಬಾರಿಯಾಗಿದೆ. ಬೆಲೆ ಏರಿಕೆಯಾದ ಬಳಿಕ ಇದೀಗ, ಬಜಾಜ್ ಅವೆಂಜರ್ 220 ಕ್ರೂಸ್ ಬೈಕಿನ ಬೆಲೆಯು ರೂ.1,31,046 ಗಳಾದರೆ, ಅವೆಂಜರ್ 160 ಸ್ಟ್ರೀಟ್ ಬೈಕಿನ ಬೆಲೆಯು ರೂ.1,07,30 ಗಳಾಗಿದೆ. ಈ ಎಲ್ಲಾ ಬೆಲೆಗಳು ಹೈದರಾಬಾದ್ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಬೈಕ್‌ಗಳ ಬೆಲೆಯನ್ನು ಹೊರತುಪಡಿಸಿ ಇತರ ಬದಲಾವಣೆಗಳಿಲ್ಲ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಇದರಲ್ಲಿ ಬಜಾಜ್ ಅವೆಂಜರ್ 160 ಸ್ಟ್ರೀಟ್ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನಲ್ಲಿ ಸಹ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಹೊಸ ಅವೆಂಜರ್ 160 ಸ್ಟ್ರೀಟ್ ಬೈಕಿನಲ್ಲಿರುವ ಎಂಜಿನ್ 14.8 ಬಿಹೆಚ್‌ಪಿ ಪವರ್ ಹಾಗೂ 13.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ ನೊಂದಿಗೆ 5-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಬಜಾಜ್ ಅವೆಂಜರ್ ಕ್ರೂಸ್ 220 ಬೈಕಿನಲ್ಲಿ 220 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.7 ಬಿಹೆಚ್‌ಪಿ ಪವರ್ ಹಾಗೂ 7,000 ಆರ್‌ಪಿಎಂನಲ್ಲಿ 17.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಈ ಬೈಕಿನಲ್ಲಿ ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಅವೆಂಜರ್ ಕ್ರೂಸ್ 220 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಇದರೊಂದಿಗೆ ಬಜಾಜ್ ಕಂಪನಿಯು ಡೊಮಿನಾರ್ 250 ಬೈಕಿನ ಬೆಲೆಯನ್ನು ಕಂಪನಿಯು ಗಣನೀಯವಾಗಿ ಕಡಿಮೆಗೊಳಿಸಿದೆ. ಇದೀಗ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯು ರೂ.1,704,176 ಗಳಿಂದ ರೂ.1,70,976 ಗಳಾಗಿದೆ. ಈ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯನ್ನು ರೂ.19,000 ಗಳವರೆಗೆ ಇಳಿಸಿದೆ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಆದರೆ ಬಜಾಜ್ ಡೋಮಿನಾರ್ 400 ಬೈಕಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಬಜಾಜ್ ಡೋಮಿನಾರ್ 400 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2,11,572 ಗಳಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಅವೆಂಜರ್ ಬೈಕ್‌ಗಳು

ಬಜಾಜ್ ಆಟೋ ಕಂಪನಿಯು ಬಿಎಸ್-6 ಅವೆಂಜರ್ 160 ಸ್ಟ್ರೀಟ್ ಮತ್ತು ಅವೆಂಜರ್ 220 ಕ್ರೂಸ್ ಬೈಕ್‌ಗಳ ಬೆಲೆಯನ್ನು ಹಲವು ಬಾರಿಗೆ ಹೆಚ್ಚಿಸಲಾಗಿದೆ. ಈ ಬೈಕುಗಳ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.

Article Published On: Thursday, July 8, 2021, 13:44 [IST]
English summary
Bajaj Auto Hikes Prices Of Avenger 220 Cruise and 160 Street. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+