ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

Bajaj Auto ಕಂಪನಿಯು ತನ್ನ Pulsar 250 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.38 ಲಕ್ಷಗಳಾಗಿದೆ. Bajaj Auto ಕಂಪನಿಯು ಮೊದಲ Pulsar ಬೈಕ್ ಅನ್ನು 20 ವರ್ಷಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈಗ ಈ ಬೈಕ್ ಅನ್ನು ಹೊಸ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಹೊಸ Pulsar ಬೈಕ್ ಅನ್ನು F 250 ಹಾಗೂ N 250 ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.40 ಲಕ್ಷಗಳಾಗಿದೆ. Bajaj Pulsar 250 ಬೈಕಿನ ಮಾರಾಟವನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. Bajaj Pulsar 250 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಹೊಸ ಅವತಾರದಲ್ಲಿ ಆಕರ್ಷಕವಾಗಿ ಕಾಣುತ್ತದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕ್ ಅನ್ನು ಟ್ಯೂಬ್‌ಲೆಸ್ ಫ್ರೇಮ್ ಚಾಸಿಸ್‌ನಲ್ಲಿ ನಿರ್ಮಿಸಲಾಗಿದೆ. ಕಂಪನಿಯು ಈಗಾಗಲೇ ಇದನ್ನು ಏರೋಡೈನಾಮಿಕ್ ಮಾಡಿದೆ. ಇವುಗಳಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್ ಲೈಟ್, ಆಕರ್ಷಕ ವಿನ್ಯಾಸವಾದ ಎಲ್‌ಇಡಿ ಡಿಆರ್‌ಎಲ್ ಗಳನ್ನು ನೀಡಲಾಗಿದೆ. ಇವುಗಳ ಮುಂಭಾಗದ ಭಾಗಕ್ಕೆ ಆಕ್ರಮಣಕಾರಿ ನೋಟವನ್ನು ನೀಡಲಾಗಿದೆ. ಮುಖ್ಯ ಹೆಡ್‌ಲೈಟ್‌ನ ಎರಡೂ ಬದಿಗಳಲ್ಲಿ ಲೈಟ್ ಗಳನ್ನು ನೀಡಲಾಗಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕಿನ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಟ್ಯಾಕೋಮೀಟರ್ ನೀಡಲ್ ಅನ್ನು ಹಳೆಯ ಮಾದರಿಯಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಡಿಜಿಟಲ್ ಪರದೆಯನ್ನು ಸಹ ಕಾಣಬಹುದು. ಈ ಪರದೆಯು ರೇಂಜ್, ಗೇರ್ ಪೊಸಿಷನ್, ಡಿಸ್ಟೆನ್ಸ್ ಟು ಎಂಪ್ಟಿ ಮಾಹಿತಿಯನ್ನು ಒದಗಿಸುತ್ತದೆ. ಈ ಬೈಕಿನಲ್ಲಿ ಮೊಬೈಲ್ ಚಾರ್ಜಿಂಗ್ ಗಾಗಿ ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕ್ 14 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದ್ದು, 795 ಎಂಎಂ ಎತ್ತರದ ಸೀಟ್ ನೀಡಲಾಗಿದೆ. Bajaj Auto ಕಂಪನಿಯು ಈ ಬೈಕ್‌ನಲ್ಲಿ 250 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 24.5 ಬಿಹೆಚ್‌ಪಿ ಪವರ್ ಹಾಗೂ 21.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕಿನಲ್ಲಿ ಅಳವಡಿಸಿರುವ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹೊಸ ಮೊನೊಶಾಕ್ ಸಸ್ಪೆಂಷನ್ ಗಳು ಆರಾಮದಾಯಕ ಸವಾರಿಯನ್ನು ಒದಗಿಸುತ್ತವೆ. ಹೊಸ ಬೈಕಿನಲ್ಲಿ ಬೈಕ್ ಅಸಿಸ್ಟ್, ಸ್ಲೀಪರ್ ಕ್ಲಚ್‌ಗಳನ್ನು ನೀಡಲಾಗಿದೆ. ಇವುಗಳು ವೇಗವಾದ ಗೇರ್‌ಶಿಫ್ಟ್‌ಗಳಿಗೆ ನೆರವಾಗುತ್ತವೆ. ಬ್ರೇಕಿಂಗ್‌ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗಿದೆ. ಈ ಬೈಕ್ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. Bajaj Pulsar 250 ಬೈಕಿನ ಮುಂಭಾಗದಲ್ಲಿ 100/80 ಪ್ರೊಫೈಲ್ ಟಯರ್‌ ಹಾಗೂ 17 ಇಂಚಿನ ವ್ಹೀಲ್ ಹೊಂದಿರುವ 130/70 ಟಯರ್ ಗಳನ್ನು ನೀಡಲಾಗಿದೆ. ಕಂಪನಿಯು ಈ ಬೈಕ್ ಅನ್ನು ಟೆಕ್ನೋ ಗ್ರೇ ಹಾಗೂ ರೇಸಿಂಗ್ ರೆಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕ್ ಈಗ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಆಧುನಿಕ ನೋಟ ಹಾಗೂ ಫೀಚರ್ ಗಳನ್ನು ಹೊಂದಿದೆ. ವಿವಿಧ ಗ್ರಾಹಕ ವಿಭಾಗಗಳಿಗಾಗಿ ಫೇರಿಂಗ್ ಹಾಗೂ ನಾನ್ ಫೇರಿಂಗ್ ಲುಕ್‌ಗಳನ್ನು ನೀಡಲಾಗಿದೆ. Bajaj Pulsar 250 ಬೈಕಿನ 18 ಮಿಲಿಯನ್ ಯುನಿಟ್‌ಗಳನ್ನು ಇದುವರೆಗೆ ವಿಶ್ವದಾದ್ಯಂತ ಮಾರಾಟ ಮಾಡಲಾಗಿದೆ. ಈ ಬೈಕ್ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿದೆ. Pulsar ಬೈಕ್ ಪ್ರಪಂಚದಾದ್ಯಂತ 50 ದೇಶಗಳಲ್ಲಿ ಕಂಪನಿಯ ಅತ್ಯಂತ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

1990ರ ದಶಕದ ಉತ್ತರಾರ್ಧದಲ್ಲಿ ಹಾಗೂ 21ನೇ ಶತಮಾನದ ಆರಂಭದಲ್ಲಿ Bajaj ಹಾಗೂ Kawasaki ಕಂಪನಿಗಳು ಭಾರತದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದವು. ಈ ಸಹಭಾಗಿತ್ವದಲ್ಲಿ ಕೆಲವು ಜನಪ್ರಿಯ ಕಮ್ಯೂಟರ್ ಬೈಕ್‌ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಅವುಗಳಲ್ಲಿ Bajaj ಕ್ಯಾಲಿಬರ್ ಬೈಕ್ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಬೈಕ್ ಅನ್ನು 1998 ರಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕ್ ಹೂಡಿಬಾಬಾ ಎಂಬ ಟ್ಯಾಗ್‌ಲೈನ್ ಹೊಂದಿದ್ದ ಟಿವಿ ಜಾಹೀರಾತನ್ನು ಹೊಂದಿತ್ತು. Bajaj Auto ಕಂಪನಿಯು ಇತ್ತೀಚೆಗೆ ಕ್ಯಾಲಿಬರ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಇದರಿಂದ ಕ್ಯಾಲಿಬರ್ ಮಾದರಿಯು ಮತ್ತೆ ದೇಶಿಯ ಮಾರುಕಟ್ಟೆಗೆ ಮರಳ ಬಹುದು ಎಂಬ ನಿರೀಕ್ಷೆ ಮೂಡಿದೆ. ಕ್ಯಾಲಿಬರ್ 115 ಬೈಕ್ ಭಾರತೀಯ ಹಾಗೂ ಜಪಾನೀಸ್ ಬೈಕ್ ತಯಾರಕ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ 111.6 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿತ್ತು.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಎಂಜಿನ್ 9.5 ಬಿಹೆಚ್‌ಪಿ ಪವರ್ ಮತ್ತು 9.10 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. ಈ ಎಂಜಿನ್ ಅನ್ನು 4 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿತ್ತು. ಈ ಬೈಕ್ 102 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿತ್ತು. ಆದರೆ ಈ ಬೈಕ್ ಭಾರತೀಯ ಗ್ರಾಹಕರು ಸಾಮಾನ್ಯವಾಗಿ ಬಯಸುವ ಮೈಲೇಜ್ ನೀಡಲು ವಿಫಲವಾದ ಕಾರಣ ಮಾರಾಟದಲ್ಲಿ ಹೆಚ್ಚು ಪ್ರಗತಿ ಕಾಣಲಿಲ್ಲ.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈ ಬೈಕಿನ ಮುಂಭಾಗದಲ್ಲಿ ರಬ್ಬರ್ ಬೂಟ್ ಹೊಂದಿರುವ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಹಾಗೂ ಹಿಂಭಾಗದಲ್ಲಿ 5 ಹಂತದ ಅಡ್ಜಸ್ಟಬಲ್ ಸ್ವಿಂಗ್ ಆರ್ಮ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ನೀಡಲಾಗಿತ್ತು. ಈ ಬೈಕ್ ಫ್ಯೂಯಲ್ ಟ್ಯಾಂಕ್ ಹಾಗೂ ಫೆಂಡರ್‌ಗಳಲ್ಲಿ ಕೆಲವು ಮೂಲ ಸ್ಟಿಕ್ಕರ್ ಗ್ರಾಫಿಕ್ಸ್‌ನೊಂದಿಗೆ ಅಚ್ಚುಕಟ್ಟಾದ ಸರಳವಾದ ವಿನ್ಯಾಸವನ್ನು ಹೊಂದಿತ್ತು.

ಹೊಸ ಅವತಾರದಲ್ಲಿ ಬಿಡುಗಡೆಗೊಂಡ Bajaj Pulsar 250 ಬೈಕ್

ಈಗ ಸಲ್ಲಿಸಲಾಗಿರುವ ಟ್ರೇಡ್‌ಮಾರ್ಕ್ ಅರ್ಜಿಯಲ್ಲಿ ಕ್ಯಾಲಿಬರ್ ಹೆಸರನ್ನು ದ್ವಿಚಕ್ರ ವಾಹನಗಳ ಐಸಿ ಎಂಜಿನ್ ಹಾಗೂ ಎಲೆಕ್ಟ್ರಿಕ್ ಚಾಲಿತ ಮಾದರಿಗೆ ಬಳಸಬಹುದು ಎಂದು ಹೇಳಲಾಗಿದೆ.

Most Read Articles

Kannada
English summary
Bajaj auto launches pulsar 250 bike in india with new look details
Story first published: Thursday, October 28, 2021, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X