ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಬಜಾಜ್ ಕಂಪನಿಯು ಭಾರತದಲ್ಲಿ ಪಲ್ಸರ್ ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಬಜಾಜ್ ಆಟೋ ಕಂಪನಿಯು ನ್ಯೂ ಜನರೇಷನ್ ಪಲ್ಸರ್ ಬೈಕ್ ಇದೇ ತಿಂಗಳ 28 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಕಂಪನಿಯ ಹೊಸ ಫ್ಲಾಗ್‌ಶಿಪ್ ಮಾದರಿಯಾಗಿದೆ. ಈ ಹಿಂದೆ, ಕಂಪನಿಯು ತನ್ನ ಅತಿದೊಡ್ಡ ಪಲ್ಸರ್‌ನೊಂದಿಗೆ ಹೊಸ ಪ್ಲಾಟ್‌ಫಾರ್ಮ್ ಅನ್ನು ಬಹಿರಂಗಪಡಿಸುತ್ತದೆ ಎಂದು ರಾಜೀವ್ ಬಜಾಜ್ ಅವರು ಹೇಳಿದ್ದರು. ಅವರು ಬೈಕಿನ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದು ಹೊಸ 2021ರ ಬಜಾಜ್ ಪಲ್ಸರ್ 250 ಆಗಿರಬಹುದು ಎಮ್ದು ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳೊಂದಿಗೆ ವರದಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ದೇಶದ ಈ ಹೊಸ ಪಲ್ಸರ್ ಬೈಕಿನ ಟೆಸ್ಟ್ ಹಲವು ಬಾರಿ ನಡೆಸಿದೆ. ಹೊಸ ಬಜಾಜ್ ಪಲ್ಸರ್ 250 ಬೈಕ್ ಸೆಮಿ-ಫೇರ್ಡ್ ಮತ್ತು ನೇಕೆಡ್ ಮಾದರಿಗಳಲ್ಲಿ ನೀಡಲಾಗುವುದು.. ಹಿಂದಿನಪಲ್ಸರ್ 220 ಎಫ್‌ಗೆ ಬದಲಿಯಾಗಿ ಕಂಪನಿಗೆ ಪರಿಮಾಣವನ್ನು ಉತ್ಪಾದಿಸುವ ಸಾಧ್ಯತೆಯಿದೆ. ಹೊಸ ಮಾದರಿಯನ್ನು ಯಮಹಾ ಎಫ್‌ಝಡ್ 25 ಮತ್ತು ಸುಜುಕಿ ಜಿಕ್ಸರ್ 250 ಟ್ವಿನ್ ಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

2021ರ ಬಜಾಜ್ ಪಲ್ಸರ್ 250 ಬೈಕಿನಲ್ಲಿ ಹೊಸ 220 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಇಂಜಿನ್ ಅನ್ನು ನೀಡಬಹುದು. ಈ ಎಂಜಿನ್ ಅನ್ನು ಹೆಚ್ಚು ಸುಧಾರಿತ ಗೇರ್‌ಬಾಕ್ಸ್‌ಗೆ ಜೋಡಿಸುವ ಸಾಧ್ಯತೆಯಿದೆ. ಹೆಚ್ಚು ಸುಧಾರಿತ ಗೇರ್‌ಬಾಕ್ಸ್‌ಗೆ ಜೋಡಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಇನ್ನು ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದಿಂದ ವರ್ಧಿತವಾದ ಎಂಜಿನ್ ಹೆಚ್ಚು ಪರಿಷ್ಕೃತ ಮತ್ತು ಪರಿಣಾಮಕಾರಿಯಾಗಿರುತ್ತದೆ ದ್ವಿಚಕ್ರ ವಾಹನ ತಯಾರಕರು ಡೊಮಿನಾರ್ 250 ಬೈಕಿನಲ್ಲಿರುವ ಎಂಜಿನ್ 27 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

2021ರ ಬಜಾಜ್ ಪಲ್ಸರ್ 250ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆಕ್ಸಲ್ಗಳಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಓಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಈ ಹೊಸ ಬಜಾಜ್ ಪಲ್ಸರ್ ಬೈಕ್ ಭಾರತದಲ್ಲಿ ಬೈಕ್ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಸ್ಪೈ ಚಿತ್ರಗಳಿಂದ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಈ ಹೊಸ ಬೈಕ್ ಹೆಡ್‌ಲ್ಯಾಂಪ್ ವಿಭಾಗದ ಪಕ್ಕದಲ್ಲಿರುವ ಕ್ವಾರ್ಟರ್ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಫೇರಿಂಗ್-ಮೌಂಟೆಡ್ ರಿಯರ್-ವ್ಯೂ ಮಿರರ್ಸ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಇದರೊಂದಿಗೆ ಈ ಹೊಸ ಪಲ್ಸರ್ ಬೈಕಿನಲ್ಲಿ ಗ್ರ್ಯಾಬ್ ರೈಲ್ ಮತ್ತು ವಿಭಿನ್ನ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಪಡೆಯುತ್ತದೆ. ಇನ್ನು ಅಲಾಯ್ ವ್ಹೀಲ್ಸ್, ಟೈರ್ ಹಗ್ಗರ್, ಡಿಸ್ಕ್ ಬ್ರೇಕ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿದೆ. ಇನ್ನು ಈ ಹೊಸ ಪಲ್ಸರ್ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಮುಂಬರುವ ಬಜಾಜ್ ಪಲ್ಸರ್ 250 ಹೊಚ್ಚಹೊಸ 250 ಸಿಸಿ ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಇತ್ತೀಚೆಗೆ ಬಜಾಜ್ ಡೋಮಿನಾರ್ 250 ಬೈಕ್ ಕೂಡ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಹೊಸ ಬಜಾಜ್ ಡೋಮಿನಾರ್ 250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್, ರೇಸಿಂಗ್ ರೆಡ್ ಮತ್ತು ಮ್ಯಾಟ್ ಸಿಲ್ವರ್, ಮತ್ತು ಸಿಟ್ರಸ್ ರಶ್ ಮತ್ತು ಮ್ಯಾಟ್ ಸಿಲ್ವರ್ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯನು ಪಡೆದುಕೊಂಡಿದೆ. ಇನ್ನು ಈಗಗಾಲೇ ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾನ್ಯನ್ ರೆಡ್ ಮತ್ತು ಚಾರ್ಕೋಲ್ ಬ್ಲಾಕ್ ಬಣ್ಣಗಳ ಆಯ್ಕೆಯ ಮಾದರಿಗಳು ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಈ ಹೊಸ ಡೋಮಿನಾರ್ 250 ಬೈಕ್ ಅಲಾಯ್ ವ್ಹೀಲ್ ಗಳ ವಿನ್ಯಾಸವು ಕ್ವಾರ್ಟರ್-ಲೀಟರ್ ಬೈಕಿನಲ್ಲಿರುವ ಫಿನಿಶ್‌ನಂತೆಯೇ ಉಳಿದಿದೆ. ಎಂಜಿನ್ ಗಾರ್ಡ್, ಇಂಧನ ಟ್ಯಾಂಕ್ ಮತ್ತು ವಿಸ್ತರಣೆಗಳು, ಸೈಡ್ ಪ್ಯಾನಲ್‌ಗಳು, ಮುಂಭಾಗದ ಕೌಲ್ ಪ್ರದೇಶ, ಇತ್ಯಾದಿಗಳನ್ನು ಕೆಂಪು, ಕಪ್ಪು ಅಥವಾ ಹಸಿರು ಬಣ್ಣದಲ್ಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

ಇನ್ನು ಬಜಾಜ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳು, ಮೋಟಾರ್‌ಸೈಕಲ್‌ಗಳು, 3 ಚಕ್ರಗಳು ಮತ್ತು 4 ಚಕ್ರಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ನಂತರದ ಭಾಗವನ್ನು ವಾಣಿಜ್ಯ ವಾಹನ ಸ್ಪೆಕ್ಟ್ರಮ್‌ಗೆ ಗುರಿಪಡಿಸಲಾಗುವುದು. ಇವಿಗಳ ಅಭಿವೃದ್ಧಿಗಾಗಿ ಹೊಸ ಸಬ್-ಬ್ರಾಂಡ್‌ಗಾಗಿ ಬ್ರಾಂಡ್ ಅನುಮೋದನೆಗಳಿಗೆ ಸಹಿ ಹಾಕಿದೆ. ಬಜಾಜ್ ಆಟೋ ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Bajaj Pulsar ಬೈಕ್

2021ರ ಬಜಾಜ್ ಪಲ್ಸರ್ 250ಎ ಬೈಕಿನ ಬೆಲೆಯು ಸುಮಾರು ರೂ.1.32 ಲಕ್ಷದಿಂದ ರೂ.1.34 ಲಕ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಬೈಕ್ ಶೀಘ್ರದಲ್ಲೇ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಇದೇ ತಿಂಗಳು ಬಿಡುಗಡೆಯಾಗಲಿದೆ. ಹೊಸ ಬಜಾಜ್ ಪಲ್ಸರ್ 250 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಕ್ಸರ್ 250, ಯಮಹಾ ಎಫ್‌ಜೆಡ್ -25 ಮತ್ತು ಕೆಟಿಎಂ ಡ್ಯೂಕ್ 250 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj auto set to launch new pulsar bike in india details
Story first published: Monday, October 11, 2021, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X