ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಬಜಾಜ್ ಚೇತಕ್ ಇವಿ ಮಾದರಿಯು ಪ್ರತಿ ಸ್ಪರ್ಧಿ ಮಾದರಿಗಳನ್ನು ಹಿಂದಿಕ್ಕಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಸ್ಕೂಟರ್ ದುಬಾರಿ ಬೆಲೆ ನಡುವೆಯೂ ಪ್ರತಿ ಸ್ಪರ್ಧಿ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಬಜಾಜ್ ಆಟೋ ಕಂಪನಿಯು ಚೇತಕ್ ಇವಿಯನ್ನು ಮೊದಲ ಬಾರಿಗೆ ಬೆಂಗಳೂರು ಮತ್ತು ಪುಣೆಯಲ್ಲಿ ಮಾರಾಟ ಆರಂಭಿಸುವ ಮೂಲಕ ಇದೀಗ ವಿವಿಧ ನಗರಗಳಿಗೂ ಮಾರಾಟ ವಿಸ್ತರಣೆ ಮಾಡುತ್ತಿದ್ದು, ಕಳೆದ ವರ್ಷದ ಆರಂಭದಲ್ಲಿ ಬೆರಳಣಿಕೆಯಷ್ಟು ಮಾರಾಟ ಹೊಂದಿದ್ದ ಹೊಸ ಚೇತಕ್ ಇವಿ ಸ್ಕೂಟರ್‌ಗೆ ಇದೀಗ ಸಾವಿರಾರು ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಪೆಟ್ರೋಲ್ ದರ ಹೆಚ್ಚುತ್ತಿರುವ ಪರಿಣಾಮ ಹೊಸ ಸ್ಕೂಟರ್ ಖರೀದಿದಾರರು ಇವಿ ವಾಹನಗಳಿಗೆ ಆದ್ಯತೆ ನೀಡುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಚೇತಕ್ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆ ಜೋರಾಗುತ್ತಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಚೇತಕ್ ಇವಿ ಮಾದರಿಯು ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ದುಬಾರಿ ಬೆಲೆ ಹೊಂದಿದ್ದರೂ ಕೂಡಾ ವಿನೂತನ ಡಿಸೈನ್, ಅತ್ಯುತ್ತಮವಾದ ಬ್ಯಾಟರಿ ಪ್ಯಾಕ್ ಪರಿಣಾಮ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಳೆದ ತಿಂಗಳು ಜುಲೈ ಅವಧಿಯಲ್ಲಿನ ಸ್ಕೂಟರ್ ಮಾರಾಟದಲ್ಲಿ ಎಥರ್ ಇವಿ ಸ್ಕೂಟರ್‌ಗಳ ನಡುವಿನ ಪೈಪೋಟಿಯೊಂದಿಗೆ 730 ಯುನಿಟ್ ಮಾರಾಟವಾಗಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ದೇಶಾದ್ಯಂತ ಬಜಾಜ್ ಚೇತಕ್ ಇವಿ ಸ್ಕೂಟರ್‌ಗೆ ಬೇಡಿಕೆಯಿದ್ದರೂ ಕಂಪನಿಯು ಚಾರ್ಜಿಂಗ್ ನಿಲ್ದಾಣಗಳ ಆಧಾರದ ಮೇಲೆ ಸದ್ಯ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಗರಗಳಲ್ಲಿ ಮಾರಾಟವಾಗುವುದರೊಂದಿಗೆ ಬೇಡಿಕೆ ಹೆಚ್ಚುವ ನೀರಿಕ್ಷೆಯಲ್ಲಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಬಜಾಜ್ ಆಟೋ ಕಂಪನಿಯಯು ಬೇಡಿಕೆ ಆಧಾರದ ಮೇಲೆ ವಿವಿಧ ನಗರಗಳಲ್ಲಿ ಮಾರಾಟ ಆರಂಭಿಸುತ್ತಿದ್ದು, ಈ ಮೊದಲು ಬೆಂಗಳೂರು ಮತ್ತು ಪುಣೆಯಲ್ಲಿ ಚೇತಕ್ ಇವಿ ಮಾರಾಟ ಆರಂಭಿಸಿದ ನಂತರ ಚೆನ್ನೈ ಮತ್ತು ಹೈದ್ರಾಬಾದ್‌‌ನಲ್ಲೂ ಇವಿ ಸ್ಕೂಟರ್ ಮಾರಾಟ ಆರಂಭಿಸಿದ್ದ ಕಂಪನಿಯು ಕಳೆದ ತಿಂಗಳು ನಾಗಪುರ್‌ದಲ್ಲೂ ಮಾರಾಟ ಆರಂಭಿಸಿತ್ತು.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಎರಡನೇ ಹಂತದ ಮಾರಾಟ ಮಳಿಗೆ ವಿಸ್ತರಣೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಮತ್ತಷ್ಟು ಪ್ರಮುಖ ನಗರಗಳಲ್ಲಿ ಹೊಸ ಸ್ಕೂಟರ್ ಮಾರಾಟ ವಿಸ್ತರಿಸಲು ಸಜ್ಜಾಗಿರುವ ಬಜಾಜ್ ಕಂಪನಿಯು ಮೈಸೂರು, ಮಂಗಳೂರು ಮತ್ತು ಔರಾಂಗಾಬಾದ್ ನಗರಗಳಲ್ಲೂ ಹೊಸ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಹೊಸ ಚೇತಕ್ ಇವಿ ಮಾದರಿಯು ಅರ್ಬೈನ್ ಮತ್ತು ಪ್ರೀಮಿಯಂ ಎನ್ನುವ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಅರ್ಬೈನ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.42 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ.1.44 ಲಕ್ಷ ಬೆಲೆ ಹೊಂದಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯು 3kWh ಲೀಥಿಯಂ ಅಯಾನ್ ಬ್ಯಾಟರಿ ಮತ್ತು 4.08kW ಎಲೆಕ್ಟ್ರಿಕ್ ಮೋಟಾರ್ ಮೂಲಕ ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಹೊಸ ಸ್ಕೂಟರ್‌‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದ್ದು, ಪ್ರತಿ 15 ಸಾವಿರ ಕಿ.ಮೀ ಗೆ ಒಂದು ಬಾರಿ ಸರ್ವೀಸ್ ಸೇರಿದಂತೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಇನ್ನು ಮಾರುಕಟ್ಟೆಗೆ ಪ್ರಮುಖ ಸ್ಕೂಟರ್ ಮಾದರಗಳಿಗೆ ಪೈಪೋಟಿಯಾಗಿ ಹಲವು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸದ್ಯ ಮಾರುಕಟ್ಟೆ ಇವಿ ಸ್ಕೂಟರ್‌ಗಳ ಬೆಲೆಗಿಂತಲೂ ಕಡಿಮೆ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಕೆಲವು ಕಂಪನಿಗಳಿಗೆ ತಳಮಳ ಆರಂಭವಾಗಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇವಿ ಸ್ಕೂಟರ್‌ಗಳ ಬೆಲೆಯಲ್ಲಿಯೇ ದುಪ್ಪಟ್ಟು ಮೈಲೇಜ್ ರೇಂಜ್ ಖಾತ್ರಿಪಡಿಸುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳು ಸಹ ಮುಂಬರುವ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಇಲ್ಲವಾದಲ್ಲಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿಸಿರುವ ಇವಿ ಸ್ಕೂಟರ್‌ಗಳ ಅಬ್ಬರದ ಮುಂದೆ ಪ್ರಸ್ತುತ ಸ್ಕೂಟರ್ ಮಾದರಿಗಳು ಮಾರಾಟದಲ್ಲಿ ನೆಲಕಚ್ಚುವ ಎಲ್ಲಾ ಸಾಧ್ಯತೆಗಳಿದ್ದು, ಮುಂಬರುವ ಕೆಲ ವರ್ಷಗಳಲ್ಲಿ ಇವಿ ವಾಹನಗಳ ಮೈಲೇಜ್ ಸಮರವು ಗ್ರಾಹಕರ ವರದಾನವಾಗಲಿದೆ ಎನ್ನಬಹುದು.

ಜುಲೈ ಅವಧಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಗಮನಸೆಳೆದ ಬಜಾಜ್ ಚೇತಕ್ ಇವಿ

ಜೊತೆಗೆ ವಾಹನಗಳ ಗುಣಮಟ್ಟ, ಬಾಳ್ವಿಕೆ ಕೂಡಾ ಮುಖ್ಯ ಅಂಶವಾಗಲಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಮುಂಬರುವ ದಿನಗಳಲ್ಲಿ ಬೃಹತ್ ಪ್ರಮಾಣದ ಬೇಡಿಕೆ ಸೃಷ್ಠಿಯಾಗಲಿದೆ ಎನ್ನಬಹುದು.

Most Read Articles

Kannada
English summary
Bajaj chetak ev register highest monthly sales in july
Story first published: Thursday, August 19, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X