ಬಜಾಜ್ ಡೋಮಿನಾರ್ ಬೈಕ್‌ಗಳ ದರ ಪರಿಷ್ಕರಣೆ: ಕಡಿತಗೊಂಡ ಡೊಮಿನಾರ್ 250 ಬೈಕಿನ ಬೆಲೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ದೇಶಿಯ ಮಾರುಕಟ್ಟೆಯಲ್ಲಿ ಆಯ್ದ ಬೈಕ್‌ಗಳ ಬೆಲೆಯನ್ನು ಪರಿಷ್ಕರಿಸಿದೆ. ಇತ್ತೀಚಿನ ಬೆಲೆ ಪರಿಷ್ಕರಣೆಯಲ್ಲಿ ಡೊಮಿನಾರ್ ಬೈಕ್‌ಗಳು ಒಳಗೊಂಡಿವೆ. ಇದರಲ್ಲಿ ಕ್ವಾರ್ಟರ್-ಲೀಟರ್ ಡೊಮಿನಾರ್ 250 ಬೈಕಿನ ಬೆಲೆಯನ್ನು ಕಂಪನಿಯು ಗಣನೀಯವಾಗಿ ಕಡಿಮೆಗೊಳಿಸಿದೆ.

ಇದೀಗ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯು ರೂ.1,704,176 ಗಳಿಂದ ರೂ.1,70,976 ಗಳಾಗಿದೆ. ಈ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯನ್ನು ರೂ.19,000 ಗಳವರೆಗೆ ಇಳಿಸಿದೆ ಎಂದು ವರದಿಗಳಾಗಿದೆ. ಇನ್ನು ಬಜಾಜ್ ಡೋಮಿನಾರ್ 400 ಬೈಕಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಬಜಾಜ್ ಡೋಮಿನಾರ್ 400 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2,11,572 ಗಳಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿದೆ.

ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಹಿರಿಯಣ್ಣ ಎಂದೇ ಹೇಳಬಹುದಾದ ಡೋಮಿನಾರ್ 400 ಬೈಕಿನ ಮಾದರಿಯಂತಿದೆ. ಆದರೆ ಡೋಮಿನಾರ್ 250 ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಡೋಮಿನಾರ್ 250 ಬೈಕ್ 'ಡಿ250' ಬ್ಯಾಡ್ಜ್ ನೊಂದಿಗೆ ಕೆಂಪು ಬಣ್ಣವನ್ನು ಹೊಂದಿದೆ.

ಈ ಬಜಾಜ್ ಡೋಮಿನಾರ್ 250 ಬೈಕ್ ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಮತ್ತು ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸಗಳಾಗಿದೆ.

ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಟಯರ್ ಪ್ರೊಫೈಲ್ ಗಳು ಸಹ ಭಿನ್ನವಾಗಿದೆ. ಇನ್ನು ಈ ಬೈಕ್ ಡೋಮಿನಾರ್ 400 ಮಾದರಿಗಿಂತ ತೂಕ ಕಡಿಮೆ ಆಗಿದೆ.

ಈ ಡೋಮಿನಾರ್ 400 ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಹೆಚ್‍ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8800 ಆರ್‍ಪಿಎಂನಲ್ಲಿ 39.4 ಬಿಹೆಚ್‍ಪಿ ಪವರ್ ಮತ್ತು 7000 ಆರ್‍ಪಿಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇನ್ನು ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಕೆಟಿಎಂ 250 ಡ್ಯೂಕ್‍ನಲ್ಲಿರುವಂತಹ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 26.6 ಬಿಹೆಚ್‍ಪಿ ಪವರ್ ಮತ್ತು 23.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಜೋಡಿಸಿದೆ.

ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಸುರಕ್ಷತಾ ದೃಷ್ಟಿಯಿಂದ ಪ್ರಮುಖವಾದ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಬಜಾಜ್ ಡೋಮಿನಾರ್ 400 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಜಾವಾ, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಿದರೆ, ಬಜಾಜ್ ಡೋಮಿನಾರ್ 250 ಮಾದರಿಯು ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications