ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಹೊಸ ಹಣಕಾಸಿನ ವರ್ಷದಲ್ಲಿ ಹಲವಾರು ವಾಹನ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಬಜಾಜ್ ಆಟೋ ಕಂಪನಿಯು ಕೂಡ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ಲಾಟಿನಾ ಮತ್ತು ಸಿಟಿ ಸರಣಿಯಲ್ಲಿರುವ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಈ ಕಮ್ಯೂಟರ್ ಬೈಕ್‌ಗಳ ಬೆಲೆಯನ್ನು ರೂ.750 ರಿಂದ ರೂ.1,700 ಗಳವರೆಗೆ ಹೆಚ್ಚಿಸಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಸಿಟಿ100 ಬೈಕಿನ ಬೆಲೆಯು ರೂ.1,498 ಗಳವರೆಗೆ ಹೆಚ್ಚಿಸಿದೆ. ಇದೀಗ ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.49,152 ಗಳಾಗಿದೆ. ಇನ್ನು ಇದರ ಹಿರಿಯಣ್ಣ ಎಂದೇ ಕರೆಯಬಹುದಾದ ಸಿಟಿ110 ಬೈಕ್ ಅಲಾಯ್ ಮತ್ತು ಅಲಾಯ್ ಎಕ್ಸ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಬಜಾಜ್ ಸಿಟಿ 110 ಅಲಾಯ್ ಮತ್ತು ಅಲಾಯ್ ಎಕ್ಸ್ ಬೆಲೆಯನ್ನು ಕ್ರಮವಾಗಿ ರೂ 1,696 ಮತ್ತು ರೂ.1,356 ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬೆಲೆ ಏರಿಕೆಯ ಬಳಿಕ ಬಜಾಜ್ ಸಿಟಿ100 ಅಲಾಯ್ ರೂಪಾಂತರದ ಬೆಲೆಯು ರೂ.53,498 ಗಳಾದರೆ, ಸಿಟಿ100 ಅಲಾಯ್ ಎಕ್ಸ್ ರೂಪಾಂತರದ ಬೆಲೆಯು ರೂ.55,494 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬಜಾಜ್ ಸಿಟಿ100 ಬೈಕಿನಲ್ಲಿ 102ಸಿಸಿ ರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.5 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬಜಾಜ್ ಸಿಟಿ110 ಬೈಕಿನಲ್ಲಿ 115.45 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 8.4 ಬಿಹೆಚ್‍ಪಿ ಪವರ್ ಮತ್ತು ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬ್ರ್ಯಾಂಡ್‌ನ ಪ್ಲಾಟಿನಾ ಸರಣಿಯಲ್ಲಿರುವ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಲ್ಲಿ ಪ್ಲಾಟಿನಾ 100 ಬೈಕ್ ಅಲಾಯ್ ಮತ್ತು ಡ್ರಮ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳು ರೂ. 749 ಗಳವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬೆಲೆ ಏರಿಕೆಯ ಬಳಿಕ ಬಜಾಜ್ ಪ್ಲಾಟಿನಾ 100 ಬೈಕಿನ ಅಲಾಯ್ ರೂಪಾಂತರದ ಬೆಲೆಯು ರೂ.52,915 ಗಳಾದರೆ, ಡ್ರಮ್ ರೂಪಾಂತರದ ಬೆಲೆಯು ರೂ.54,669 ಗಲಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಪ್ಲಾಟಿನ 110 ಇಎಸ್ ಬೈಕಿನ ಬೆಲೆಯು ರೂ,1,504 ಗಳವರೆಗೆ ಹೆಚ್ಚಿಸಿದೆ. ಇದೀಗ ಪ್ಲಾಟಿನಾ 110 ಇಎಸ್ ಬೈಕಿನ ಬೆಲೆಯು ರೂ,67,424 ಗಳಾಗಿದೆ. ಇನ್ನು ಪ್ಲಾಟಿನ 110 ಹೆಚ್-ಗೇರ್ ಮಾದರಿಯ ಬೆಲೆಯು ರೂ,877 ಗಳವರೆಗೆ ಹೆಚ್ಚಿಸಿದೆ. ಇದೀಗ ಇದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.63,424 ಗಳಾಗಿದೆ.

Model New Price Old Price Difference
CT100 KS Alloy ₹49,152 ₹47,654 ₹1,498
CT110 ES Alloy ₹53,498 ₹51,802 ₹1,696
CT110 ES Alloy X ₹55,494 ₹54,138 ₹1,356
Platina 100 KS Alloy ₹52,915 ₹52,166 ₹749
Platina 100 ES Drum ₹54,669 ₹53,920 ₹749
Platina 110 5-speed Drum ₹60,608 NA NA
Platina 110 H-Gear Disc ₹63,424 ₹64,301 - ₹877
Platina 110 ES ABS ₹67,424 ₹65,920 ₹1,504
ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪ್ಲಾಟಿನಾ ಮತ್ತು ಸಿಟಿ ಬೈಕ್‌ಗಳು

ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.7 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Bajaj Platina & CT Motorcycle Line-Up Receives Price Hike. Read In Kananda.
Story first published: Saturday, April 10, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X