ಬಜಾಜ್ ಪಲ್ಸರ್ ಎನ್250 ಮತ್ತು ಎಫ್250 ಫಸ್ಟ್ ರೈಡ್ ರಿವ್ಯೂ ವಿಡಿಯೋ

ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಪಲ್ಸರ್ ಸರಣಿಯಲ್ಲಿ ಹೊಸದಾಗಿ ಎನ್250 ಮತ್ತು ಎಫ್250 ಸೆಮಿ-ಫೇರಿಂಗ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳು ಹಲವಾರು ಹೊಸ ಫೀಚರ್ಸ್‌ಗಳು ಮತ್ತು ಬಲಿಷ್ಠ ಎಂಜಿನ್‌ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಚ್ಚ ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿರುವ ಬಜಾಜ್ ಕಂಪನಿಯು ಶೀಘ್ರದಲ್ಲೇ ಹೊಸ ಬೈಕ್ ಮಾದರಿಗಳನ್ನು ವಿತರಣೆ ಆರಂಭಿಸಲಿದ್ದು, ಹೊಸ ಬೈಕ್ ವಿತರಣೆಗೂ ಮುನ್ನ ಬೈಕ್ ಕಾರ್ಯಕ್ಷಮತೆ ಕುರಿತಂತೆ ಫಸ್ಟ್ ರೈಡ್ ಹಮ್ಮಿಕೊಂಡಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ಬಜಾಜ್ ಕಂಪನಿಯು 250ಸಿಸಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

2021ರ ಬಜಾಜ್ ಪಲ್ಸರ್ 250 ಬೈಕ್ ಮಾದರಿಗಳು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕ್‌ಗಳು ಯಾವೆಲ್ಲಾ ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ ಎಂಬುವುದನ್ನು ಫಸ್ಟ್ ರೈಡ್ ವಿಮರ್ಶೆಯಲ್ಲಿ ನಾವು ನಿಮಗೆ ಸಂಪೂರ್ಣವಾದ ಮಾಹಿತಿ ಹಂಚಿಕೊಂಡಿದ್ದೆವೆ.

ಬಜಾಜ್ ಪಲ್ಸರ್ ಎನ್250 ಮತ್ತು ಎಫ್250 ಫಸ್ಟ್ ರೈಡ್ ರಿವ್ಯೂ ವಿಡಿಯೋ

ಹೊಸ ಪಲ್ಸರ್ ಬೈಕ್ ಮಾದರಿಗಳು 250ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಜೋಡಣೆ ಹೊಂದಿದ್ದು, 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.1 ಬಿಎಚ್‌ಪಿ ಮತ್ತು 21.5 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೊಸ ಬೈಕಿನಲ್ಲಿ ಇತರೆ ವೈಶಿಷ್ಟ್ಯತೆಗಳೆಂದರೆ ಎಲ್ಇಡಿ ಲೈಟಿಂಗ್ಸ್, ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್-ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ವಿಶೇಷತೆಗಳಿದ್ದು, ಹೊಸ ಬೈಕ್ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಬೆಲೆ ಹೊಂದಿವೆ.

ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 1.38 ಲಕ್ಷ ಮತ್ತು ರೂ. 1.40 ಲಕ್ಷಕ್ಕೆ ಬಿಡುಗಡೆಯಾಗಿದ್ದು, ಯಮಹಾ ಫೇಜರ್ 25 ಮತ್ತು ಸುಜುಕಿ ಜಿಕ್ಸರ್ 250 ಎಸ್ಎಫ್ ಮಾದರಿಗೆ ನೇರ ಸ್ಪರ್ಧೆ ನೀಡಲಿದ್ದರೆ ಕ್ವಾರ್ಟರ್-ಲೀಟರ್ ವಿಭಾಗದಲ್ಲಿರುವ ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್ ಸೇರಿದಂತೆ ಇತರೆ ಮಾದರಿಗಳಿಗೂ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

Article Published On: Saturday, November 6, 2021, 11:22 [IST]
English summary
Bajaj pulsar n250 and f250 kannada review video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+