ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪಲ್ಸರ್ ಎನ್ಎಸ್125 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಈ ಬೈಕಿನ ಬೆಲೆಯನ್ನು ರೂ.4,416 ಗಳವರೆಗೂ ಏರಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಇದೀಗ ಬಜಾಜ್ ಪಲ್ಸರ್ ಎನ್ಎಸ್125 ಬೈಕಿನ ಬೆಲೆಯು ಫರಿದಾಬಾದ್‌ನ ಎಕ್ಸ್ ಶೋರೂಂ ಪ್ರಕಾರ ರೂ.99,296 ಆಗಿದೆ. ಬಜಾಜ್ ಪಲ್ಸರ್ ಎನ್ಎಸ್125 ಬೈಕಿನಲ್ಲಿ ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಇನ್ನು ಪಲ್ಸರ್ ಎನ್ಎಸ್ ಮಾದರಿಗಳು ಪ್ರೀಮಿಯಂ ಬೈಕ್ ಸರಣಿಯಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿದೆ. ಎನ್ಎಸ್ ಸರಣಿಯಲ್ಲಿ ಎನ್ಎಸ್125 ಎಂಟ್ರಿ ಲೆವೆಲ್ ಮಾದರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯನ್ನು ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಅಭಿವೃದ್ದಿಪಡಿಸಿರುವ ಬಜಾಜ್ ಆಟೋ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಿದ್ದಾರೆ. ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಈ ಬೈಕ್ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಈ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಬರ್ನ್ಟ್ ರೆಡ್, ಪ್ಯೂಟರ್ ಗ್ರೇ, ಸ್ಯಾಫೈರ್ ಬ್ಲೂ ಮತ್ತು ಆರೆಂಜ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಎನ್ಎಸ್125 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಈ ಬೈಕಿನಲ್ಲಿ ಸಿಗ್ನಿಚರ್ ಹೆಡ್‌ಲ್ಯಾಂಪ್ ಜೊತೆ ಟ್ವಿನ್ ಪೈಲೆಟ್ ಲ್ಯಾಂಪ್ಸ್, ಟ್ವಿನ್ ಸ್ಟ್ರೀಪ್ ಎಲ್ಇಡಿ ಟೈಲ್‌ಲ್ಯಾಂಪ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಕಾಂಬಿ-ಬ್ರೇಕಿಂಗ್ ಸಿಸ್ಟಂ ಮತ್ತು ಆಕರ್ಷಕ ಬೆಲ್ಲಿ ಪ್ಯಾನ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕ್ಲಸ್ಟರ್ ನಲ್ಲಿ, ವೇಗ, ಓಡೋ ಮೀಟರ್, ಫ್ಯೂಯಲ್ ಗೇಜ್ ಮತ್ತು ಮುಂತಾದ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಇನ್ನು ಈ ಹೊಸ ಪಲ್ಸರ್ ಎನ್ಎಸ್125 ಬೈಕಿನಲ್ಲಿ 124.45 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 11.6 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 11 ಎನ್ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕಿನ ಸೀಟ್ 805 ಎಂಎಂ ಎತ್ತ್ರದಲ್ಲಿ ಇರಿಸಲಾಗಿದೆ. ಇನ್ನು ಈ ಬೈಕ್ 144 ಕೆಜಿ ತೂಕವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ ಎನ್ಎಸ್125 ಬೈಕ್

ಬಜಜ್ ಪಲ್ಸರ್ ಎನ್ಎಸ್125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ನೀಡಿದ್ದಾರೆ. ಇನ್ನು ಪಲ್ಸರ್ ಎನ್ಎಸ್125 ಬೈಕ್ ಬೆಲೆ ಏರಿಕೆಯನ್ನು ಪಡೆದುಕೊಂಡಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತದಯೇ ಎಂಬುದು ಕಾದುನೋಡಬೇಕು.

Article Published On: Saturday, July 17, 2021, 10:08 [IST]
English summary
Bajaj Pulsar NS125 Price Hiked. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+