ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಪಲ್ಸರ್ ಎನ್ಎಸ್ 200 ಖ್ಯಾತ ಬೈಕ್ ತಯಾರಕ ಕಂಪನಿಯಾದ ಬಜಾಜ್ ಆಟೋದ ಜನಪ್ರಿಯ ಬೈಕ್'ಗಳಲ್ಲಿ ಒಂದು. ಇತ್ತೀಚಿನ ಮಾಹಿತಿಯ ಪ್ರಕಾರ, ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ದೇಶದಲ್ಲಿ ಕ್ವಾರ್ಟರ್ ಮೈಲಿ ವ್ಹೀಲರಿ ಸ್ಥಾಪಿಸಿದ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಎಫ್ಎಂಎಸ್‌ಸಿ‌ಐ ಇಂಡಿಯನ್ ನ್ಯಾಷನಲ್ ರೆಕಾರ್ಡ್'ಗೆ ಸೇರ್ಪಡೆಯಾಗಿದೆ.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಈ ಜನಪ್ರಿಯ ಸ್ಟ್ರೀಟ್ ನೇಕೆಡ್ ಬೈಕ್ 23.68 ಸೆಕೆಂಡುಗಳಲ್ಲಿ ಕ್ವಾರ್ಟರ್ ಮೈಲಿ ವ್ಹೀಲ್ ಪೂರ್ಣಗೊಳಿಸುವ ಮೂಲಕ ಈ ದಾಖಲೆಯನ್ನು ಮಾಡಿದೆ. ಹೃಜಿಕೇಶ್ ಮೆಂಡ್ಕೆ ಅವರು ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಇದರ ನೇತೃತ್ವವನ್ನು ಫೆಡರೇಶನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ವಹಿಸಿಕೊಂಡಿತ್ತು.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಸಹ ಹಾಜರಿದ್ದರು. ಈ ದಾಖಲೆಯನ್ನು ವಿಮಾನ ನಿಲ್ದಾಣದ ರನ್ ವೇಯಲ್ಲಿ ಆಯೋಜಿಸಲಾಗಿತ್ತು. ಈ ರೆಕಾರ್ಡ್ ವ್ಹೀಲಿಗಾಗಿ ಇತರ ಚಟುವಟಿಕೆಗಳನ್ನು ಕೆಲ ಕಾಲ ನಿರ್ಬಂಧಿಸಲಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಈ ದಾಖಲೆ ನಿರ್ಮಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಜೊತೆಗೆ ಎಲ್ಲರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಲಾಗಿತ್ತು.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಇದರ ಜೊತೆಗೆ ಬೈಕ್ ಸವಾರನನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಸಾಧನ ಹಾಗೂ ಗೇರ್'ಗಳನ್ನು ಸಹ ಅವರಿಗೆ ನೀಡಲಾಗಿತ್ತು. ಈ ದಾಖಲೆಯನ್ನು ನಿರ್ಮಿಸಲು ಸ್ಟಾಕ್ ಕಂಡಿಷನ್ ಬೈಕ್ ಬಳಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಈ ಬೈಕಿನಲ್ಲಿದ್ದ ಹಿಂಭಾಗದ ಮಡ್‌ಗಾರ್ಡ್‌ ಹಾಗೂ ನಂಬರ್‌ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿತ್ತು. ಸ್ಟಂಟ್‌ ಮಾಡುವಾಗ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಇವುಗಳನ್ನು ತೆಗೆದುಹಾಕಲಾಗಿತ್ತು.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ದಾಖಲೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಾತನಾಡಿದ ಹೃಷಿಕೇಶ ಮೆಂಡ್ಕೆ, ನಾನು ಮೊದಲ ತಲೆಮಾರಿನ ಬಜಾಜ್ ಪಲ್ಸರ್ ಬೈಕಿನ ಮೂಲಕ ಸ್ಟಂಟ್ ಮಾಡುವುದನ್ನು ಕಲಿತೆ. ಪಲ್ಸರ್ ಎನ್ಎಸ್ 200 ಬೈಕಿನ ಮೂಲಕ ದಾಖಲೆ ನಿರ್ಮಿಸಿರುವುದು ಖುಷಿ ನೀಡಿದೆ ಎಂದು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಅಸಾಧಾರಣ ಬೈಕ್ ಸ್ಟಂಟ್'ಗಳಿಗಾಗಿ ಹಾಗೂ ಪರ್ಫಾಮೆನ್ಸ್'ಗಾಗಿ ನಾನು ಪಲ್ಸರ್ ಬೈಕಿನ ಮೇಲೆ ಅವಲಂಬಿತನಾಗಿದ್ದೇನೆ. ಭಾರತದ ಸ್ಟಂಟ್ ಸವಾರರು ಈಗ ಮೇಡ್ ಇನ್ ಇಂಡಿಯಾ ಬೈಕ್'ಗಳ ಮೂಲಕ ಸ್ಟಂಟ್ ಮಾಡುತ್ತಿರುವುದು ಅದ್ಭುತ ಎಂದು ಅವರು ಹೇಳಿದರು.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಇನ್ನು ಬಜಾಜ್ ಪಲ್ಸರ್ ಎನ್ಎಸ್ 200 ಬೈಕಿನ ಬಗ್ಗೆ ಹೇಳುವುದಾದರೆ, ಬಜಾಜ್ ಆಟೋ ಕಂಪನಿಯು ಈ ಬೈಕಿನಲ್ಲಿ 199 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಟ್ರಿಪಲ್-ಸ್ಪಾರ್ಕ್ ಡಿಟಿಎಸ್-ಐ ಎಂಜಿನ್ ಅಳವಡಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.5 ಬಿಹೆಚ್‌ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪಲ್ಸರ್ ಎನ್‌ಎಸ್ 200 ಬೈಕ್

ಈ ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಷನ್'ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.31 ಲಕ್ಷಗಳಾಗಿದೆ.

Most Read Articles

Kannada
English summary
Bajaj Pulsar NS200 bike creates new national record. Read in Kannada.
Story first published: Friday, March 12, 2021, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X