ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ದೇಶಿಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಪಲ್ಸರ್ ಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ಬಜಾಜ್ ಪಲ್ಸರ್ ಬೈಕ್‍ಗಳಿಗೆ ಭಾರತದಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಈ ಪಲ್ಸರ್ ಬೈಕ್‍ಗಳು ಭಾರತದ ರಸ್ತೆಗಳಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ಪಲ್ಸರ್ ಎಫ್250 ಮತ್ತು ಎನ್250 ಎಂಬ ಹೊಸ ಬೈಕ್‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದರ ಮೂಲಕ ಪಲ್ಸರ್ ಸರಣಿಯನ್ನು ವಿಸ್ತರಿಸಿದೆ. ಹೊಸ ಪಲ್ಸರ್ 250 ರೇಂಜ್ ದೊಡ್ಡ ಮತ್ತು ಪವರ್ ಫುಲ್ ಬೈಕ್‍ಗಳಾಗಿವೆ. ಈ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಲಾಗಿವೆ. ಇದರಲ್ಲಿ ಹೊಸ ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಆಗಿದ್ದರೆ, ಪಲ್ಸರ್ ಎಫ್250 ಸೆಮಿ-ಫೇರ್ಡ್ ಬೈಕ್ ಆಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಪಲ್ಸರ್ 250 ಅನ್ನು ಬಿಡುಗಡೆ ಮಾಡಲಾಗಿದ್ದರೂ, ಇದು ಇನ್ನೂ ಭಾರತದಾದ್ಯಂತ ಎಲ್ಲಾ ಡೀಲರ್‌ಶಿಪ್‌ಗಳನ್ನು ತಲುಪಿಲ್ಲ. ಈ ಬೈಕ್‍ಗಳನ್ನು ಭಾರತದಾದ್ಯಂತ ಹಂತ ಹಂತವಾಗಿ ವಿವಿಧ ನಗರಗಳಿಗೆ ಆಗಮಿಸುತ್ತಿವೆ. ಈ ಬೈಕ್‍ಗಳ ಮೊದಲ ಯುನಿಟ್ ಅನ್ನು ಪುಣೆಯಲ್ಲಿ ವಿತರಿಸಲಾಯಿತು, ಅಲ್ಲಿಯೇ ಈ ಬೈಕ್‍ಗಳನ್ನು ತಯಾರಿಸಲಾಗುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪಲ್ಸರ್ ಬೈಕ್ ಅಭಿಮಾನಿಯೊಬ್ಬ ತಮಾಷೆಯಾಗಿ ಬಜಾಜ್ ಅವರಿಗೆ ಹೊಸ ಪಲ್ಸರ್ 250 ಅನ್ನು ಉಡುಗೊರೆಯಾಗಿ ನೀಡುವಂತೆ ಕಾಮೆಂಟ್ ಮಾಡಿ ಕೇಳಿದ್ದಾನೆ. ಕಂಪನಿಯು ಅವರ ಆಸೆಯನ್ನು ಪೂರೈಸಲು ನಿರ್ಧರಿಸಿತು. ಆದರೆ ಒಂದು ಷರತ್ತಿನೊಂದಿಗೆ, ಅದು ಪೋಸ್ಟ್ ಮಾಡಿದ ಕಾಮೆಂಟ್ ಕನಿಷ್ಠ 250,000 ಲೈಕ್ಸ್ ಸ್ವೀಕರಿಸಬೇಕು. ಕಾಮೆಂಟ್ 250,000 ಲೈಕ್ಸ್ ಅನ್ನು ಪಡೆದುಕೊಂಡರೆ ಬೈಕ್ ನೀಡುವುದಾಗಿ ಕಂಪನಿ ಹೇಳಿದೆ,

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಇನ್ನು ಹೊಸ ಪಲ್ಸರ್ ಪಲ್ಸರ್ 250 ಸರಣಿಯಲ್ಲಿ ಎನ್250 ಮತ್ತು ಎಫ್250 ಎಂಬ ಬೈಕ್‍ಗಳಿವೆ. ಇದರ ಬಗ್ಗೆ ಹೇಳುವುದಾದರೆ, ಈ ಬೈಕ್‍ಗಳ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ವಿನ್ಯಾಸ ಒಂದಾಗಿದೆ. ಇದರಲ್ಲಿ ಪಲ್ಸರ್ ಎಫ್250 ಬೈಕಿನಲ್ಲಿ ಸೆಮಿ-ಫೇರ್ಡ್ ಬೈಕ್ ಆಗಿರುವುದರಿಂದ, ಮುಂಭಾಗದಲ್ಲಿ ಸಣ್ಣ ವಿಸರ್ ಅನ್ನು ಪಡೆಯುತ್ತದೆ ಮತ್ತು ಅದರ ಹಿಂಬದಿಯ ಮೀರರ್ ಬಾಡಿ ಪ್ಯಾನೆಲ್‌ಗಳಲ್ಲಿ ಅಳವಡಿಸಲಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಯುನಿಟ್ ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿದೆ ಮತ್ತು ಹೆಚ್ಚಿನ ಮತ್ತು ಲೋ ಬೀಮ್ ಅನ್ನು ಅದೇ ರೀತಿಯಲ್ಲಿ ಸಂಯೋಜಿಸಲಾಗಿದೆ. ಈ ಪಲ್ಸರ್ ಎಫ್250 ಬೈಕಿನಲ್ಲಿ ರಿವರ್ಸ್-ಬೂಮರಾಂಗ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಬಲ ಮತ್ತು ಎಡಭಾಗದಲ್ಲಿ ಇರಿಸಲಾಗಿದೆ. ಹೆಡ್‌ಲೈಟ್‌ನ ಮೇಲೆ ಸಣ್ಣ ವಿಸರ್ ಗಾಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಅಲ್ಲದೇ ಇದು ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ. ಇನ್ನು ಪಲ್ಸರ್ ಎನ್250 ಬೈಕ್ ಶಾರ್ಪ್ ಮತ್ತು ಸ್ಟೈಲಿಶ್ ಹೆಡ್‌ಲೈಟ್ ಯುನಿಟ್ ಅನ್ನು ಒಳಗೊಂಡಿದೆ. ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಅನ್ನು ನೀಡಲಾಗಿದೆ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ ಮತ್ತು ಅನಲಾಗ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೆಡ್‌ಲೈಟ್‌ನ ಮೇಲೆ ಇರಿಸಲಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಇದರ ವಿನ್ಯಾಸವನ್ನು ತೀಕ್ಷ್ಣ ಮತ್ತು ಅಗ್ರೇಸಿವ್ ಆಗಿದೆ, ಇದು ಹಿಂಭಾಗದಲ್ಲಿಯೂ ಕಂಡುಬರುತ್ತದೆ. ಬಜಾಜ್ ಪಲ್ಸರ್ ಎಫ್250 ಒಂದು ಸೆಮಿ-ಫೇರ್ಡ್ ಬೈಕ್ ಆಗಿದ್ದು, ಇದು ನೇಕೆಡ್ ಪಲ್ಸರ್ ಎನ್250 ಬೈಕ್ ಗಿಂತ ಹೆಚ್ಚು ಸ್ಪೋರ್ಟಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದೇ ಗುಣಲಕ್ಷಣವು ಎರ್ಗಾನಾಮಿಕ್ಸ್ ನಲ್ಲಿ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಎರಡೂ ಬೈಕ್‍ಗಳು ಒಂದೇ ರೀತಿಯ ಫುಟ್‌ಪೆಗ್‌ಗಳು ಮತ್ತು ಸ್ಪ್ಲಿಟ್ ಸೀಟ್‌ಗಳನ್ನು ಪಡೆದರೆ, ಪಲ್ಸರ್ ಎಫ್250 ಎತ್ತರದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ ಮತ್ತು ಹೀಗಾಗಿ ಸ್ಪೋರ್ಟಿ ರೈಡಿಂಗ್ ಪೋಸಿಶನ್ ನೀಡುತ್ತದೆ. ಇನ್ನು ಪಲ್ಸರ್ ಎನ್250 ಸಾಮಾನ್ಯ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಹೊಸ ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಲೆನ್ಸ್ ಸ್ವಲ್ಪಮಟ್ಟಿಗೆ ಮುಚ್ಚಲ್ಪಟ್ಟಿದೆ. ಆದರೆ ಪಲ್ಸರ್ ಎನ್250 ಬೈಕಿನಲ್ಲಿ ಪ್ರೊಜೆಕ್ಟರ್ ಲೆನ್ಸ್ ತೆರೆದಿರುತ್ತದೆ. ಆದರೆ ಇದು ಮುಂಚಿರುವಂತೆ ಕಾಣುತ್ತದೆ. ಬಜಾಜ್ ಪಲ್ಸರ್ ಎಫ್250 ಪಲ್ಸರ್ ಎನ್250 ಬೈಕ್ ಗಿಂತ 2 ಕೆಜಿ ಹೆಚ್ಚು ತೂಕವಿದೆ. ಇದು ಪ್ರಾಥಮಿಕವಾಗಿ ಹೆಚ್ಚುವರಿ ಸೆಮಿ-ಫೇರಿಂಗ್ ಪ್ಲಾಸ್ಟಿಕ್ ಬಿಟ್‌ಗಳಿಂದಾಗಿ .ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ 162 ಕೆಜಿ ತೂಕವನ್ನು ಹೊಂದಿದೆ. ಆದರೆ ಸೆಮಿ-ಫೇರ್ಡ್ ಪಲ್ಸರ್ ಎಫ್250 ಬೈಕ್ 164 ಕೆಜಿ ತೂಕವನ್ನು ಹೊಂದಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಈ ಬಜಾಜ್ ಪಲ್ಸರ್ ಎನ್250 ಬೈಕ್ ಬೆಲೆಯು ರೂ.1.38 ಲಕ್ಷಗಳಾದರೆ, ಪಲ್ಸರ್ ಎಫ್250 ಬೈಕ್ ಬೆಲೆಯು ರೂ.1.40 ಲಕ್ಷಗಳಾಗಿದೆ.. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಇದರಲ್ಲಿ ಪಲ್ಸರ್ ಎಫ್250 ಬೈಕ್ ತುಸು ದುಬಾರಿಯಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಬಜಾಜ್ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್‍ಗಳಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 24.1 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿರುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಉಚಿತ ಬೈಕ್ ಕೇಳಿದ ವ್ಯಕ್ತಿಗೆ ಬೈಕ್ ನೀಡಲಿದೆ ಬಜಾಜ್: ಷರತ್ತು ಅನ್ವಯ

ಇನ್ನು ಈ ಹೊಸ ಬಜಾಜ್ ಪಲ್ಸರ್ ಎನ್250 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ FZ25 ಮತ್ತು ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಕ್ವಾರ್ಟರ್-ಲೀಟರ್ ವಿಭಾಗದಲ್ಲಿ ಕೆಲವು ಇತರ ಬೈಕ್ ಗಳು ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್, ಇತ್ಯಾದಿಗಳನ್ನು ಒಳಗೊಂಡಿವೆ.

Most Read Articles

Kannada
English summary
Bajaj to give free new pulsar 250 to this instagram user condition applied details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X