ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

90ರ ದಶಕದ ಉತ್ತರಾರ್ಧದಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ ಬಜಾಜ್ ಮತ್ತು ಕವಾಸಕಿ ಭಾರತದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದರು. ಜಂಟಿ ಉದ್ಯಮದಲ್ಲಿ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ಕಮ್ಯೂಟರ್ ಬೈಕ್‌ಗಳನ್ನು ಹೊರತಂದಿದ್ದರು.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಅದರಲ್ಲಿ ಬಜಾಜ್ ಕ್ಯಾಲಿಬರ್ ಬೈಕ್ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು, ಇದನ್ನು 1998ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ "ಹೂಡಿಬಾಬಾ" ಎಂಬ ಟ್ಯಾಗ್‌ಲೈನ್ ಅನ್ನು ಒಳಗೊಂಡಿರುವ ಟಿವಿ ಜಾಹೀರಾತುಗಳಲ್ಲಿ ಒಂದಾಗಿದೆ. ಬಜಾಜ್ ಆಟೋ ಇತ್ತೀಚೆಗೆ ಕ್ಯಾಲಿಬರ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಇದರಿಂದ ಕ್ಯಾಲಿಬರ್ ಮಾದರಿಯು ಮತ್ತೆ ಭಾರತೀಯ ಮಾರುಕಟ್ಟೆಗೆ ಮರಳಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಕ್ಯಾಲಿಬರ್ 115 ಬೈಕಿನಲ್ಲಿ ಭಾರತೀಯ ಮತ್ತು ಜಪಾನೀಸ್ ಬೈಕ್ ತಯಾರಕರು ಜಂಟಿಯಾಗಿ ಅಭಿವೃದ್ಧಿಪಡಿಸಿದ 111.6 ಸಿಸಿ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 9.5 ಬಿಹೆಚ್‌ಪಿ ಪವರ್ ಮತ್ತು 9.10 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ 102 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿತ್ತು. ಆದರೆ ಈ ವಿಭಾಗದಲ್ಲಿ ಭಾರತೀಯ ಖರೀದಿದಾರರು ಸಾಮಾನ್ಯವಾಗಿ ಬಯಸುವ ಅನುಕೂಲಕರ ಮೈಲೇಜ್ ಅನ್ನು ಅದು ಹಿಂದಿರುಗಿಸಲಿಲ್ಲ.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ರಬ್ಬರ್ ಬೂಟುಗಳೊಂದಿಗೆ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ 5 ಹಂತದ ಹೊಂದಾಣಿಕೆಯ ಸ್ವಿಂಗ್ ಆರ್ಮ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿತ್ತು.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಈ ಬೈಕ್ ಫ್ಯೂಯಲ್ ಟ್ಯಾಂಕ್ ಮತ್ತು ಫೆಂಡರ್‌ಗಳಲ್ಲಿ ಕೆಲವು ಮೂಲ ಸ್ಟಿಕ್ಕರ್ ಗ್ರಾಫಿಕ್ಸ್‌ನೊಂದಿಗೆ ಅಚ್ಚುಕಟ್ಟಾಗಿ ಮತ್ತು ಸರಳವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಟ್ರೇಡ್‌ಮಾರ್ಕ್ ಅಪ್ಲಿಕೇಶನ್‌ನಲ್ಲಿ ‘ಕ್ಯಾಲಿಬರ್' ನೇಮ್‌ಪ್ಲೇಟ್ ಅನ್ನು ದ್ವಿಚಕ್ರ ವಾಹನಗಳಿಗೆ-ಐಸಿ ಎಂಜಿನ್ ಮತ್ತು ಎಲೆಕ್ಟ್ರಿಕ್ ಚಾಲಿತ ಮಾದರಿಗೆ ಬಳಸಬಹುದು ಎಂದು ಹೇಳುತ್ತದೆ.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಆದರೆ ಇದನ್ನು ಬ್ಯಾಟರಿ ಚಾಲಿತ ಬೈಕ್ ಗಳಿಗಾಗಿ ಬಳಸುವುದು ಅಸಂಭವವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಟಿವಿಎಸ್ ಫಿಯೆರೋ 125 ಮಾನಿಕರ್ ಅನ್ನು ಟ್ರೇಡ್‌ಮಾರ್ಕ್ ಮಾಡಿದ್ದರಿಂದ, 125 ಸಿಸಿ ಮಾದರಿಯ ಹೊಸ ಜನರೇಷನ್ ಕ್ಯಾಲಿಬರ್ ಬೈಕ್ ಆಗಿರುವ ಸಾಧ್ಯತೆಗಳಿದೆ.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಪ್ಲ್ಯಾಟಿನಾ 110 ರಿಂದ ಪಡೆದ 115.45 ಸಿಸಿ, ಇಂಧನ-ಇಂಜೆಕ್ಟ್, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ 7000 ಆರ್‌ಪಿಎಂನಲ್ಲಿ 8.5 ಬಿಹೆಚ್‌ಪಿ ಮತ್ತು 5000 ಆರ್‌ಪಿಎಂನಲ್ಲಿ 9.81 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಕ್ಯಾಲಿಬರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ

ಇನ್ನು 124 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, 2-ವಾಲ್ವ್ ಎಸ್‌ಒಹೆಚ್‌ಸಿ ಎಂಜಿನ್ ಎಂಟ್ರಿ-ಲೆವೆಲ್ ಪಲ್ಸರ್ 125 ಬೈಕಿನಲ್ಲಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 12 ಬಿಹೆಚ್‌ಪಿ ಮತ್ತು 7000 ಆರ್‌ಪಿಎಂನಲ್ಲಿ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಈ ಎರಡೂ ಎಂಜಿನ್ ಗಳನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ಯಾವ ಎಂಜಿನ್ ಬಳಸುತ್ತಾರೆ ಎಂಬುವುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಯು ಬಹಿರಂಗವಾಗಬಹುದು.

Most Read Articles

Kannada
English summary
Bajaj Caliber Trademark Filed. Read In Kannada.
Story first published: Thursday, July 15, 2021, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X