ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ 502ಸಿ ಕ್ರೂಸರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಶೀಘ್ರದಲ್ಲೇ ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಇದೀಗ ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕ್ರೂಸರ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ,10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬ್ರ್ಯಾಂಡ್‌ನ 500 ಸಿಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಲಿಯಾನ್‍ಸಿನೊ ಮತ್ತು ಟಿಆರ್‌ಕೆ 502 ಮಾದರಿಗಳಿಗೂ ಆಧಾರವಾಗಿದೆ.

ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಲಿಯಾನ್‍ಸಿನೊ ಮಾದರಿಗಿಂತ ಮೇಲಿನ ಸ್ಥಾನದಲ್ಲಿ ಇರಿಸಬಹುದು. ಈ ಹೊಸ ಕ್ರೂಸರ್ ಬೈಕಿನ ಬೆಲೆಯು ಸುಮಾರು ರೂ.5 ಲಕ್ಷವಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೈಕಿನ ಅರ್ಬನ್ ಕ್ರೂಸರ್ ವಿನ್ಯಾಸವು ಹೆಚ್ಚು ಜನಪ್ರಿಯವಾದ ಡುಕಾಟಿ ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ.

ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಹೆಡ್‌ಲೈಟ್ ಹೊರತುಪಡಿಸಿ, ದೊಡ್ಡ ಫ್ಯೂಯಲ್ ಟ್ಯಾಂಕ್, ಸೀಟ್ ವಿನ್ಯಾಸ ಮತ್ತು ಸ್ಪ್ಲಿಟ್ ಟೈಲ್-ಲ್ಯಾಂಪ್‌ಗಳು ಸೇರಿದಂತೆ ಉಳಿದ ವಿನ್ಯಾಸವು ಡಯಾವೆಲ್ 1260 ಮದರಿಯಿಂದ ಸ್ಫೂರ್ತಿ ಪಡೆದಿದೆ.

ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ, ಇದೇ ಎಂಜಿನ್ ಅನ್ನು ಬೆನೆಲ್ಲಿ ಲಿಯಾನ್‍ಸಿನೊ ಮತ್ತು ಟಿಆರ್‌ಕೆ 502 ಬೈಕ್ ಗಳಲ್ಲಿ ನೀಡಲಾಗಿದೆ.

ಈ 500 ಸಿಸಿ ಎಂಜಿನ್ ಎಂಜಿನ್ 8,500 ಆರ್‌ಪಿಎಂನಲ್ಲಿ 47.6 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಬೆನೆಲ್ಲಿ 502ಸಿ ಕ್ರೂಸರ್ 2,280 ಎಂಎಂ ಉದ್ದ ಮತ್ತು 1,140 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 1,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 750 ಎಂಎ ಎತ್ತರದ ಸೀಟ್ ಅನ್ನು ಹೊಂದಿದೆ.

ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿರುವ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಇನ್ನು ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 21-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಕ್ರೂಸರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವಲ್ಕನ್ ಎಸ್ ಬೈಕಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.


Click it and Unblock the Notifications








