ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬೆನೆಲ್ಲಿ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯಲ್ಲಿರುವ ಬೈಕ್‌ಗಳ ಬೆಲೆಯನ್ನು ಪರಿಷ್ಕರಿಸಿದೆ. ಇದರಲ್ಲಿ ಮಾರ್ಡನ್-ಕ್ಲಾಸಿಕ್ ಮಾದರಿಯಾದ ಇಂಪೀರಿಯರ್ 400 ಕೂಡ ಒಳಗೊಂಡಿದೆ. ಇದರಿಂದ ಈ ಬೆನೆಲ್ಲಿ ಇಂಪೀರಿಯರ್ 400 ಬೈಕ್ ಕೂಡ ಭಾರತದಲ್ಲಿ ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬೆನೆಲ್ಲಿ ಕಂಪನಿಯು ತನ್ನ ಇಂಪೀರಿಯರ್ 400 ಬೈಕಿನ ಬೆಲೆಯು ರೂ,799 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೆನೆಲ್ಲಿ ಇಂಪೀರಿಯರ್ 400 ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದೀಗ ಬೆನೆಲ್ಲಿ ಇಂಪೀರಿಯರ್ 400 ಬೈಕಿನ ಸ್ವಿಲರ್ ಮಾದರಿಯ ಬೆಲೆಯು ರೂ.1,89,799 ಗಳಾದರೆ ರೆಡ್-ಬ್ಲ್ಯಾಕ್ ಆಯ್ಕೆಯ ಬೆಲೆಯು ರೂ.1,93,976 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 374 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಈ ಎಂಜಿನ್ 6000 ಆರ್‌ಪಿಎಂನಲ್ಲಿ 20 ಬಿಹೆಚ್‌ಪಿ ಪವರ್ ಮತ್ತು 3500 ಆರ್‌ಪಿಎಂನಲ್ಲಿ 29 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದ್ದು, ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್‌ನಲ್ಲಿ ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಹೊಸ ಇಂಪೀರಿಯಲ್ 400 ಬೈಕ್ ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ. ಇನ್ನು ಮುಂಭಾಗ ಹಾಗೂ ಹಿಂಭಾಗದಲ್ಲಿ 100/90 ಮತ್ತು 130/80 ವಿಭಾಗದ ಟಯರ್‌ಗಳನ್ನು ಹೊಂದಿವೆ

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರೀಲೋಡ್ ಹೊಂದಾಣಿಕೆ ಮಾಡಬಹುದಾದ ಡ್ಯುಯಲ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ 240 ಎಂಎಂ ಡಿಸ್ಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಇಂಪೀರಿಯಲ್ 400 ಬೈಕ್

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವ ಬೈಕುಗಳಿಗೆ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಬೆಲೆ ಏರಿಕೆ ಪಡೆದಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Tuesday, June 29, 2021, 19:22 [IST]
English summary
Benelli Imperial 200 Is Now Slightly More Expesive. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+