ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಟಿಆರ್‌ಕೆ 502 ಮತ್ತು ಟಿಆರ್‌ಕೆ 502ಎಕ್ಸ್ ಎಂಬ ಅಡ್ವೆಂಚರ್ ಟೂರರ್ ಬೈಕ್‌ಗಳ ಮಾರುಕಟ್ಟೆಯಲ್ಲಿ ಹೆಚ್ಚಿಸಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಈ ಬೆನೆಲ್ಲಿ ಟಿಆರ್‌ಕೆ 502 ಮತ್ತು ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ಗಳು ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಈ ಬೆನೆಲ್ಲಿ ಟಿಆರ್‌ಕೆ 502 ಮತ್ತು ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್‌ಗಳ ಬೆಲೆಯನ್ನು ರೂ.6,000 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಲೆಯ ಬಳಿಕ ಎರಡು ಬೈಕ್‌ಗಳ ಬಣ್ಣಗಳ ಆಯ್ಕೆಯ ಮಾದರಿಗಳ ಬೆಲೆಗಳ ಮಾಹಿತಿ, ಬೆನೆಲ್ಲಿ ಟಿಆರ್‌ಕೆ 502 ಬೈಕಿನ ಗ್ರೇ ಬಣ್ಣದ ಮಾದರಿಯ ಬೆಲೆಯು ರೂ.4,95,900 ಗಳಾದರೆ ವೈಟ್, ರೆಡ್ ಬಣ್ಣಗಳ ಮಾದರಿಗೆ ರೂ.4,95,900 ಗಳಾಗಿದೆ. ಇನ್ನು ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕಿನ ಗ್ರೇ ಬಣ್ಣದ ಮಾದರಿಯ ಬೆಲೆಯು ರೂ.5,25,900 ಗಳಾದರೆ, ವೈಟ್, ರೆಡ್ ಬಣ್ಣಗಳ ಮಾದರಿಗೆ ರೂ.5,35,900 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಈ ಮೇಲೆ ಇರುವ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಬೆನೆಲ್ಲಿ ಟಿಆರ್‌ಕೆ 502 ಬೈಕ್ ರೋಡ್ ಆಧಾರಿತ ಟೂರಿಂಗ್ ಬೈಕ್ ಆಗಿದ್ದರೆ, ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಆಫ್-ರೋಡ್ ಆಧಾರಿತ ಅಡ್ವೆಂಚರ್ ಬೈಕ್ ಆಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಈ ಎರಡು ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ 499 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 46.8 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ 17 ಇಂಚಿನ ಅಲಾ ವ್ಹೀಲ್ ಗಳು ಮತ್ತು ಅಂಡರ್ ಬೆಲ್ಲಿ ಎಕ್ಸಾಸ್ಟ್ ಅನ್ನು ಹೊಂದಿದೆ. ಇನ್ನು ಇದರೊಂದಿಗೆ ಅಲ್ಯೂಮಿನಿಯಂ ಫ್ರೇಮ್ ನಕಲ್ ಗಾರ್ಡ್‌ಗಳನ್ನು ಸಹ ಅಳವಡಿಸಿದ್ದಾರೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಬೈಕ್ ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, ಅಲ್ಯೂಮಿನಿಯಂ-ಫ್ರೇಮ್ ನಕಲ್ ಗಾರ್ಡ್‌ಗಳು, ಮರುವಿನ್ಯಾಸಗೊಳಿಸಲಾದ ಮೀರರ್ ಮತ್ತು ಹೊಸ ಹ್ಯಾಂಡಲ್‌ಬಾರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಬೈಕಿನಲ್ಲಿ ವಿಭಿನ್ನ ವಿನ್ಯಾಸದ ಎಲ್ಸಿಡಿ ಮತ್ತು ಬಿಳಿ ಬ್ಯಾಕ್ಲಿಟ್ ಅನಲಾಗ್ ಟ್ಯಾಕೋಮೀಟರ್ ನೊಂದಿಗೆ ಪರಿಷ್ಕೃತ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಪಡೆಯುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಈ ಬೈಕಿನ ಮುಂಭಾಗ 19 ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವೀಲ್ ಅನ್ನು ಅಳವಡಿಸಿದೆ. ಇನ್ನು ಈ ಅಡ್ವೆಂಚರ್ ಟೂರರ್ ಬೈಕ್ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಇನ್ನು ಈ ಬೈಕಿನಲ್ಲಿ ದೊಡ್ಡ 20-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಲಾಂಗ್ ರೈಡ್ ತೆರಳುವಾಗ ಇದರಲ್ಲಿ ದೊಡ್ಡ ಪ್ಯೂಯಲ್ ಟ್ಯಾಂಕ್ ನೀಡಿರುವುದು ಉತ್ತಮ ಸಹಕಾರಿಯಾಗಿರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಬೈಕ್‌ಗಳು

ಹೊಸ ಅಲ್ಯೂಮಿನಿಯಂ ರೇರ್ ಬಾಕ್ಸ್ ಬ್ರ್ಯಾಕೆಟ್ ಅನ್ನು ನೀಡಿದೆ. ಈ ಹೊಸ ಬೈಕ್ 2,220 ಮಿ.ಮೀ ಉದ್ದ, 915 ಮಿ.ಮೀ ಅಗಲ ಮತ್ತು 1,505 ಮಿ.ಮೀ ವ್ಜೀಲ್ ಬೇಸ್ ಅನ್ನು ಹೊಂದಿದೆ.ಇನ್ನು ಈ ಬೈಕಿನ ಸೀಟ್ 840 ಎಂಎಂ ಎತ್ತರವನ್ನು ಹೊಂದಿದೆ.ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಅನ್ನು ಪಡೆಯುತ್ತದೆ.

Most Read Articles

Kannada
English summary
Benelli TRK502 and TRK502X Prices Increased. Read In Kannada.
Story first published: Thursday, June 24, 2021, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X