ಕೋವಿಡ್ ಸಂಕಷ್ಟದಲ್ಲೂ ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಪ್ರೀಮಿಯಂ ಬೈಕ್ ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯ ಗ್ರಾಹಕರ ಬೇಡಿಕೆಯೆಂತೆ ಹೊಸ ಮಾರಾಟ ಮಳಿಗೆಗಳನ್ನು ದೇಶಾದ್ಯಂತ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದ್ದು, ಇತ್ತೀಚೆಗೆ ಕಂಪನಿಯು ಜಮ್ಮುವಿನಲ್ಲಿ ತನ್ನ 42ನೇ ಶೋರೂಂಗೆ ಚಾಲನೆ ನೀಡಿತು.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಬೆನೆಲ್ಲಿ ಇಂಡಿಯಾ ಕಳೆದ ವರ್ಷದ ಬೈಕ್ ಮಾರಾಟದಲ್ಲಿ ಬರೋಬ್ಬರಿ ಶೇ. 103ರಷ್ಟು ಬೆಳವಣಿಗೆ ಸಾಧಿಸಿದ್ದು, ಕ್ಲಾಸಿಕ್ ಬೈಕ್ ಮಾದರಿಯಾದ ಇಂಪೀರಿಯಲ್ 400 ಆವೃತ್ತಿಯ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳತ್ತಿದೆ. ಈ ಹಿನ್ನಲೆಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಬೈಕ್ ಮಾದರಿಗಳೊಂದಿಗೆ ಮಾರಾಟ ಮಳಿಗೆಗಳನ್ನು ಸಹ ವಿಸ್ತರಿಸುತ್ತಿದ್ದು, ಇಂದು ತನ್ನ 42ನೇ ಮಾರಾಟ ಮಳಿಗೆಗೆ ಭರ್ಜರಿ ಚಾಲನೆ ನೀಡಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

2020ರ ಆರಂಭದಲ್ಲಿ ಕೇವಲ ಬೆರಳಣಿಕೆಯಷ್ಟು ಮಾರಾಟ ಮಳಿಗೆಗಳ ಸೌಲಭ್ಯವನ್ನು ಹೊಂದಿದ್ದ ಬೆನೆಲ್ಲಿ ಇಂಡಿಯಾ ಕಂಪನಿಯು ಇದೀಗ ಹೊಸ ಉತ್ಪನ್ನಗಳ ಜೊತೆಗೆ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ ಕಳೆದ 1 ವರ್ಷದಲ್ಲಿ 27 ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಕೇವಲ ಮಾಹಾನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಮಾರಾಟ ಮಳಿಗೆಗಳನ್ನು ತೆರೆಯುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಬೈಕ್ ಉತ್ಪನ್ನಗಳನ್ನು ಸಹ ಹೆಚ್ಚಿಸುತ್ತಿದ್ದು, ಹೊಸ ಬೈಕ್ ಮಾರಾಟ ಮಳಿಗೆಗಳಲ್ಲಿ ಕೆಫೆ ಜೋನ್, ಆಕ್ಸೆಸರಿಸ್‌ಗಾಗಿ ಪ್ರತ್ಯೇಕ ವಿಭಾಗಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಇನ್ನು ಬೆನೆಲ್ಲಿ ಕಂಪನಿಯು ಸದ್ಯ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್, ಟಿಆರ್‌ಕೆ 505 ಎಕ್ಸ್, ಲಿಯೊನ್ಸಿನೊ 500, 302 ಎಸ್, 302 ಆರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಇಂಪೀರಿಯರ್ 400 ಬಿಎಸ್-6 ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಬೈಕ್ ಮಾದರಿಗಳ ಪೈಕಿ ಇಂಪೀರಿಯರ್ 400 ಕ್ಲಾಸಿಕ್ ಬೈಕ್ ಮಾದರಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿರುವ ಹೊಸ ಬೈಕ್ ಮಾದರಿಯು ಹೊಸ ಮಾರಾಟ ಮಳಿಗೆಗಳಿಂದಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇತ್ತೀಚೆಗೆ ಕಂಪನಿಯು ಹೊಸ ತಂತ್ರಜ್ಞಾನ ಪ್ರೇರಿತ ಟಿಆರ್‌ಕೆ 502ಎಕ್ಸ್ ಬಿಡುಗಡೆ ಮಾಡಿತು.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಹಾಗೆಯೇ ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಸ್ಥಳೀಯವಾಗಿ ಲಭ್ಯವಾಗುವ ಬಿಡಿಭಾಗಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಯೋಜನೆಯ ಪರಿಣಾಮ ಬೈಕ್ ಉತ್ಪಾದನಾ ವೆಚ್ಚದಲ್ಲಿ ಸಾಕಷ್ಟು ಇಳಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಆತ್ಮ ನಿರ್ಭರ ಭಾರತ ಯೋಜನೆ ಅಡಿ ಹಲವು ವಾಹನ ಉತ್ಪಾದನಾ ಕಂಪನಿಗಳು ಸ್ಥಳೀಯವಾಗಿ ಲಭ್ಯವಾಗುವ ಆಟೋ ಬಿಡಿಭಾಗಗಳಿಗೆ ಆದ್ಯತೆ ನೀಡುತ್ತಿರುವ ಪರಿಣಾಮ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತಿದ್ದು, ಬೆನೆಲ್ಲಿ ಇಂಡಿಯಾ ಕಂಪನಿಯು ಸಹ ತನ್ನ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯಲ್ಲಿ ರೂ.10 ಸಾವಿರ ಇಳಿಕೆ ಮಾಡುವ ಮೂಲಕ ಕೇಂದ್ರದ ಹೊಸ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಹೊಸ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ ಬೆನೆಲ್ಲಿ

ಬೆನೆಲ್ಲಿ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.99 ಲಕ್ಷ ಬೆಲೆ ಹೊಂದಿದ್ದ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯನ್ನು ರೂ. 1.89 ಲಕ್ಷಕ್ಕೆ ಇಳಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣ ಪ್ರಮಾಣ ಉತ್ಪಾದನೆಯಾದ ವಿವಿಧ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

Most Read Articles

Kannada
English summary
Benelli India Launches its 42nd Exclusive Dealership. Read in Kannada.
Story first published: Wednesday, June 23, 2021, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X