ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಬಿಎಸ್-6 ಲಿಯಾನ್‍ಸಿನೊ 500 ಬೈಕಿನ ಬೆಲೆಯನ್ನು ಪರಿಷ್ಕರಿಸಿದೆ. ಇದೀಗ ಈ ಬೆನೆಲ್ಲಿ ಲಿಯಾನ್‍ಸಿನೊ 500 ಮಿಡಲ್ ವೇಟ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಎರಡು ಮಾದರಿಗಳು ಕೂಡ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇದೀಗ ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನ ಸ್ಟೀಲ್ ಗ್ರೇ ಬಣ್ಣದ ಮಾದರಿಯ ಬೆಲೆಯು ರೂ.4,69,900 ಗಳಾದರೆ, ಲಿಯಾನ್‍ಸಿನೊ ರೆಡ್ ಬಣ್ಣದ ಮಾದರಿಯ ಬೆಲೆಯು ರೂ,4,79,900 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಂಡಿತು.

ಬಿಎಸ್-6 ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನಲ್ಲಿ 499ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 4500 ಆರ್‌ಪಿಎಂನಲ್ಲಿ 45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಹೊಸ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್ ರೆಟ್ರೊ ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಈ ಮಿಡಲ್ ವೇಟ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ 2021ರ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿ ಇದ್ದ ಅದೇ ಫೀಚರ್ ಗಳನ್ನು ಮುಂದುವರೆಸಲಾಗಿದೆ. ಇನ್ನು ಈ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕ್ಲಸ್ಟರ್ ಓಡೋ ಮೀಟರ್, ಫ್ಯೂಯಲ್ ಗೇಜ್, ಸ್ಪೀಡ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬಿಎಸ್-6 ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಲೋ ಸೆಟ್ ಹ್ಯಾಂಡಲ್‌ಬಾರ್, ಹಿಂಭಾಗದಲ್ಲಿ ಮಿನಿಮಲ್ ಪ್ಯಾನೆಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ಮೆಟಾಲಿಕ್ ಆರ್ನಾಮೆಂಟ್‍ಗಳಿವೆ. ಇದರಂದಿಗೆ ಎಲ್ಇಡಿ ಡಿಆರ್‍ಎಲ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್‍ಗಳನ್ನು ಹೊಂದಿದೆ.

ಸ್ಕ್ರ್ಯಾಂಬ್ಲರ್ ಶೈಲಿಯ ಈ ಬೈಕ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿದೆ. ಲಿಯಾನ್‍ಸಿನೊ 500 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ 50 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ. ಇವುಗಳು ಪ್ರಿ ಲೋಡ್ ಅಡ್ಜಸ್ಟ್ ಮೆಂಟ್ ಹೊಂದಿವೆ.

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳಿವೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.


Click it and Unblock the Notifications