ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ 502ಸಿ ಕ್ರೂಸರ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೆನೆಲ್ಲಿ 502ಸಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.98 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಬೆನೆಲ್ಲಿ ಕಂಪನಿಯು ಹೊಸ 502ಸಿ ಕ್ರೂಸರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಕ್ರೂಸರ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ,10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬ್ರ್ಯಾಂಡ್‌ನ 500 ಸಿಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಲಿಯಾನ್‍‍ಸಿನೊ ಮತ್ತು ಟಿಆರ್‌ಕೆ 502 ಮಾದರಿಗಳಿಗೂ ಆಧಾರವಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಹೊಸ ಬೆನೆಲ್ಲಿ 502ಸಿ ಬೈಕ್ ಮ್ಯಾಟ್ ಕಾಗ್ನ್ಯಾಕ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಆಯ್ಕೆಗಳನ್ನು ಲಭ್ಯವಿದೆ. ಇನ್ನು ಹೊಸ ಬೈಕಿನ ಅರ್ಬನ್ ಕ್ರೂಸರ್ ವಿನ್ಯಾಸವು ಹೆಚ್ಚು ಜನಪ್ರಿಯವಾದ ಡುಕಾಟಿ ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಬಲ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್ ಟೈಲ್-ಲ್ಯಾಂಪ್‌ಗಳು ಹೊಂದಿದೆ. ಇನ್ನು ಈ ಬೈಕಿನಲ್ಲಿ ಸಂಪೂರ್ಣವಾದ ಡಿಜಿಟಲ್ ಟಿಎಫ್ ಡಿಸ್ ಪ್ಲೇಯನ್ನು ಹೊಂದಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ, ಇದೇ ಎಂಜಿನ್ ಅನ್ನು ಬೆನೆಲ್ಲಿ ಲಿಯಾನ್‍‍ಸಿನೊ ಮತ್ತು ಟಿಆರ್‌ಕೆ 502 ಬೈಕ್ ಗಳಿಗೆ ನೀಡಲಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಈ 500ಸಿಸಿ ಎಂಜಿನ್ ಎಂಜಿನ್ 8,500 ಆರ್‌ಪಿಎಂನಲ್ಲಿ 46 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿರುವ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ 2,280 ಎಂಎಂ ಉದ್ದ ಮತ್ತು 1,140 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 1,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 750 ಎಂಎಂ ಎತ್ತರದ ಸೀಟ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ 502ಸಿ ಬೈಕ್ ಬಿಡುಗಡೆ: ಬೆಲೆ ರೂ.4.98 ಲಕ್ಷ

ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 21-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಕ್ರೂಸರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವಲ್ಕನ್ ಎಸ್ ಮತ್ತು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, July 29, 2021, 13:46 [IST]
English summary
Benelli 502c Launched In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+