ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಸ್ಕ್ರ್ಯಾಂಬ್ಲರ್-ಶೈಲಿಯ ಮಾದರಿಯ ಹೊಸ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಹೊಸ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಮುಖ್ಯವಾಗಿ ಇದು ಕ್ಲಾಸಿಕ್ ಕೆಫೆ-ರೇಸರ್ ನಂತೆ ಕಾಣುವಂತೆ ಮಾಡಿದೆ. ಲಿಯಾನ್‍‍ಸಿನೊ 500 ಅದರ ಸ್ಟಾಕ್ ರೂಪದಲ್ಲಿಯೂ ಸಹ ಸುಂದರವಾಗಿ ಕಾಣುವ ಬೈಕ್ ಆಗಿದೆ. ಆದರೆ ಸ್ಪೋರ್ಟ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಈ ಬೈಕ್ ವೃತ್ತಾಕಾರದ ಹೆಡ್‌ಲ್ಯಾಂಪ್ ಅನ್ನು ಉಳಿಸಿಕೊಳ್ಳಲಾಗಿದೆ ಆದರೆ ಇದು ಈಗ ದುಂಡಾದ ಫಾರ್ಮಿಂಗ್‌ನಿಂದ ಆವೃತವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಕ್ಲಿಪ್-ಆನ್ ಯುನಿಟ್‌ನಿಂದ ಬದಲಾಯಿಸಲಾಗಿದೆ, ಆದರೆ ಡಬಲ್-ಬ್ಯಾರೆಲ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕಿನಲ್ಲಿ ಅದೇ 500 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 47.5 ಬಿಹೆಚ್‌ಪಿ ಪವರ್ ಮತ್ತು 4500 ಆರ್‌ಪಿಎಂನಲ್ಲಿ 47 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ರೆಟ್ರೊ ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಇನ್ನು ಲಿಯಾನ್‍‍ಸಿನೊ 500 ಸ್ಟ್ಯಾಂಡರ್ಡ್ ಬೈಕಿನಲ್ಲಿರುವ ಅದೇ ಫೀಚರ್ ಗಳನ್ನು ಇದರಲ್ಲಿಯು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಸ್ಕ್ರ್ಯಾಂಬ್ಲರ್ ಶೈಲಿಯ ಈ ಬೈಕ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿದೆ. ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ 50 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಇವುಗಳು ಪ್ರಿ ಲೋಡ್ ಅಡ್ಜಸ್ಟ್ ಮೆಂಟ್ ಹೊಂದಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಲೋ ಸೆಟ್ ಹ್ಯಾಂಡಲ್‌ಬಾರ್‌, ಹಿಂಭಾಗದಲ್ಲಿ ಮಿನಿಮಲ್ ಪ್ಯಾನೆಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ಮೆಟಾಲಿಕ್ ಆರ್ನಾಮೆಂಟ್‍‍ಗಳಿವೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಲಿಯಾನ್‍‍ಸಿನೊ 500 ಪಾಡ್ ಶೈಲಿಯ ವಿನ್ಯಾಸದಲ್ಲಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಎಲ್ಇಡಿ ಡಿಆರ್‍ಎಲ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್‍‍‍ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್ ಗಳನ್ನು ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬೆನೆಲ್ಲಿ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಬಿಡುಗಡೆ

ಬೆನೆಲ್ಲಿ ಈಗಾಗಲೇ ಭಾರತದಲ್ಲಿ ಸ್ಟ್ಯಾಂಡರ್ಡ್ ಲಿಯೊನ್ಸಿನೊ 500 ಬೈಕನ್ನು ಬಾರತದಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಹೊಸ ಲಿಯಾನ್‍‍ಸಿನೊ 500 ಸ್ಪೋರ್ಟ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

More from DriveSpark

Article Published On: Sunday, June 6, 2021, 13:00 [IST]
English summary
Benelli Leoncino 500 Sport Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+