ಹೊಸ Benelli TRK 251 ಅಡ್ವೆಂಚರ್ ಬೈಕ್ ಟೀಸರ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಟಿಆರ್‌ಕೆ 502 ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಇದರ ನಂತರ ಬೆನೆಲ್ಲಿ ಕಂಪನಿಯು ಭಾರತದಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಇದೀಗ ಬೆನೆಲ್ಲಿ ಕಂಪನಿಯು ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಬೈಕ್ ಅನ್ನು ಬಿಡುಗಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ ಮತ್ತು ಬಹುಶಃ ಭಾರತದಲ್ಲಿ ಇಂಪೀರಿಯಲ್ 400 ಗಿಂತ ಹೆಚ್ಚು ಕೈಗೆಟುಕುವ ಬೈಕ್ ಆಗಲಿದೆ, ಸಧ್ಯ ಪೀರಿಯಲ್ 400 ಬೆನೆಲ್ಲಿ ಕಂಪನಿಯ ದೇಶದಲ್ಲಿ ಅವರ ಅತ್ಯಂತ ಕೈಗೆಟುಕುವ ಮತ್ತು ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. 2021ರ ಆರಂಭದಲ್ಲಿ, ಬೆನೆಲ್ಲಿ 250 ಸಿಸಿ ನಿಂದ 600 ಸಿಸಿ ವ್ಯಾಪ್ತಿಯಲ್ಲಿ 7 ಹೊಸ ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿತ್ತು ಈ 7 ರಲ್ಲಿ ಬೆನೆಲ್ಲಿ ಈಗಾಗಲೇ ಅವುಗಳಲ್ಲಿ 4 ಅನ್ನು 2021 ರಲ್ಲಿ ಬಿಡುಗಡೆ ಮಾಡಿದೆ.

ಅವರು ಶೀಘ್ರದಲ್ಲೇ ಈ ಯೋಜನೆಯಡಿಯಲ್ಲಿ ತಮ್ಮ 5ನೇ ಬೈಕ್ ಅನ್ನು.ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬೆನೆಲ್ಲಿ ಇಂಡಿಯಾ ತನ್ನ ಮುಂಬರುವ ಮೋಟಾರ್‌ಸೈಕಲ್‌ನ ಹೊಸ ಟೀಸರ್ ಅನ್ನು ಭಾರತಕ್ಕಾಗಿ ಹಂಚಿಕೊಂಡಿದೆ. ಟೀಸರ್‌ನಲ್ಲಿ ಹೆಚ್ಚಿನದನ್ನು ಬಹಿರಂಗಪಡಿಸದಿದ್ದರೂ, ಬೆನೆಲ್ಲಿ ಅಭಿಮಾನಿಗಳಿಗೆ ಟೀಸರ್ ಪರಿಚಿತವಾಗಿರಬಹುದು.

ಕೆಲವು ಬೆನೆಲ್ಲಿ ಅಭಿಮಾನಿಗಳಿಗೆ ಈ ಟೀಸರ್ ಪರಿಚಿತವಾಗಿರಲು ಕಾರಣ, ಇದು 2019 ರ ಅದೇ ಟೀಸರ್ ಆಗಿದೆ, ಬೆನೆಲ್ಲಿ ಇಂಡಿಯಾ ತಮ್ಮ ಇತ್ತೀಚಿನ ಟೀಸರ್‌ನಲ್ಲಿ ಅದೇ ಟೀಸರ್‌ನ ಭಾಗವನ್ನು ಬಳಸಿದೆ. ಭಾರತದಲ್ಲಿ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ 250 ಸಿಸಿ ಬೈಕ್ ನಿಂದ TRK 502 ನಿಂದ ಸ್ಫೂರ್ತಿ ಪಡೆದಿದೆ. ಇದನ್ನು ಸ್ಟೀಲ್ ಟ್ಯೂಬ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ. ಈ ಬೆನೆಲ್ಲಿ ಟಿಆರ್‌ಕೆ 251 ಬೈಕಿನಲ್ಲಿ 17 ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು 110/70 ಮುಂಭಾಗ ಮತ್ತು 150/60 ಹಿಂಭಾಗದ ಟೈರ್‌ಗಳೊಂದಿಗೆ ಹೊಂದಿದೆ.

ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 51 ಎಂಎಂ ಮೊನೊಶಾಕ್ ಅನ್ನು ಪಡೆಯುತ್ತದೆ.

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 280 ಎಂಎಂ ಸಿಂಗಲ್ ಫ್ಲೋಟಿಂಗ್ ಡಿಸ್ಕ್ ಮತ್ತು 4 ಪಿಸ್ಟನ್ ಕ್ಯಾಲಿಪರ್ ಜೊತೆಗೆ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ವಿಶಿಷ್ಟವಾದ ಮುಂಭಾಗದ ಮಡ್‌ಗಾರ್ಡ್ ಮತ್ತು ಎತ್ತರದ ವಿಂಡ್‌ಶೀಲ್ಡ್ ಅನ್ನು ಹೆಚ್ಚಿನ ವೇಗದಲ್ಲಿಯೂ ಸಹ ದೂರದವರೆಗೆ ಸವಾರರಿಗೆ ಉತ್ತಮ ರಕ್ಷಣೆ ನೀಡುತ್ತದೆ.

ವೈಡ್ ಹ್ಯಾಂಡಲ್‌ಬಾರ್‌ಗಳು ಉತ್ತಮ ಕಂಟ್ರೋಲ್ ಗಳನ್ನು ನೀಡುತ್ತವೆ ಆದರೆ ಸಂಪೂರ್ಣ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸ್ಪ್ಲಿಟ್ ಪಿಲಿಯನ್ ರೈಡರ್ ಸೀಟ್, ಲಾಂಗ್ ಗ್ರಾಬ್ ಹ್ಯಾಂಡಲ್‌ಗಳು ಮತ್ತು ಕಾಂಪ್ಯಾಕ್ಟ್ ಎಲ್ಇಡಿ ಟೈಲ್ ಲ್ಯಾಂಪ್ ಕೂಡ ಈ ಆಫ್ ರೋಡರ್‌ನ ವೈಶಿಷ್ಟ್ಯಗಳ ಭಾಗವಾಗಿದೆ.

ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕಿನಲ್ಲಿ 250 ಸಿಸಿ ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್ ಮೋಟಾರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 26 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 21 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ವೈಟ್ ಮತ್ತು ಅರೇಂಜ್ ಬಣ್ಣದ ಸೆಮಿ-ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಯಾಕ್‌ಲಿಟ್, ಹೊಸ ಹ್ಯಾಂಡಲ್‌ಬಾರ್, ಪರಿಷ್ಕೃತ ಬಾಡಿ ಗ್ರಾಫಿಕ್ಸ್ ಮತ್ತು ಇದರ ಕಂಫರ್ಟ್ ಲೆವೆಲ್ ಕೂಡ ಹೆಚ್ಚಾಗಿದೆ. ಈ ಬೈಕಿನ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಬೆನೆಲ್ಲಿ ಮರುವಿನ್ಯಾಸಗೊಳಿಸಿದ ಸೈಡ್ ಮೀರರ್ ಗಳನ್ನು ಅಳವಡಿಸಿದ್ದಾರೆ. ಇನ್ನು ಅಲ್ಯೂಮಿನಿಯಂ ಫ್ರೇಮ್ ನಕಲ್ ಗಾರ್ಡ್‌ಗಳನ್ನು ಸಹ ಅಳವಡಿಸಿದ್ದಾರೆ.

ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ 500ಸಿಸಿ ಲಿಕ್ವಿಡ್-ಕೂಲ್ಡ್ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಎಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಇದರ ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿದೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಹೊಂದಿದೆ.

ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕ್ ಬಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕಿನ ಬೆಲೆಯು ಅಂದಾಜು ರೂ.2.5 ಲಕ್ಷದಿಂದ ರೂ.3.ಲಕ್ಷದವರೆಗೆ ಇರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಅಡ್ವೆಂಚರ್ 250 ಬೈಕಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








