ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್

ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್

ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಜೊತೆಗೆ ವಿವಿಧ ಖಾಸಗಿ ಕಂಪನಿಗಳು ಸಹ ಇವಿ ವಾಹನಗಳ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇತ್ತೀಚೆಗೆ ಬಿಲೈವ್ ಕಂಪನಿಯು ಸಹ ಇವಿ ವಾಹನಗಳ ಮಾರಾಟ ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ್ದು, ಒಂದೇ ಸೂರಿನಡಿ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ಬೃಹತ್ ಯೋಜನೆಗೆ ಚಾಲನೆ ನೀಡಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್

ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಎಲೆಕ್ಟ್ರಿಕ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದರೂ ಸೀಮಿತ ಬಂಡವಾಳ ಪರಿಣಾಮ ಕೆಲವು ಕೆಲವು ಕಂಪನಿಗಳನ್ನು ಹೊರತುಪಡಿಸಿ ಹಲವು ಕಂಪನಿಗಳು ಕೆಲವೇ ನಗರಗಳಿಗೆ ಮಾತ್ರ ಸೀಮಿತವಾಗಿವೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್

ಹೀಗಾಗಿ ವಿವಿಧ ಬ್ರಾಂಡ್‌ಗಳನ್ನು ಒಂದೇ ಸೂರಿನಡಿ ಮಾರಾಟಗೊಳಿಸಲು ಮುಂದಾಗಿರುವ ಬಿಲೈವ್ ಕಂಪನಿಯು ಮಲ್ಟಿ ಬ್ರಾಂಡ್ ಇವಿ ವಾಹನ ಮಾರಾಟಗಳನ್ನು ಆರಂಭಿಸಿದ್ದು, ಮುಂದಿನ ಕೆಲ ವರ್ಷಗಳಲ್ಲಿ ದೇಶಾದ್ಯಂತ ಸುಮಾರು 100 ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್

ಬಿಲೈವ್ ಕಂಪನಿಯು ಈಗಾಗಲೇ ಪ್ರಮುಖ ಪ್ರವಾಸದ್ಯೋಮ ಸ್ಥಳಗಳಲ್ಲಿ ಇವಿ ವಾಹನಗಳೊಂದಿಗೆ ಇಕೋ ಟೂರಿಸಂ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಉದ್ಯಮ ವ್ಯವಹಾರಕ್ಕೆ ಚಾಲನೆ ನೀಡಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಇವಿ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಂಪಿಯರ್, ಹೀರೋ ಎಲೆಕ್ಟ್ರಿಕ್, ಎಥರ್ ಸೇರಿದಂತೆ ವಿವಿಧ ಕಂಪನಿಗಳ ನಿರ್ಮಾಣದ ಇವಿ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ತಮ್ಮ ಬಜೆಟ್‌ಗೆ ತಕ್ಕಂತೆ ವಿವಿಧ ಬ್ರಾಂಡ್ ಇವಿ ವಾಹನಗಳನ್ನು ಒಂದೇ ಸೂರಿನಡಿ ಖರೀದಿಸಬಹುದಾಗಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಇನ್ನು ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ವಿವಿಧ ಸರ್ಕಾರವು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಳ್ಳುತ್ತಿವೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಜೊತೆಗೆ ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಬಸ್‌ಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗುತ್ತಿದ್ದು, ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಪರಿಣಾಮ ಹೊಸ ಬದಲಾವಣೆಯು ಅನಿವಾರ್ಯವಾಗಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಇದರೊಂದಿಗೆ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವಲ್ಲಿ ಬ್ಯಾಟರಿ ವಿನಿಯಮ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತಿದ್ದು, ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸುವ ಬ್ಯಾಟರಿ ವಿನಿಯಮ ಕೇಂದ್ರಗಳ ಮೇಲೆ ಹೆಚ್ಚಿನ ಹೂಡಿಕೆ ಹರಿದುಬರುತ್ತಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಬ್ಯಾಟರಿ ವಿನಿಯಮ ಕೇಂದ್ರಗಳ ಮೇಲೆ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲ ಖಾಸಗಿ ಕಂಪನಿಗಳು ಸಹ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದು, ಸಾಮಾನ್ಯ ಚಾರ್ಜರ್‌ ಮೂಲಕ ಚಾರ್ಜ್ ಮಾಡಲು ಆಗಬಹುದಾದ ಸಮಯ ವ್ಯರ್ಥವನ್ನು ತಡೆಯಲು ಬ್ಯಾಟರಿ ವಿನಿಯಮ ಕೇಂದ್ರ ಸಹಕಾರಿಯಾಗಿವೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಬ್ಯಾಟರಿ ವಿನಿಯಮ ಕೇಂದ್ರಗಳಲ್ಲಿ ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಿದ್ದು, ವಿವಿಧ ಮಾದರಿಯ ಬ್ಯಾಟರಿ ಮಾದರಿಗಳಿಗೆ ಅನುಗುಣವಾಗಿ ಬ್ಯಾಟರಿ ಸೌಲಭ್ಯವನ್ನು ಬದಲಿಸಿಕೊಳ್ಳಬಹುದಾಗಿದೆ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವುದೇ ಒಂದು ಇವಿ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಕನಿಷ್ಠ 90 ನಿಮಿಷಗಳಿಂದ 8 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಸ್ವಂತ ಬಳಕೆಯ ವಾಹನಗಳಿಗೆ ಇದು ಅನುಕೂಲವಾಗಿದ್ದರೂ ವಾಣಿಜ್ಯ ಬಳಕೆಯ ಇವಿ ವಾಹನಗಳ ಬ್ಯಾಟರಿ ಚಾರ್ಜಿಂಗ್ ಮಾಡಲು ಇಷ್ಟು ಸಮಯವನ್ನು ತೆಗೆದುಕೊಂಡಲ್ಲಿ ಖಂಡಿತವಾಗಿಯೂ ಅದು ಇವಿ ವಾಹನಗಳ ಹೆಚ್ಚಳ ಗುರಿಯನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ.

ಮಲ್ಟಿ ಬ್ರಾಂಡ್ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ಆರಂಭಿಸಿದ ಬಿಲೈವ್ ಇವಿ ಕಂಪನಿ

ಹೀಗಾಗಿ ಪೆಟ್ರೋಲ್ ಬಂಕ್‌ಗಳ ಮಾದರಿಯಲ್ಲಿ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ಹೆಚ್ಚಿಸಲು ಮುಂದಾಗಿರುವ ಪ್ರಮುಖ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಹೆಚ್ಚಿಸಲು ಮುಂದಾಗುತ್ತಿವೆ.

Most Read Articles

Kannada
English summary
Blive launch multi brand ev store platform details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X