ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ 2022ರ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳ ಬಣ್ಣಗಳನ್ನು ನವೀಕರಿಸಿದೆ. 2022ರ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳು ಹೊಸ ಬಣ್ಣಗಳ ಆಯ್ಜೆಯನ್ನು ಪಡೆದುಕೊಂಡಿವೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ರೆಡ್ ರಿಮ್ಸ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಟು ಹೊಂದಿರುವ ಕಯನೈಟ್ ಬ್ಲೂ ಮೆಟಾಲಿಕ್ ಬಣ್ಣಗಳನ್ನು ಪಡೆದುಕೊಂಡಿದ್ದು, ಈ ಬೈಕಿನ ಪೋಲಾರ್ ವೈಟ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆಯುತ್ತದೆ. ಈ ಬೈಕಿನ 40 ವರ್ಷಗಳ ಜಿಎಸ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಬಣ್ಣಗಳ ಆಯ್ಕೆಯನ್ನು ಹೊರತುಪಡಿಸಿ 021ರ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

2022ರ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳಲ್ಲಿ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿಗ ಬೈಕುಗಳಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಬೈಕುಗಳು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಹೊಸ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳು 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎರಡು ಹೊಸ ಬೈಕುಗಳು ಕೇವಲ 7.17 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಹೊಸ ಹೆಡ್‌ಲೈಟ್ ಪಡೆಯುತ್ತದೆ, ಇನ್ನು ಎಲ್‌ಇಡಿ ಡೇಟೈಮ್ ರನ್ನಿಂಗ್ ಜೊತೆ ಲೈಟ್ ಸ್ಟ್ರಿಪ್ ಅನ್ನು ಸಹ ಹೊಂದಿದೆ. ಈ ಬೈಕಿನಲ್ಲಿ ಜಿಎಸ್' ಅಕ್ಷರಗಳು ಈಗ ದೊಡ್ಡದಾಗಿದೆ ಮತ್ತು ಎಡಿವಿ ಶೈಲಿಯ ಬೀಕ್ ಅಪ್ ಫ್ರಂಟ್ 'ರ್ಯಾಲಿ' ಸ್ಟಿಕ್ಕರ್ ಅನ್ನು ಸಹ ಪಡೆಯುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ದೊಡ್ಡ ಬಿಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಗಳಿಂದ ಹಲವಾರು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಯ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಹೊಸ ಆರ್ 1250 ಜಿಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಇದೇ ತಿಂಗಳ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕುಗಳು

ಇನ್ನು ಬಿಎಂಡಬ್ಲ್ಯು ಜಿ 310 ಆರ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400 ಮತ್ತು ಟಿವಿಎಸ್ ಅಪಾಚೆ ಆರ್‌ಆರ್‌310 ಬೈಕುಗಳಿಗೆ ಪೈಪೋಟಿ ನೀಡಿದರೆ, ಜಿ 310 ಜಿಎಸ್ ಮಾದರಿಯು ಕೆಟಿಎಂ 390 ಅಡ್ವೆಂಚರ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2022 BMW G 310 R, G 310 GS Get New Colour Options. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X