ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಬಿಎಂಡಬ್ಲ್ಯು ಮೊಟೊರಾಡ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ (BMW G 310 GS) ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ, ಇದೀಗ ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಈ ಹೊಸ ಜಿ 310 ಜಿಎಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲಾಕ್. ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ, ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಭಾರತದಲ್ಲಿ ಬಿಡುಗಡೆಯಾಗಲಿರುವ 2022ರ ಜಿ 310 ಜಿಎಸ್ ಬೈಕ್ ಕೂಡ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಜಿ 310 ಜಿಎಸ್ ಬಿಎಂಡಬ್ಲ್ಯು ಮೋಟರ್‌ರಾಡ್‌ನ ಸಣ್ಣ ವಿಭಾಗದಲ್ಲಿ ಸಾಕಷ್ಟು ಜನಪ್ರಿಯ ಕೊಡುಗೆಯಾಗಿದೆ. ಈ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಹೊಸ ಹೆಡ್‌ಲೈಟ್ ಹೊಂದಿದೆ. ಇನ್ನು ಎಲ್‌ಇಡಿ ಡೇಟೈಮ್ ರನ್ನಿಂಗ್ ಜೊತೆ ಲೈಟ್ ಸ್ಟ್ರಿಪ್ ಅನ್ನು ಸಹ ಹೊಂದಿದೆ. ಈ ಬೈಕಿನಲ್ಲಿ ಜಿಎಸ್' ಅಕ್ಷರಗಳು ಈಗ ದೊಡ್ಡದಾಗಿದೆ ಮತ್ತು ಎಡಿವಿ ಶೈಲಿಯ ಬೀಕ್ ಅಪ್ ಫ್ರಂಟ್ 'ರ್ಯಾಲಿ' ಸ್ಟಿಕ್ಕರ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ದೊಡ್ಡ ಬಿಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಗಳಿಂದ ಹಲವಾರು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಯ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಜಿ 310 ಜಿಎಸ್ ಅನ್ನು ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಹ್ಯಾಂಡ್‌ಬ್ರೇಕ್ ಲಿವರ್ ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ ನಾಲ್ಕು ಹೊಂದಾಣಿಕೆ ಮಟ್ಟಗಳಿವೆ. ಇದನ್ನು ಗ್ರಾಹಕರು ತಮಗೆ ಸಹಕಾರಿಯಾಗುವಂತೆ ಕಸ್ಟಮೈಸ್ ಮಾಡಬಹುದಾಗಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಅದೇ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿ ಬೈಕುಗಳಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ಎಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಯುವಗ್ರಾಹಕರನ್ನು ಸೆಳೆಯಬಹುದು.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ನೇಕೆಡ್ ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ರೆಡ್ ರಿಮ್ಸ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಟು ಹೊಂದಿರುವ ಕಯನೈಟ್ ಬ್ಲೂ ಮೆಟಾಲಿಕ್ ಬಣ್ಣಗಳನ್ನು ಪಡೆದುಕೊಂಡಿದ್ದು, ಈ ಬೈಕಿನ ಪೋಲಾರ್ ವೈಟ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆಸಿದೆ, ಈ ಬೈಕಿನ 40 ಇಯರ್ಸ್ ಜಿಎಸ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಐಷಾರಾಮಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಹೊಸ 2021ರ ಎಸ್1000ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ನೇಕೆಡ್ ರೋಡ್‌ಸ್ಟರ್ ಸ್ಟೈಲಿಂಗ್ ಅನ್ನು ಹೊಂದಿದೆ. ಇತ್ತೀಚೆಗೆ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಭಾರತದಲ್ಲಿ ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಬಿಎಂಡಬ್ಲ್ಯು ಎಸ್1000ಆರ್ ವಿನ್ಯಾಸ ಮಾತ್ರವಲ್ಲದೇ ಇದರ ಪರ್ಫಾಮೆನ್ಸ್ ಮತ್ತು ಉತ್ತಮ ಕಂಟ್ರೋಲ್ ಗಳಿಂದ ಹೆಚ್ಚು ಜನಪ್ರಿಯತೆಯ ಗಳಿಸಿದ ಬೈಕ್ ಆಗಿದೆ. ಈ ಸೂಪರ್ ಬೈಕ್ ರೇಸಿಂಗ್ ರೆಡ್ ಮತ್ತು ಲೈಟ್ ವೈಟ್/ಎಂ ಮೋಟಾರ್ಸ್ಪೋರ್ಟ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ. ಈ ಸೂಪರ್ ಬೈಕ್ ರೇಸಿಂಗ್ ರೆಡ್ ಮತ್ತು ಲೈಟ್ ವೈಟ್/ಎಂ ಮೋಟಾರ್ಸ್ಪೋರ್ಟ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಈ ಬೈಕ್ ವಿನ್ಯಾಸದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನೊಂದಿಗೆ ಮತ್ತಷ್ಟು 'ಎಂ ಪ್ಯಾಕೇಜ್' ಆಯ್ಕೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಲಾಗಿದ್ದರೂ, ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯ ಎಂಜಿನ್ ಅನ್ನು ಮುಂದೆ ಸಾಗಿಸಿದೆ. ಇದರೊಂದಿಗೆ ಬಿಎಂಡಬ್ಲ್ಯು ಕಂಪನಿಯು ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ,

ಭಾರತದಲ್ಲಿ ಹೊಸ BMW G 310 GS ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ

ಬಿಎಂಡಬ್ಲ್ಯು ಜಿ 310 ಜಿಎಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಅಡ್ವೆಂಚರ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ನೇಕೆಡ್ ಬೈಕ್ ಹೊಸ ಬಣ್ಣದೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

More from DriveSpark

Article Published On: Tuesday, September 7, 2021, 12:41 [IST]
English summary
Bmw motorrad start accepting bookings for 2022 g 310 gs in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+