2021ರ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ
ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ.

ಇದೀಗ ಬಿಎಂಡಬ್ಲ್ಯು ಮತ್ತೊಂದು ಹೊಸ ಮ್ಯಾಕ್ಸಿ ಸ್ಕೂಟರ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ರೂ.ಲಕ್ಷ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು, ಭಾರತದಲ್ಲಿ ಮುಂದಿನ ದಿನಗಳಲ್ಲಿ ಸ್ಕೂಟರ್ ಬೆಲೆಯನ್ನು ಕಂಪನಿಯು ಪ್ರಕಟಿಸುವ ಸಾಧ್ಯತೆಯಿದೆ.

ಜಾಗತಿಕ ಪೋರ್ಟ್ಫೋಲಿಯೊದಲ್ಲಿರುವ ಕಂಪನಿಯ ಸಿ 400 ಜಿಟಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುಚ್ವ ಸಾಧ್ಯತೆಯಿದೆ. ದೊಡ್ಡ ಬದಲಾವಣೆಗಳಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಬಿಎಂಡಬ್ಲ್ಯು ಸಿ400 ಜಿಟಿ ಮಿಡ್ ಸೈಜ್ ಸ್ಕೂಟರ್ ಆರಾಮದಾಯಕವಾದ ಮಾದರಿಯಾಗಿದೆ.

ಜಾಗತಿಕವಾಗಿ ಮಾರಾಟವಾಗುವ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ನಲ್ಲಿ 350 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ ಎಂಜಿನ್‌ನೊಂದಿಗೆ ಹೊಸ 'ಇ-ಗ್ಯಾಸ್' ತಂತ್ರಜ್ಞಾನದಿಂದ (ನವೀಕರಿಸಿದ ಥ್ರೊಟಲ್-ಬೈ-ವೈರ್ ಸಿಸ್ಟಂ) ಪ್ರಯೋಜನವನ್ನು ಕೂಡ ಹೊಂದಿದೆ.

ಇನ್ನು ಇದರಲ್ಲಿ ಆಕ್ಸಿಜನ್ ಸೆನ್ಸರ್ ಮತ್ತು ನವೀಕರಿಸಿದ ಎಕ್ಸಾಸ್ಟ್ ಸಿಸ್ಟಂ ಸಹ ಹೊಂದಿದೆ. ಈ ಎಲ್ಲಾ ನವೀಕರಣಗಳು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ಇನ್ನು ಈ ಎಂಜಿನ್ 33.5 ಬಿಹೆಚ್‍ಪಿ ಪವರ್ ಮತ್ತು 139 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ 139 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಕ್ಲಚ್ ಸ್ಪ್ರಿಂಗ್‌ಗಳೊಂದಿಗೆ ನವೀಕರಿಸಲಾಗಿದೆ.

ಬಿಎಂಡಬ್ಲ್ಯು ಸಿ 400 ಜಿಟಿಯನ್ನು ಆಲ್ಪೈನ್ ವೈಟ್, ಮೂನ್ವಾಲ್ಕ್‌ಗ್ರೇ ಮೆಟಾಲಿಕ್ ಮತ್ತು ಬ್ಲಾಕ್‌ಸ್ಟಾರ್ಮ್ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ನಲ್ಲಿ ಎಲ್‌ಇಡಿ ಲೈಟಿಂಗ್ ಸಿಸ್ಟಂ, ಸ್ಪೋರ್ಟಿ ವಿ-ಆಕಾರದ ಟ್ರಿಮ್ ಪ್ಯಾನಲ್ ಯುನಿಟ್ ಗಳು, ದೊಡ್ಡ-ಸ್ವರೂಪದ ವಿಂಡ್‌ಸ್ಕ್ರೀನ್, ಏರೋಡೈನಾಮಿಕ್ ವಿನ್ಯಾಸಗೊಳಿಸಲಾದ ಸೀಟ್ ಮತ್ತು ಹೆಚ್ಚಿನವು ಇದರ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಇತ್ತೀಚೆಗೆ ವೀಕರಿಸಿದ ಮಾದರಿಯು ಹೊಸ ಬ್ರೇಕ್‌ಗಳು ಮತ್ತು ಪರಿಷ್ಕೃತ ಆಟೋಮ್ಯಾಟಿಕ್ ಸ್ಟಿಬಿಲಿಟಿ ಕಂಟ್ರೋಲ್ (ಎಎಸ್‌ಸಿ) ಯೊಂದಿಗೆ ಬರುತ್ತದೆ. ಎರಡನೆಯದು ಲೋಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,6 ಲಕ್ಷಕ್ಕೆ ಬಿಡುಗಡೆಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ,


Click it and Unblock the Notifications








