ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಜಗತ್ತಿನಾದ್ಯಂತ ಬಹುತೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ಯೋಜನೆಯಲ್ಲಿದ್ದು, ಪ್ರೀಮಿಮಂ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುವ ಬಿಎಂಡಬ್ಲ್ಯು ಅಂಗಸಂಸ್ಥೆ ಬಿಎಂಡಬ್ಲ್ಯು ಮೋಟೊರಾಡ್ ಸಹ ವಿನೂತನ ಪರಿಕಲ್ಪನೆಯ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆಗೆ ಮುಂದಾಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳು ವಿವಿಧ ಬ್ರಾಂಡ್‌ಗಳಿಗೆ ಅನುಗುಣವಾಗಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಬಿಎಂಡಬ್ಲ್ಯು ಮೋಟೊರಾಡ್ ನಿರ್ಮಾಣದ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಇವಿ ವಾಹನ ಉತ್ಪಾದನಾ ವಿಧಾನವನ್ನೇ ಬದಲಿಸುವ ಸುಳಿವು ನೀಡಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಸ್ಕೂಟರ್ ವಿನ್ಯಾಸದ ಪರಿಕಲ್ಪನೆಗಳು ಸಾಕಷ್ಟು ಬದಲಾಗುತ್ತಿದ್ದು, ಪ್ರತಿ ದಿನವೂ ಹೊಸ ಹೊಸ ವಿನ್ಯಾಸದ ಸ್ಕೂಟರ್ ಗಳು ಬಿಡುಗಡೆಯಾಗುತ್ತಲೇ ಇವೆ. ಇದೀಗ ಬಿಎಂಡಬ್ಲ್ಯು ಮೋಟೊಕರಾಡ್ ಕಂಪನಿಯ ಸಹ ಇದೇ ತಿಂಗಳು 7ರಂದು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ಹಲವಾರು ಹೊಸ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಬಿಎಂಡಬ್ಲ್ಯ ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ವಿಶಿಷ್ಟವಾಗಿದ್ದು, ಭವಿಷ್ಯದಲ್ಲಿ ಸ್ಕೂಟರ್ ಗಳು ಹೀಗೆಯೇ ಇರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ತಿಳಿದಿರುವ ಬಿಎಂಡಬ್ಲ್ಯು ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದಿಸುತ್ತಿದೆ. ಈಗ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸುತ್ತಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಡೆಫಿನಿಷನ್ ಸಿಇ 04 ಎಂಬ ಹೆಸರಿನ ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಲಾ ಎಲೆಕ್ಟ್ರಿಕ್ ಬೈಕುಗಳಲ್ಲಿರುವಂತಹ ಫೀಚರ್, ಶೇಪ್ ಹಾಗೂ ಬಲಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಅದರ ನೋಟವು ಹಿಂದೆಂದೂ ನೋಡಿರದ ವಿನ್ಯಾಸ ಹೊಂದಿದ್ದು, ಬಿಎಂಡಬ್ಲ್ಯು ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಉದ್ದವಾದ ಬಾಕ್ಸ್ ರೀತಿಯ ವಿನ್ಯಾಸ ನೀಡಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಈ ಸ್ಕೂಟರ್ ಹಾಲಿವುಡ್ ಚಿತ್ರಗಳಲ್ಲಿ ಕಂಡು ಬರುವ ಡಮ್ಮಿ ಸ್ಕೂಟರಿನಂತಿದೆ. ಆದರೆ ಡೆಫಿನಿಷನ್ ಸಿಇ 04 ಆಧುನಿಕ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಅದನ್ನು ಬಳಸಬಹುದು. ಈ ಸ್ಕೂಟರಿನಲ್ಲಿರುವ ವಿನ್ಯಾಸ ಸ್ಕೂಟರ್ ಬಗೆಗಿನ ಜನರ ದೃಷ್ಟಿಕೋನವನ್ನು ಬದಲಿಸುತ್ತದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಈ ಸ್ಕೂಟರ್‌ನಲ್ಲಿ ಬೈಕುಗಳಲ್ಲಿರುವಂತಹ ಹಿಂಬದಿಯ ಸೀಟ್ ಅನ್ನು ನೀಡಲಾಗಿದೆ. ಬಿಎಂಡಬ್ಲ್ಯು ಮೋಟೊರಾಡ್ ಈ ವ್ಯವಸ್ಥೆಯನ್ನು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ವಿಭಿನ್ನವಾಗಿ ಸ್ಥಾಪಿಸಿದೆ. ಈ ಸ್ಕೂಟರಿನಲ್ಲಿರುವ ಫುಟ್, ಎಂಜಿನ್ ಹಾಗೂ ಸ್ಕೂಟರಿನ ಮುಂಭಾಗವು ಭವಿಷ್ಯದ ವಿನ್ಯಾಸವನ್ನು ಹೊಂದಿವೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಈ ಸ್ಕೂಟರಿನಲ್ಲಿ ಸ್ಮಾರ್ಟ್ ಫೋನ್ ಗಾಗಿ ದೊಡ್ಡ ಸ್ಕ್ರೀನ್ ನೀಡಲಾಗಿದೆ. ಈ ಸ್ಕ್ರೀನ್ ಸ್ಕೂಟರಿನ ಶ್ರೇಣಿ, ಚಾರ್ಜ್ ಲೆವೆಲ್, ಕನೆಕ್ಟಿವಿಟಿ, ವೇಗದಂತಹ ವಿವಿಧ ಮಾಹಿತಿಯನ್ನು ಒದಗಿಸುತ್ತದೆ. ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪ್ತಿಯ ಬಗೆಗಿನ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ಹೊಸ ಇವಿ ಸ್ಕೂಟರ್

ಇದರ ಜೊತೆಗೆ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಯಾವ ರೀತಿಯ ಫೀಚರ್ ಗಳನ್ನು ಅಳವಡಿಸಬೇಕು ಎಂಬ ಮಾಹಿತಿಯನ್ನು ರಹಸ್ಯವಾಗಿಟ್ಟಿದೆ. ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಡೆಫಿನಿಷನ್ ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಪರಿಚಯಿಸಿದೆ.

More from DriveSpark

Article Published On: Tuesday, July 6, 2021, 8:45 [IST]
English summary
BMW Motorrad to unveil its new electric scooter on July 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+