Just In
- 25 min ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 1 hr ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 1 hr ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 1 hr ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
Don't Miss!
- Movies ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋರು ಯಾರು
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾದ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಬಹುನಿರೀಕ್ಷಿತ ಟಿಆರ್ಕೆ 502 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬೆನೆಲ್ಲಿ ಟಿಆರ್ಕೆ 502 ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.
ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕಿನಲ್ಲಿ ಡಿಜಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ರಿವೈಸಡ್ ಸೀಟ್ ಮತ್ತು ಹೊಸ ರೇರ್ ವ್ಯೂ ಮಿರರ್ ಅನ್ನು ಅಳವಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆನೆಲ್ಲಿ ಟಿಆರ್ಕೆ 502 ಬೈಕಿನಲ್ಲಿ ಸಾಮಾನ್ಯ ಇನ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿತ್ತು. ಆದರೆ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಸ್ಪೀಡ್, ಫ್ಯೂಲ್, ಟ್ರಿಪ್ ಮೀಟರ್ಸ್, ಓಡೋಮೀಟರ್, ಗೇರ್, ಇಂಡಿಕೇಟರ್ ಮತ್ತು ಎಂಜಿನ್ ಟ್ರೆಂಪ್ರಚರ್ ಮಾಹಿತಿಯನ್ನು ತೋರಿಸುತ್ತದೆ.
ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್ ಈಗಾಗಲೇ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಈ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿದೆ.
ಹೊಸ ಬೆನೆಲ್ಲಿ ಬೈಕಿನಲ್ಲಿ ವಿಂಡ್ಸ್ಕ್ರೀನ್, ಏರ್ ಡಿಫ್ಲೆಕ್ಟರ್ಗಳೊಂದಿಗೆ ಸೆಮಿ ಫೇರಿಂಗ್ ಡಿಸೈನ್ ಹಾಗೂ ಇತರ ಫೀಚರ್ಗಳ ನಡುವೆ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಟ್ವಿನ್ ಪಾಡ್ ಹೆಡ್ಲೈಟ್ಗಳನ್ನು ಅಳವಡಿಸಲಿದೆ.
ಹೊಸ ಹ್ಯಾಂಡಲ್ಬಾರ್ ಹಾಗೂ ಕ್ಲಚ್ ಲಿವರ್ ಈಗ ಅಡ್ಜಸ್ಟಬಲ್ ಆಗಿವೆ. ಅಲ್ಯೂಮಿನಿಯಂ ಅಲಾಯ್ ಹಾಗೂ ಹೊಸ ಸೀಟುಗಳಿರುವ ಹಿಂಭಾಗದಲ್ಲಿ ರೇರ್ ಪ್ಯಾನಿಯರ್ ರ್ಯಾಕ್ಗಳಲ್ಲಿ ಬದಲಾವಣೆ ಮಾಡಲಾಗಿದೆ.
ಹೊಸ ಟಿಆರ್ಕೆ 502 ಬೈಕಿನಲ್ಲಿಯೂ ಸಹ 19 ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಹಾಗೂ 17 ಇಂಚಿನ ರೇರ್ ವ್ಹೀಲ್ಗಳಿದ್ದು, ಕ್ರಮವಾಗಿ 110/80-19 ಹಾಗೂ 150/70-17 ಸೆಕ್ಷನ್ ಟಯರ್ಗಳನ್ನು ಹೊಂದಿರಲಿದೆ. ರಸ್ತೆ ಆಧಾರಿತ ಬೈಕಿನ ಎರಡೂ ಬದಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್ಗಳಿದ್ದು, ಟ್ಯೂಬ್ಲೆಸ್ ಟಯರ್ಗಳಿವೆ.
ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕಿನಲ್ಲಿ ಅದೇ 499ಸಿಸಿ ಇನ್ ಲೈನ್ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 8-ವಾಲ್ವ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 8,500 ಆರ್ಪಿಎಂನಲ್ಲಿ 47.6 ಬಿಹೆಚ್ಪಿ ಪವರ್ ಹಾಗೂ 6,000 ಆರ್ಪಿಎಂನಲ್ಲಿ 46 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್ನಲ್ಲಿ 6 ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 50 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.
ಈ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್ ಕೊನೆಗೂ ನಾಳ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬೆನೆಲ್ಲಿ ಟಿಆರ್ಕೆ 502 ತುಸು ದುಬಾರಿಯಾಗಿರುತದೆ.