ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಬೆನೆಲ್ಲಿ ಇಂಡಿಯಾ ಕಂಪನಿಯು ತನ್ನ ಹೊಸ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬೆನೆಲ್ಲಿ ಕಂಪನಿಯು ತನ್ನ ಆಫ್-ರೋಡ್ ಆಧಾರಿತ ಟಿಆರ್‌ಕೆ 502ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ವರದಿಗಳ ಪ್ರಕಾರ, ಬೆನೆಲ್ಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಅವರು ಟಿಆರ್‌ಕೆ 502ಎಕ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಈ ವರ್ಷದಲ್ಲೇ ಆಫ್-ರೋಡ್ ಆಧಾರಿತ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಬಿಡುಗಡೆಯಾಗಲಿದೆ ಎಂದು ಅವರು ಖಚಿತಪಡಿಸಿದ್ದಾರೆ. ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಬಗ್ಗೆ ಹೇಳುವುದಾದರೆ, ಇದನ್ನು ಹೆಚ್ಚು ಆಫ್-ರೋಡ್‌ಗೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕಿನಲ್ಲಿ ಸ್ಪೋಕ್ಡ್ ವೀಲ್ಸ್, ಸ್ವಲ್ಪ ದೊಡ್ಡದಾದ ಎಂಜಿನ್ ಗಾರ್ಡ್, ಹೈ-ಮೌಂಟೆಡ್ ಎಕ್ಸಾಸ್ಟ್, ಹಿಂಭಾಗದಲ್ಲಿ ಲಗೇಜ್ ರ್ಯಾಕ್ ಮತ್ತು ಟಿಆರ್ಕೆ 502 ಮಾದರಿಯ ಮೇಲೆ ರೈಡರ್ ಸೀಟ್ ಎತ್ತರ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಬೆನೆಲ್ಲಿ ಟಿಆರ್‌ಕೆ 502 ಸ್ಟ್ಯಾಂಡರ್ಡ್ ಮಾದರಿಯಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ 50 ಎಂಎಂ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ 502ಎಕ್ಸ್ ಮಾದರಿಯಲ್ಲಿಯು ಇದೇ ರೀತಿಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಇನ್ನು ಸ್ಟ್ಯಾಂಡರ್ಡ್ ಮಾದರಿಯ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಡಿಸ್ಕ್ ರೋಟರ್‌ಗಳನ್ನು ಹೊಂದಿದ್ದರೆ, ಟಿಆರ್‌ಕೆ 502ಎಕ್ಸ್ ಪೆಡಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ತನ್ನ ಸ್ಟ್ಯಾಂಡರ್ಡ್ ಮಾದರಿಯಿಂದ ಎಂಜಿನ್ ಅನ್ನು ಎರವಲು ಒಅಡೆಯುತದೆ. ಈ ಹೊಸ ಟಿಆರ್‌ಕೆ 502ಎಕ್ಸ್ ಬೈಕಿನಲ್ಲಿ ಅದೇ 499ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಈ 499ಸಿಸಿ ಎಂಜಿನ್ 8,500 ಆರ್‌ಪಿಎಂನಲ್ಲಿ ಗರಿಷ್ಠ 47 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಹೆಚ್ಚುವರಿಯಾಗಿ 2021ರ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಮಾಡಿದ ಎಲ್ಲಾ ಹೊಸ ಬದಲಾವಣೆಗಳನ್ನು 502ಎಕ್ಸ್ ಬೈಕಿನಲ್ಲೂ ಸಾಗಿಸುವ ನಿರೀಕ್ಷೆಯಿದೆ. ಇದು ಹೊಸ ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, ನವೀಕರಿಸಿದ ಅರೆ-ಡಿಜಿಟಲ್ ಇನ್ಸ್ ಟ್ರೂ,ಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್

ಇದರೊಂದಿಗೆ ಈಗ ವಿಭಿನ್ನ ಬ್ಯಾಕ್‌ಲಿಟ್ ಬಣ್ಣಗಳು, ಪರಿಷ್ಕೃತ ನಕಲ್ ಗಾರ್ಡ್ ಮತ್ತು ರಿಯರ್-ವ್ಯೂ ಮಿರರ್ ವಿನ್ಯಾಸ ಮತ್ತು ಸುಧಾರಿತ ರೈಡರ್ ಮತ್ತು ಪಿಲಿಯನ್ ಸೀಟುಗಳನ್ನು ಒಳಗೊಂಡಿದೆ. ವರದಿಗಳ ಪ್ರಕಾರ, ಬೆನೆಲ್ಲಿ ಇಂಡಿಯಾ ತನ್ನ ಜನಪ್ರಿಯ ಆಫ್-ರೋಡ್ ಆಧಾರಿತ ಟಿಆರ್‌ಕೆ 502ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.

More from DriveSpark

Article Published On: Tuesday, February 2, 2021, 17:42 [IST]
English summary
Benelli TRK 502X BS6 India Launch Expected In March 2021. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+