ಅನಾವರಣವಾಯ್ತು ಸಿಎಫ್‌ಮೋಟೋ 250ಎಸ್‍ಆರ್ ರೇಸಿಂಗ್ ಎಡಿಷನ್
ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ 250ಎಸ್‍ಆರ್ ಬೈಕಿನ ರೇಸಿಂಗ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಸಿಎಫ್‌ಮೋಟೋ 250ಎಸ್‍ಆರ್ ರೇಸಿಂಗ್ ಎಡಿಷನ್ ನಲ್ಲಿ ವಿಶೇಷವಾದ ಗ್ರಾಫಿಕ್ಸ್ ಮತ್ತು ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಸಿಎಫ್‌ಮೋಟೋ 250ಎಸ್‍ಆರ್ ರೇಸಿಂಗ್ ಎಡಿಷನ್‌ನಲ್ಲಿ ವಿಶೇಷ ಲಿವೆರಿ ಫೇರಿಂಗ್, ಎಂಜಿನ್ ಕೌಲ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಡೆಕಲ್‌ಗಳನ್ನು ಒಳಗೊಂಡಿದೆ. ರೇಸಿಂಗ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಕೆವೈಬಿ ಮೂಲದ ಯುನಿಟ್ ಗಳನ್ನು ಒಳಗೊಂಡಿದೆ, ಇದರ ಮುಂಭಾಗದಲ್ಲಿ 37 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಸ್ಟ್ಯಾಂಡರ್ಡ್ ಸಿಎಫ್‌ಮೋಟೋ 250ಎಸ್‍ಆರ್ ಬೈಕಿನಂತೆ ಇರುತ್ತದೆ. ಸಿಎಫ್‌ಮೋಟೋ 250ಎಸ್‍ಆರ್ ಸಂಪೂರ್ಣ ಫೇರ್ಡ್ ಕ್ವಾರ್ಟರ್-ಲೀಟರ್ ಬೈಕ್ ಆಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಸಿಎಫ್‌ಮೋಟೋ 250ಎಸ್ಆರ್ ಬೈಕ್ ಈಗಾಗಲೇ ಆಗ್ನೇಯ ಏಷ್ಯಾದ ದೇಶದಲ್ಲಿ ಮಾರಾಟವಾಗುತ್ತಿದೆ. ಸಿಎಫ್‍ಮೋಟೊ ಹೊಸ 250ಎಸ್‍ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಿದರೆ ಜಿಕ್ಸರ್ ಎಸ್‍ಎಫ್ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ.

ಕ್ವಾರ್ಟರ್-ಲೀಟರ್ ಸೆಗ್‍ಮೆಂಟ್‍ನಲ್ಲಿ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಆದರೆ ಸಿಎಫ್‌ಮೋಟೋ ಕಂಪನಿಯು 250ಎಸ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದು ಇನ್ನು ಖಚಿತ ಪಡಿಸಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಸಿಎಫ್‌ಮೋಟೋ 250ಎಸ್‍ಎರ್ ಬೈಕಿನ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಬೈಕ್‍ನ ಸವಾರನಿಗೆ ಕಾಂಫರ್ಟ್ ನೀಡಲು ಸ್ಪ್ಲಿಟ್ ಸೀಟ್ ಮತ್ತು ಕಡಿಮೆ ಸೆಟ್ ಹ್ಯಾಂಡಲ್ ಬಾರ್‍ಗಳನ್ನು ಸಹ ಹೊಂದಿದೆ. ಇದಲ್ಲದೆ ಕಾಂಪ್ಯಾಕ್ಟ್ ವ್ಹೀಲ್ ಬೇಸ್ ಅನ್ನು ಹೊಂದಿದ್ದು, ಅದು ತಿರುವುಗಳು ಸರಾಗವಾಗಿ ಹೋಗಲು ನೆರವಾಗುತ್ತದೆ.

ಸಿಎಫ್‌ಮೋಟೋ 250ಎಸ್‌ಆರ್ ಬೈಕಿನಲ್ಲಿ ಟಿಎಫ್‌ಟಿ ಬಣ್ಣದ ಡಿಸ್‍ಪ್ಲೇ ಒಳಗೊಂಡಿರುತ್ತದೆ, ಅದನ್ನು 300 ಎನ್‌ಕೆ ಮಾದರಿಯಿಂದ ಎರವಲು ಪಡೆಯಲಾಗಿದೆ. ಈ ಡಿಸ್‍ಪ್ಲೇಯು ಸವಾರನಿಗೆ ವೇಗದ ಬಗ್ಗೆ, ಟ್ರಿಪ್ ಮೀಟರ್, ಗೇರ್ ಪೊಸಿಷನ್-ಇಂಡಿಕೇಟರ್, ಟ್ಯಾಕೋಮೀಟರ್, ಫ್ಯೋಲ್ ಗೇಜ್ ಸಮಯ ಇತ್ಯಾದಿ ವಿವರಗಳನ್ನು ಪ್ರದರ್ಶಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ವಿಶೇಷವೆಂದರೆ ಈ ಬೈಕಿನಲ್ಲಿ ಸ್ಪೋರ್ಟ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೂಡ್‍ಗಳನ್ನು ಹೊಂದಿದೆ. ಈ ಯಾವುದೇ ಮೋಡ್‍ಗಳನ್ನು ಆಯ್ಕೆ ಮಾಡುವ ಮೂಲಕ 250 ಎಸ್‌ಆರ್‌ನ ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಇನ್ಸ್ ಟ್ರೂಮೆಂಟ್ ಕನ್ಸೋಲ್‌ನ ಗ್ರಾಪೀಕ್ಸ್ ವಿನ್ಯಾಸವೂ ಬದಲಾಗುತ್ತದೆ.

ಸಿಎಫ್‌ಮೋಟೋ 250ಎಸ್‌ಆರ್ ಬೈಕಿನಲ್ಲಿ 249.2 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 26 ಬಿಹೆಚ್‌ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸಿಎಫ್‌ಮೋಟೋ 250ಎಸ್‌ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿರುತ್ತದೆ.

ಇನ್ನು ಸಿಎಫ್‌ಮೋಟೋ 250ಎಸ್ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಸುಜುಕಿ ಜಿಕ್ಸರ್ ಎಸ್‌ಎಫ್ 250, ಹೋಂಡಾ ಸಿಬಿಆರ್ 250 ಆರ್, ಮತ್ತು ಕೆಟಿಎಂ ಆರ್‌ಸಿ 200 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








