ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ವಿದೇಶಿ ಉತ್ಪನ್ನಗಳಿಗೆ ಸರಿಸಾಟಿಯಾಗುವಂತಹ ವಿಶ್ವದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮೂಲದ ಕಂಪನಿಗಳು ಉತ್ಪಾದಿಸಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ. ಅದರಂತೆ ಭಾರತದ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Corrit Electric ಶೀಘ್ರದಲ್ಲೇ ತನ್ನ ಎರಡು ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಕಂಪನಿಯು ಭಾರತದಲ್ಲಿ ತನ್ನ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇವುಗಳಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಹಾಗೂ ದೇಶದ ಮೊದಲ ಫ್ಯಾಟ್ ಟಯರ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಸಹ ಸೇರಿದೆ. ಫ್ಯಾಟ್ ಟಯರ್ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲು.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಈ ಕಾರಣಕ್ಕೆ ಈ ಎಲೆಕ್ಟ್ರಿಕ್ ವಾಹನವು ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳ ಗಮನ ಸೆಳೆಯುತ್ತಿದೆ. ಫ್ಯಾಟ್ ಟಯರ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಅನ್ನು Hover ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ದೇಶದ ಎಲ್ಲಾ ಭಾಗಗಳಲ್ಲಿ ಮಾರಾಟ ಮಾಡಲಾಗುವುದಿಲ್ಲ. ಕಂಪನಿಯು ಈ ಎಲೆಕ್ಟ್ರಿಕ್ ವಾಹನಗಳನ್ನು ಭಾರತದ ಕೆಲವು ನಗರಗಳಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಈ ಎಲೆಕ್ಟ್ರಿಕ್ ವಾಹನವನ್ನು ಮೊದಲು ದೆಹಲಿಯಲ್ಲಿ ಬಿಡುಗಡೆಗೊಳಿಸಲಾಗುವುದು. ನಂತರದ ದಿನಗಳಲ್ಲಿ ಬೆಂಗಳೂರು, ಮುಂಬೈ, ಹಾಗೂ ಪುಣೆ ನಗರಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಕಂಪನಿಯು ಈ ನಗರ ವಾಸಿಗಳಿಗೆ ಮಾತ್ರ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ರೂ. 1,100 ಪಾವತಿಸಿ Corrit Electric ಕಂಪನಿಯ ಎಲೆಕ್ಟ್ರಿಕ್ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ನವೆಂಬರ್ 25 ರಿಂದ ಈ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲಾಗುವುದು ಎಂದು Corrit Electric ಕಂಪನಿ ಹೇಳಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಮಾರಾಟಗಾರರ ಬಳಿ ಈ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು. Hover ಎಲೆಕ್ಟ್ರಿಕ್ ವಾಹನವನ್ನು ವಯಸ್ಕರು ಮಾತ್ರವಲ್ಲದೇ ಹಾಗೂ ಅಪ್ರಾಪ್ತ ವಯಸ್ಕರು ಸಹ ಬಳಸಬಹುದು.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ನಿರ್ದಿಷ್ಟವಾಗಿ ಹೇಳುವುದಾದರೆ ಈ ಎಲೆಕ್ಟ್ರಿಕ್ ವಾಹನವನ್ನು 12 ರಿಂದ 18 ವರ್ಷ ವಯಸ್ಸಿನವರು ಚಾಲನೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಕಡಿಮೆ ವೇಗದ ಎಲೆಕ್ಟ್ರಿಕ್ ವಾಹನವಾಗಿದೆ. ಇದರಿಂದ ಅಪ್ರಾಪ್ತ ವಯಸ್ಕರು ಈ ವಾಹನ ಚಾಲನೆ ಮಾಡಲು ಯಾವುದೇ ಕಾನೂನು ತೊಡಕು ಉಂಟಾಗುವುದಿಲ್ಲ. ಈ ವಾಹನವನ್ನು ಚಾಲನೆ ಮಾಡಲು ಯಾವುದೇ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲವೆಂದು ಕಂಪನಿ ಹೇಳಿದೆ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಈ ವಾಹನವನ್ನು ಅಪ್ರಾಪ್ತ ವಯಸ್ಕರು ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಸಹ ವಿನ್ಯಾಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಎಲೆಕ್ಟ್ರಿಕ್ ವಾಹನವನ್ನು ಪ್ರವಾಸಿಗರ ಬಳಕೆಗಾಗಿ ಗೋವಾ ಹಾಗೂ ಜೈಪುರದಂತಹ ಪ್ರವಾಸಿ ತಾಣಗಳಲ್ಲಿ ನಿಲ್ಲಿಸಲಾಗುತ್ತದೆ. ಈ ಎಲೆಕ್ಟ್ರಿಕ್ ವಾಹನವನ್ನು ಕೆಂಪು, ಹಳದಿ, ನೀಲಿ, ಗುಲಾಬಿ, ನೇರಳೆ ಹಾಗೂ ಕಪ್ಪು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಇದರ ಜೊತೆಗೆ, ಗ್ರಾಹಕರಿಗಾಗಿ ಕೆಲವು ಬದಲಾವಣೆಗಳನ್ನು ಮಾಡುವುದಾಗಿ ಕಂಪನಿ ಹೇಳಿದೆ. ಈ ವಾಹನವು 250 ಕೆ.ಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಉತ್ತಮ ಪ್ರಯಾಣದ ಅನುಭವಕ್ಕಾಗಿ ಡ್ಯುಯಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಟಯರ್ ಹಾಗೂ ಡ್ಯುಯಲ್ ಶಾಕ್ ಅಬ್ಸಾರ್ವರ್ ಗಳನ್ನು ನೀಡಲಾಗಿದೆ. ಕಡಿಮೆ ವೇಗವನ್ನು ಹೊಂದಿರುವ ಈ ಎಲೆಕ್ಟ್ರಿಕ್ ವಾಹನದಲ್ಲಿ ಹಲವಾರು ಫೀಚರ್ ಗಳನ್ನು ನೀಡಿರುವುದು ಗಮನಾರ್ಹ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಈ ಎಲೆಕ್ಟ್ರಿಕ್ ವಾಹನ ಖರೀದಿಸ ಬಯಸುವವರಿಗೆ ಕಂಪನಿಯು ವಿಶೇಷ ಸಾಲ ಯೋಜನೆಗಳನ್ನು ಒದಗಿಸಲು ಕಂಪನಿಯು ಮುಂದಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಕಂಪನಿಯು ಚಂದಾದಾರಿಕೆ ಯೋಜನೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಿದೆ. ಇದರ ಜೊತೆಗೆ ಗ್ರಾಹಕರಿಗೆ ಬೈ ಬ್ಯಾಕ್ ಯೋಜನೆಯನ್ನು ಸಹ ನೀಡಲಾಗುವುದು. ಗ್ರಾಹಕರಿಗೆ ಮೂರು ವರ್ಷಗಳ ನಂತರ ಉತ್ತಮ ಮೌಲ್ಯದ ಮರು ಪಾವತಿ ನೀಡುವುದು ಈ ಯೋಜನೆಯ ಉದ್ದೇಶ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಭಾರತದ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಉದ್ದೇಶದಿಂದ Corrit Electric ಕಂಪನಿಯು ಈ ವಾಹನವನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾತನಾಡಿರುವ ಕಂಪನಿಯ ಸಹ ಸಂಸ್ಥಾಪಕ ಮಯೂರ್ ಮಿಶ್ರಾ, ಭಾರತದ ವಿಶಾಲವಾದ ಆಟೋಮೊಬೈಲ್ ಉದ್ಯಮದಲ್ಲಿ, ಯುವ ಜನರಿಗೆ ವಾಹನಗಳ ಆಯ್ಕೆ ಬಹಳ ಕಡಿಮೆ.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಈ ಕಾರಣಕ್ಕೆ ಈ ಎಲೆಕ್ಟ್ರಿಕ್ ವಾಹನವನ್ನು ಯುವ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಜಾಲಿ ರೈಡ್ ಹೋಗುವ ಹುಡುಗರಿಗೆ ಇದು ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.

ಯುವಜನರಿಗಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಸಿದ್ದಪಡಿಸಿದ Corrit Electric

ಅವರ ಪ್ರತಿಕ್ರಿಯೆಯಿಂದ Hover ಎಲೆಕ್ಟ್ರಿಕ್ ವಾಹನವನ್ನು ಯುವ ಜನರಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂಬುದು ಬಹಿರಂಗವಾಗಿದೆ. Corrit Electric ಕಂಪನಿಯು ತನ್ನ ಆರ್ ಅಂಡ್ ಡಿ ಕೇಂದ್ರವನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿದೆ. ಕಂಪನಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ.

Most Read Articles

Kannada
English summary
Corrit electric company designs unique style e bike for teenagers details
Story first published: Tuesday, October 12, 2021, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X