ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿಯಲ್ಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

43ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಎರಡನೇ ದಿನದ ಎರಡನೇ ಹಂತದ ರ‍್ಯಾಲಿಯು ಹಲವು ರೋಚಕ ಕ್ಷಣಗಳಿಗೆ ಕಾರಣವಾಗಿತ್ತು. ಮೊದಲ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಹಲವು ಸ್ಪರ್ಧಿಗಳು ಎರಡನೇ ಹಂತದಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮೂರನೇ ಹಂತದ ಸ್ಪರ್ಧೆಗೆ ಸಿದ್ದವಾಗಿದ್ದಾರೆ.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯು ಈ ತಿಂಗಳ 15ರ ತನಕ ನಡೆಯಲಿದ್ದು, ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ಇದೀಗ ಎರಡು ಹಂತಗಳು ಪೂರ್ಣಗೊಂಡಿವೆ. ಜಿದ್ದಾದಿಂದ ಆರಂಭವಾದ ಮೊದಲ ಹಂತದ ಮೋಟಾರ್‌ಸ್ಪೋರ್ಟ್ ರ‍್ಯಾಲಿಯು ಬಿಷಾದಲ್ಲಿ ಪೂರ್ಣಗೊಂಡ ನಂತರ ಎರಡನೇ ಹಂತದ ರ‍್ಯಾಲಿಯು ಬಿಷಾದಿಂದ ವಾಡಿ ಅಡ್-ದವಾಸಿರ್ ಪ್ರದೇಶವನ್ನು ತಲುಪಿದೆ.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಬಿಷಾದಿಂದ ವಾಡಿ ಅಡ್-ದವಾಸಿರ್ ಪ್ರದೇಶವು ಒಟ್ಟು ಒಟ್ಟು 685 ಕಿಲೋ ಮೀಟರ್ ದೂರವನ್ನು ಒಳಗೊಂಡಿದ್ದು, ಹೆಚ್ಚಿನ ಪ್ರಮಾಣದ ದಿಬ್ಬಗಳನ್ನು ಒಳಗೊಂಡಿರುವ ಈ ಮಾರ್ಗದಲ್ಲಿ ಬರೋಬ್ಬರಿ 457ಕಿಲೋ ಮೀಟರ್‌ಗಳಷ್ಟು ಮಾರ್ಗವು ಸ್ಪರ್ಧಾತ್ಮಕ ಮಾರ್ಗವಾಗಿತ್ತು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಮರಳು ದಿಣ್ಣೆಗಳು, ಕಲ್ಲು ಬಂಡೆಗಳು, ಮಣ್ಣು ಮಿಶ್ರಿತ ರಸ್ತೆಗಳೊಂದಿಗೆ ಅತಿಯಾದ ಧೂಳು ರೈಡರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸುತ್ತಿದ್ದು, ಹಲವು ರೈಡರ್‌ಗಳು ಎರಡನೇ ಹಂತದ ಆರಂಭದಲ್ಲೇ ಸ್ಪರ್ಧೆಯಿಂದ ಹೊರನಡೆದರು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಎರಡನೇ ಹಂತದ ಮಾರ್ಗವು ಶೇ.82ರಷ್ಟು ಮರಳು ಪ್ರದೇಶ, ಶೇ. 13ರಷ್ಟು ಮರಳು ದಿಣ್ಣೆಗಳು ಮತ್ತು ಶೇ.5ರಷ್ಟು ಮಣ್ಣ ಮಿಶ್ರಿತ ಮಾರ್ಗವನ್ನು ಒಳಗೊಂಡಿತ್ತು. ಅತಿಯಾದ ಧೂಳಿನಿಂದ ರ‍್ಯಾಲಿಯನ್ನು ಹಲವು ಜನಪ್ರಿಯ ರೈಡರ್‌ಗಳೇ ಅರ್ಧಕ್ಕೆ ಮೊಟಕುಗೊಳಿಸಿದರೆ ಇನ್ನುಳಿದ ರೈಡರ್‌ಗಳು ಕಠಿಣ ಪರಿಸ್ಥಿತಿಯಲ್ಲೂ ಮುನ್ನುಗ್ಗಿ ಎರಡನೇ ಹಂತವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಎಡರನೇ ಹಂತದ ಡಕಾರ್ ರ‍್ಯಾಲಿಯಲ್ಲಿ ಮೊದಲ 5 ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಸಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡ ಮತ್ತು ರಾಕ್‌ಸ್ಟಾರ್ ಎನರ್ಜಿ ಹಸ್ಕವರ್ನಾ ಫ್ಯಾಕ್ಟರಿ ರೇಸಿಂಗ್ ತಂಡದ ರೈಡರ್‌ಗಳಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ ಜೋನ್ ಬ್ಯಾರೆಡಾ ಬೋರ್ಟ್ [04:17:56] ಮೊದಲ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಮತ್ತೊಬ್ಬ ರೈಡರ್ ರಿಕಿ ಬ್ರಾಬೆಕ್ ಕೇವಲ 4 ನಿಮಿಷಗಳ ಅಂತರದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡರೆ ರಾಕ್‌ಸ್ಟಾರ್ ಎನರ್ಜಿ ಹಸ್ಕವರ್ನಾ ಫ್ಯಾಕ್ಟರಿ ರೇಸಿಂಗ್ ತಂಡದ ಪ್ಯಾಬ್ಲೊ ಕ್ವಿಂಟಾನಿಲ್ಲಾ ಅವರು ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಎರಡನೇ ಹಂತದಲ್ಲೂ ಮುನ್ನಡೆ ಸಾಧಿಸಿದ ಭಾರತೀಯ ರೈಡರ್‌ಗಳು

43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್‌ಗಳು ಎರಡನೇ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸುತ್ತಿರುವ ಕನ್ನಡಿಗ ಸಿಎಸ್ ಸಂತೋಷ್ 36ನೇ ಸ್ಥಾನದಲ್ಲಿ [05:02:17] ಮುನ್ನಡೆ ಕಾಯ್ದುಕೊಂಡರು.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಮೂವರು ರೈಡರ್‌ಗಳನ್ನು ಒಳಗೊಂಡಿರುವ ಹೀರೋ ಮೋಟೋಸ್ಪೋರ್ಟ್ ತಂಡದಲ್ಲಿ ಸಿಎಸ್ ಸಂತೋಷ್ ನಂತರ ಜೊಕ್ವಿಮ್ ರೋಡ್ರಿಗೊಸ್ 12ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 14 ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿ ನಿಧಿಸುವ ಲೊರೆಂಜೊ ಸ್ಯಾಂಟೊಲಿನೊ ಅವರು ಎರಡನೇ ಹಂತದಲ್ಲಿ 13ನೇ ಸ್ಥಾನವನ್ನು ಪಡೆದುಕೊಂಡರೆ ಇನ್ನಿಬ್ಬರು ರೈಡರ್‌ಗಳಾದ ರುಯಿ ಗೊನ್ಕಾಲ್ವ್ಸ್ 21ನೇ ಸ್ಥಾನಕ್ಕೆ ಮತ್ತು ಹರಿತ್ ನೋವಾ 32ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಡಕಾರ್ ರ‍್ಯಾಲಿ 2021: ಎರಡನೇ ಹಂತದ ರ‍್ಯಾಲಿ ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು

43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಪ್ರತಿ ಹಂತವು ಕೂಡಾ ಒಂದೊಂದು ಕಠಿಣ ಸವಾಲುಗಳಿಂದ ಕೂಡಿರಲಿದ್ದು, ನಾಳೆ ಮೂರನೇ ಹಂತದ ರ‍್ಯಾಲಿಯು ವಾಡಿ ಅಡ್-ದವಾಸಿರ್ ಆರಂಭಗೊಳ್ಳಲಿದ್ದು, ಪ್ರಶಸ್ತಿಗಾಗಿ ನೂರಾರು ಸ್ಪರ್ಧಿಗಳ ಹೋರಾಟವು ಮರಳುಗಾಡಿನಲ್ಲಿ ಮತ್ತಷ್ಟು ರೋಚಕತೆಗಳಿಗೆ ಸಾಕ್ಷಿಯಾಗುತ್ತಿದೆ.

More from DriveSpark

Article Published On: Monday, January 4, 2021, 23:02 [IST]
English summary
Dakar Rally 2021 Stage 2 Results & Highlights. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+