ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಇವೆ ಹೈ ಸ್ಪೀಡ್ ಸೊಲ್ ಎಲೆಕ್ಟ್ರಿಕ್ ಸ್ಕೂಟರ್
ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದ ಹಲವಾರು ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮ ಪ್ರವೇಶಿಸುತ್ತಿದ್ದು, ಒಡಿಶಾ ಮೂಲದ ಇವೆ ಇಂಡಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಪರಿಚಯಿಸುತ್ತಿದೆ.

ಇವೆ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಆಟ್ರಿಯೊ ಹಾಗೂ ಅಹಾವಾ ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಆಟ್ರಿಯೊ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 90ರಿಂದ 100 ಕಿ.ಮೀಗಳವರೆಗೆ ಚಲಿಸುತ್ತವೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇವೆ ಸ್ಕೂಟರ್‌ಗಳು ಲೋ ಸ್ಪೀಡ್ ಮಾದರಿಗಳಾಗಿದ್ದು, ಇದೀಗ ಕಂಪನಿಯು ಮೊದಲ ಬಾರಿಗೆ ಹೈ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಸೊಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

ಹೈ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಸೊಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಒಂದು ಬಾರಿ ಪೂರ್ತಿಯಾಗಿ ಬ್ಯಾಟರಿ ಚಾರ್ಜ್ ಆದ ನಂತರ ಗರಿಷ್ಠ 130 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ವಿವಿಧ ರೈಡ್ ಮೋಡ್ ಹೊಂದಿರುವ ಹೊಸ ಸ್ಕೂಟರ್ ಪ್ರಯಾಣದ ಅಗತ್ಯಕ್ಕೆ ಅನುಗುಣವಾಗಿ ಬ್ಯಾಟರಿ ಬಳಕೆಯಾಗಲಿದ್ದು, ಇಕೋ ಮೋಡ್‌ನಲ್ಲಿ ಗರಿಷ್ಠ ಮೈಲೇಜ್ ಹಿಂಪಡೆಯಬಹುದು.

ಹೊಸ ಸೊಲ್ ಇವಿ ಸ್ಕೂಟರ್ ಮಾದರಿಯನ್ನು ಮುಂಬರುವ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಇವಿ ಇಂಡಿಯಾ ಕಂಪನಿಯು ಹೊಸ ಸ್ಕೂಟರ್ ಮಾದರಿಯೊಂದಿಗೆ ವಿವಿಧ ಹೊಸ ನಗರಗಳಲ್ಲಿ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದೆ.

ಹೊಸ ಸ್ಕೂಟರ್ ಮಾದರಿಯು ಉತ್ತಮ ಮೈಲೇಜ್‌ನೊಂದಿಗೆ ಬೆಲೆಯಲ್ಲೂ ಗ್ರಾಹಕರನ್ನು ಸೆಳೆಯಲಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮತ್ತಷ್ಟು ಹೊಸ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಕಳೆದ 10 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ 2020-21 ಹಣಕಾಸು ವರ್ಷದಲ್ಲಿ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿದ್ದು, ಕಳೆದ ಹತ್ತುಅವಧಿಯಲ್ಲಿ ಸುಮಾರು 6.38 ಲಕ್ಷ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಫೇಮ್ 2 ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ಒಟ್ಟು 7 ಸಾವಿರ ಇ-ಬಸ್‌ಗಳು, 5 ಲಕ್ಷ ತ್ರಿಚಕ್ರ ಇವಿ ವಾಹನಗಳು, 55 ಸಾವಿರ ಎಲೆಕ್ಟ್ರಿಕ್ ಕಾರುಗಳು ಮತ್ತು 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ಸಿಗಲಿದ್ದು, ಸಬ್ಸಡಿ ಯೋಜನೆಯು ವಾಹನ ಮಾಲೀಕತ್ವ ಹೊರೆಯನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಿದೆ.


Click it and Unblock the Notifications