ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಬಹುತೇಕ ಎಲ್ಲಾ ದೇಶಗಳು ವಾಯುಮಾಲಿನ್ಯವನ್ನು ಪರಿಹರಿಸುವ ಸಲುವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ವಿಶ್ವದ ಪ್ರಮುಖ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿವೆ.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಪ್ರಮುಖ ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸ್ಟಾರ್ಟ್ ಅಪ್ ಕಂಪನಿಗಳು ಸಹ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗ ಇ-ರಾಕೆಟ್ ಸಿಸ್ಟಂಸ್ ಎಂಬ ಕಂಪನಿ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸಿದೆ.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಜರ್ಮನಿ ಮೂಲದ ಕಂಪನಿಯಾದ ಇ-ರಾಕೆಟ್ ಸಿಸ್ಟಂಸ್ ಜಿಎಂಬಿಹೆಚ್ ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಬೈಕ್, ಬೇರೆ ಯಾವುದೇ ಮೋಟಾರ್‌ಸೈಕಲ್‌ ಹೊಂದಿರದ ಫೀಚರ್ ಅನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ಬೈಕಿನಲ್ಲಿ ಸೈಕಲ್‌ಗಳಲ್ಲಿ ಕಂಡುಬರುವಂತಹ ಪೆಡಲಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಮೂಲಕ ಈ ಬೈಕ್ ಪೆಡಲಿಂಗ್ ಸಿಸ್ಟಂ ಫೀಚರ್ ಹೊಂದಿರುವ ವಿಶ್ವದ ಮೊದಲ ಬೈಕ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಕಾರಣಕ್ಕಾಗಿ ಇ-ರಾಕೆಟ್ ಎಲೆಕ್ಟ್ರಿಕ್ ಬೈಕ್ ವಿಶ್ವಾದ್ಯಂತವಿರುವ ಎಲೆಕ್ಟ್ರಿಕ್ ವಾಹನ ಪ್ರಿಯರನ್ನು ತನ್ನತ್ತ ಆಕರ್ಷಿಸಿದೆ.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ವಾಹನದ ಆರಂಭಿಕ ಬೆಲೆಯನ್ನು 11,850 ಯುರೋಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.9.88 ಲಕ್ಷಗಳಾಗಿದೆ. ಆದರೆ ಈ ಬೆಲೆಯು ಕೇವಲ ಅಂದಾಜು ಮೌಲ್ಯ ಎಂಬುದು ಗಮನಿಸಬೇಕಾದ ಸಂಗತಿ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಕಂಪನಿಯು ಈ ಬೈಕ್ ಅನ್ನು ಹಗುರವಾದ ವಾಹನವೆಂದು ಪರಿಗಣಿಸಿದೆ. ಈ ಬೈಕ್ ಅನ್ನು ಎಲೆಕ್ಟ್ರಿಕ್ ಇಲ್ಲದಿದ್ದರೂ ಬಳಸಬಹುದಾಗಿದೆ. ಇದಕ್ಕಾಗಿಯೇ ಪೆಡಲಿಂಗ್ ಅನ್ನು ವಿಶೇಷವಾಗಿ ನೀಡಲಾಗಿದೆ. ಇದರಿಂದಾಗಿ ಈ ಬೈಕ್ ಅನ್ನು ಹೈಬ್ರಿಡ್ ಎಲೆಕ್ಟ್ರಿಕ್ ಬೈಸಿಕಲ್ ಎಂದು ಪರಿಗಣಿಸಬಹುದು.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಕಂಪನಿಯು ಈ ವಾಹನವನ್ನು ಹಗುರವಾದ ವಾಹನವೆಂದು ಅಭಿವೃದ್ಧಿಪಡಿಸಿರುವ ಕಾರಣಕ್ಕೆ ಈ ಬೈಕ್ ಅನ್ನು ಪೆಡಲ್ ಮಾಡುವುದು ಹಾಗೂ ನಿರ್ವಹಣೆ ಮಾಡುವುದು ಸುಲಭ. ಕಡಿಮೆ ತೂಕಕ್ಕಾಗಿ ಈ ಬೈಕಿನಲ್ಲಿ ಹೈ ಸ್ಟೆಬಿಲಿಟಿ ಅಲ್ಯೂಮಿನಿಯಂ ಬಳಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ಎಲೆಕ್ಟ್ರಿಕ್ ಬೈಕಿನ ಆಕರ್ಷಣೆಯನ್ನು ಹೆಚ್ಚಿಸಲು ರೆಟ್ರೊ ಲುಕ್ ನೀಡಲಾಗಿದೆ. ಅಗತ್ಯಕ್ಕೆ ಅನುಸಾರವಾಗಿ ಎಲೆಕ್ಟ್ರಿಕ್ ಲೈಟ್ ಹಾಗೂ ಇತರ ಬಿಡಿ ಭಾಗಗಳನ್ನು ಬಳಸಲಾಗಿದೆ. ಈ ಬೈಕಿನಲ್ಲಿ ಒಂದೇ ಒಂದು ಸೀಟ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ಬೈಕಿನಲ್ಲಿರುವ ಬ್ಯಾಟರಿಗಳನ್ನು ಸೀಟಿನ ಮುಂದೆ ಇರುವ ಮಧ್ಯ ಭಾಗದಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಬೈಕಿನ ಕಾರ್ಯಾಚರಣೆಗಾಗಿ ವಿವಿಧ ಪ್ರಮುಖ ಅಂಶಗಳನ್ನು ಅಳವಡಿಸಲಾಗಿದೆ. ಆದರೆ ಶೀಲ್ಡ್ ಕವರ್ ಅನ್ನು ಮೇಲಿನಿಂದ ಜೋಡಿಸಲಾಗಿರುವುದರಿಂದ ಅವುಗಳನ್ನು ಹೊರಗಿನಿಂದ ನೋಡಲು ಸಾಧ್ಯವಾಗುವುದಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ಎಲೆಕ್ಟ್ರಿಕ್ ಬೈಕ್ 16 ಕಿ.ವ್ಯಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಈ ಬೈಕಿನಲ್ಲಿರುವ 6.6 ಕಿ.ವ್ಯಾ ಬ್ಯಾಟರಿ ಅಗತ್ಯವಿರುವ ಎಲೆಕ್ಟ್ರಿಕ್ ಪವರ್ ಅನ್ನುಒದಗಿಸುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಪೂರ್ತಿಯಾಗಿ ಚಾರ್ಜ್‌ ಆದ ನಂತರ ಸುಮಾರು 120 ಕಿ.ಮೀಗಳವರೆಗೆ ಚಲಿಸುತ್ತದೆ.

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಪ್ರತಿ ಗಂಟೆಗೆ 80 ಕಿಮೀಗಳ ಟಾಪ್ ಸ್ಪೀಡ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕಿನಲ್ಲಿ ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಇಕೋ ಮೋಡ್ ಮೂಲಕ ಚಾಲನೆ ಮಾಡಿದರೆ ಹೆಚ್ಚು ದೂರ ಚಲಿಸಬಹುದು ಎಂಬುದು ಗಮನಾರ್ಹ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೆಡಲಿಂಗ್ ಸಿಸ್ಟಂ ಹೊಂದಿರುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಬೈಕಿದು

ಈ ಎಲೆಕ್ಟ್ರಿಕ್ ಬೈಕ್ ಅನ್ನು ಸದ್ಯಕ್ಕೆ ಜರ್ಮನಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Most Read Articles

Kannada
English summary
Erockit Systems develops world's first pedal powered electric bike. Read in Kannada.
Story first published: Friday, February 19, 2021, 13:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X