ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ಕಳೆದ ವಾರವಷ್ಟೇ ದೇಶದ ಪ್ರಮುಖ 70 ನಗರಗಳಲ್ಲಿ ಹೊಸದಾಗಿ ವಾಹನ ಮಾರಾಟ ಆರಂಭಿಸುವುದಾಗಿ ಘೋಷಣೆ ಮಾಡಿದ್ದು, ಹೊಸ ಯೋಜನೆಯ ಭಾಗವಾಗಿ ಕಂಪನಿಯು ಇವಿ ಬೈಕ್ ಶೋರೂಂಗಳನ್ನು ವಿಸ್ತರಿಸುತ್ತಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಪ್ರಕ್ರಿಯೆಯನ್ನು ವಿಸ್ತರಿಸುತ್ತಿರುವ ರಿವೋಲ್ಟ್ ಕಂಪನಿಯು ಈಗಾಗಲೇ ಹೊಸ ಯುನಿಟ್‌ಗಳಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಬಜೆಟ್ ಬೆಲೆಯ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಕಂಪನಿಯು ಕಳೆದ ವಾರವಷ್ಟೇ ನಮ್ಮ ಬೆಂಗಳೂರಿನ ಹೊಸ ಶೋರೂಂ ಆರಂಭಿಸಿದ ನಂತರ ಇದೀಗ ಗುಜರಾತಿನ ಸೂರತ್ ನಗರದಲ್ಲೂ ಪರಿಸರ ಸ್ನೇಹಿ ವಾಹನ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಸದ್ಯ ಶೋರೂಂಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಿರುವ ರಿವೋಲ್ಟ್ ಕಂಪನಿಯು ಉತ್ತಮವಾದ ಮಾರಾಟ ಜಾಲದೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಈ ಮೊದಲ ದೆಹೆಲಿ, ಪುಣೆ ಮತ್ತು ಚೆನ್ನೈ ನಗರಗಳಲ್ಲಿ ಮಾತ್ರ ಬೈಕ್ ಮಾರಾಟ ಹೊಂದಿದ್ದ ಕಂಪನಿಯು ಇದೀಗ ಹೊಸದಾಗಿ ಬೆಂಗಳೂರು, ಸೂರತ್, ಮುಂಬೈ ಸೇರಿದಂತೆ ಪ್ರಮುಖ 70 ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ರಿವೋಲ್ಟ್ ಕಂಪನಿಯು ಹೊಸ ಬೈಕ್ ಖರೀದಿಗಾಗಿ ರೂ. 19,999 ಮುಂಗಡ ಹಣ ನಿಗದಿಪಡಿಸಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೊಸ ಇವಿ ಬೈಕ್ ಮಾದರಿಗಾಗಿ ಬುಕ್ಕಿಂಗ್ ಮಾಡಿದ ನಂತರ ಮುಂದಿನ ಕೆಲವೇ ತಿಂಗಳಿನಲ್ಲಿ ವಿತರಣೆ ಮಾಡುವ ಭರವಸೆ ನೀಡಲಾಗಿದ್ದು, ಹೊಸ ಇವಿ ಬೈಕ್ ಮಾದರಿಯು ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ಮಾರಾಟಗೊಳ್ಳುತ್ತಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೊಸ ಬೈಕ್ ಮಾದರಿಯು ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಸದ್ಯ ದೆಹಲಿ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಸರ್ಕಾರಗಳು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಜೊತೆಗೆ ತಮ್ಮ ರಾಜ್ಯಗಳಲ್ಲಿನ ಇವಿ ವಾಹನ ಮಾರಾಟ ಮೇಲೆ ಹೆಚ್ಚುವರಿ ಸಬ್ಸಡಿ ನೀಡುತ್ತಿದ್ದು, ಹೆಚ್ಚುವರಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಮಾತ್ರ ಕಂಪನಿಯು ನಿರ್ಧರಿಸಿರುವ ರೂ. 1.25 ಲಕ್ಷ ಅನ್ವಯಿಸಲಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳು ಕೇಂದ್ರದ ಫೇಮ್ 2 ಸಬ್ಸಡಿ ಆಯ್ಕೆ ಮಾತ್ರ ಹೊಂದಿದ್ದು, ಇವಿ ನೀತಿ ಅಡಿ ಹೆಚ್ಚುವರಿಯಾಗಿ ಯಾವುದೇ ಸಬ್ಸಡಿ ಹೊಂದಿಲ್ಲ. ಹೀಗಾಗಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಆರ್‌ವಿ400 ಮಾದರಿಯು ರೂ. 1.25 ಲಕ್ಷ ಹೊಂದಿದ್ದು, ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಬೆಂಗಳೂರಿನ ನಂತರ ಸೂರತ್‌ನಲ್ಲಿ ಹೊಸ ಇವಿ ಬೈಕ್ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

More from DriveSpark

Article Published On: Saturday, October 30, 2021, 8:45 [IST]
English summary
Evolt opens first ev bike retail store in surat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+