ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೊರಹೊಮ್ಮಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವಿ ವಾಹನ ಮಾರಾಟದಲ್ಲಿ ಕಂಪನಿಯು ಇದೀಗ ಮೈಲಿಗಲ್ಲು ಸಾಧಿಸಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನ ಕಂಪನಿಗಳು ದುಬಾರಿ ಇಂಧನ ಪರಿಣಾಮ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಕಳೆದ ವರ್ಷದಿಂದಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ. ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯೂ ಕೂಡಾ ಹೆಚ್ಚಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಇವಿ ಸ್ಕೂಟರ್ ಉತ್ಪಾದನೆಯನ್ನು ಆರಂಭಿಸಿ ಸುಮಾರು 12 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ 4 ಲಕ್ಷ ಯುನಿಟ್‌ಗಳಿಗೂ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಇವಿ ಉತ್ಪನ್ನಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿಂದಿನ ಹತ್ತು ವರ್ಷಗಳಲ್ಲಿ ವಾಹನ ಮಾರಾಟ ಪ್ರಮಾಣವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಈ ಮೂಲಕ ಕಂಪನಿಯು ಇವಿ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ಶೇ.36 ಪಾಲು ತನ್ನದಾಗಿಸಿಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇವಿ ಸ್ಕೂಟರ್ ಮಾರಾಟವನ್ನು ಮುಂದಿನ ವರ್ಷ ಪ್ರಸಕ್ತ ವರ್ಷದ ಮಾರಾಟಕ್ಕಿಂತ ಶೇಕಡಾ 15ರಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಹೀಗಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಇವಿ ವಾಹನಗಳ ಮಾರಾಟವನ್ನು ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟ ಮಳಿಗೆಗಳನ್ನು ಹೊಂದಿರುವ ನಗರಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜಿಸಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 700ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

2022 ಆರ್ಥಿಕ ವರ್ಷದ ಕೊನೆಯಲ್ಲಿ ದೇಶಾದ್ಯಂತ ಒಟ್ಟು ಒಂದು ಸಾವಿರ ಟಚ್ ಪಾಯಿಂಟ್(ಮಾರಾಟ ಮಳಿಗೆಗಳನ್ನು) ಹೊಂದುವ ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಹೊಸ ಟಚ್ ಪಾಯಿಂಟ್ ತೆರೆಯಲಾಗುತ್ತಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಇದಲ್ಲದೆ ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಮುಂದಿನ ಮೂರು ವರ್ಷದಲ್ಲಿ ಒಟ್ಟು 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಮೊದಲ ವರ್ಷದಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಚಾರ್ಜರ್ ಕಂಪನಿಯು ಈಗಾಗಲೇ ದೇಶಾದ್ಯಂತ 20 ಪ್ರಮುಖ ನಗರಗಳಲ್ಲಿ ಆರಂಭಿಕ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಇವಿ ವಾಹನ ಮಾಲೀಕರಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗುವಂತೆ ಪ್ರತ್ಯೇಕ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಆ್ಯಪ್ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಮತ್ತು ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜಿಂಗ್‌ಗಾಗಿ ಸರತಿ ಸಾಲಿನಲ್ಲಿರುವ ವಾಹನಗಳ ಸಂಖ್ಯೆ ಮತ್ತು ಯಾವ ನಿಲ್ದಾಣದಲ್ಲಿ ಕಡಿಮೆ ವಾಹನಗಳಿವೆ ಎನ್ನುವುದರ ಜೊತೆ ಚಾರ್ಜಿಂಗ್‌ಗಾಗಿ ತೆಗೆದುಕೊಳ್ಳುವ ನಿಖರವಾದ ಸಮಯದ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಶಾಂಪಿಂಗ್ ಕಾಂಪ್ಲೆಕ್ಸ್, ಅಂಪಾರ್ಟ್‌ಮೆಂಟ್‌ಗಳು ಮತ್ತು ಮಾಲ್‌ಗಳಲ್ಲೂ ನಿರ್ದಿಷ್ಟ ವಾಹನ ಮಾಲೀಕರಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಅತಿ ಹೆಚ್ಚು ಇವಿ ವಾಹನ ಮಾರಾಟದೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ (Charzer Lite) ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ (Charzer Terra) ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Hero electric company became largest selling ev brand in india detais
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X