ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Hero Pleasure Plus Xtec ಸ್ಕೂಟರ್
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಸಲುವಾಗಿ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್(Hero Pleasure Plus Xtec) ಸ್ಕೂಟರ್ ಬೆಲೆಯು ರೂ.69,500 ಆಗಿದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಕೂಟರ್ ಎಲ್‌ಎಕ್ಸ್, ವಿಎಕ್ಸ್ ಮತ್ತು ಝಡ್‌ಎಕ್ಸ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಎಲ್‌ಎಕ್ಸ್ ರೂಪಾಂತರದ ಬೆಲೆಯು ರೂ,61,900 ಗಳಾದರೆ, ವಿಎಕ್ಸ್ ರೂಪಾಂತರದ ಬೆಲೆಯು ರೂ,64,200 ಗಳಾಗಿದೆ. ಇನ್ನು ಟಾಪ್-ಸ್ಪೆಕ್ ಝಡ್‌ಎಕ್ಸ್ ರೂಪಾಂತರದ ಬೆಲೆಯು ರೂ,66,400 ಗಳಾಗಿದೆ, ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಕೂಟರ್ ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಹೊಸ ಜುಬಿಲೆಂಟ್ ಹಳದಿ ಬಣ್ಣವನ್ನು ಹೊಂದಿದೆ.

ಸ್ಕೂಟರ್ ಹೀರೋಸ್ i3S ತಂತ್ರಜ್ಞಾನ (ಐಡಲ್-ಸ್ಟಾಪ್-ಸ್ಟಾರ್ಟ್ ಸಿಸ್ಟಂ), ಕಾಲ್ ಮತ್ತು SMS ಅಲರ್ಟ್ ನೊಂದಿಗೆ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಮೆಟಲ್ ಫ್ರಂಟ್ ಫೆಂಡರ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್‌ನ ಎಲ್‌ಇಡಿ ಪ್ರೊಹೆಕ್ಟರ್ ಹೆಡ್‌ಲ್ಯಾಂಪ್ 25% ಹೆಚ್ಚು ಬೆಳಕಿನ ತೀವ್ರತೆಯನ್ನು ದೀರ್ಘ ಮತ್ತು ವಿಶಾಲವಾದ ರಸ್ತೆ ತಲುಪುವಿಕೆಯೊಂದಿಗೆ ಒದಗಿಸುತ್ತದೆ ಮತ್ತು ಎಲ್ಲಾ ಚಾಲನಾ ಪರಿಸ್ಥಿತಿಗಳಲ್ಲಿ ಗರಿಷ್ಠ ಆನ್-ರೋಡ್ ಗೋಚರತೆಯನ್ನು ನೀಡುವ ಆಂಟಿ-ಫಾಗ್ ಅನುಕೂಲವನ್ನು ಹೊಂದಿದೆ ಎಂದು ಹೀರೋ ಹೇಳಿಕೊಂಡಿದೆ.

ಈ ಸ್ಕೂಟರ್ ರೆಟ್ರೊ ವಿನ್ಯಾಸ ಥೀಮ್ ಅನ್ನು ಪಡೆಯುತ್ತದೆ ಮತ್ತು ಕನ್ನಡಿಗಳಲ್ಲಿ ಪ್ರೀಮಿಯಂ ಕ್ರೋಮ್ ಸೇರ್ಪಡೆಗಳು, ಮಫ್ಲರ್ ಪ್ರೊಟೆಕ್ಟರ್, ಹ್ಯಾಂಡಲ್ ಬಾರ್, ಸೀಟ್ ಬ್ಯಾಕ್ ರೆಸ್ಟ್ ಮತ್ತು ಫೆಂಡರ್ ಸ್ಟ್ರಿಪ್ ಅನ್ನು ಒಳಗೊಂಡಿದೆ.ಸ್ಕೂಟರ್ ಡ್ಯುಯಲ್ ಟೋನ್ ಸೀಟ್ ಮತ್ತು ಬಣ್ಣದ ಒಳಗಿನ ಪ್ಯಾನಲ್‌ಗಳನ್ನು ಸಹ ಹೊಂದಿದೆ.

ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಮಾದರಿಯಲ್ಲಿ 110 ಸಿಸಿ ಬಿಎಸ್- VI ಕಂಪ್ಲೈಂಟ್ ಎಂಜಿನ್ ಹೊಂದಿದ್ದು, ಈ ಎಂಜಿನ್ 7,000 ಆರ್‌ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಹೀರೋನ i2S ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಅದರ ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ.

ಹೀರೋ ಮೋಟೋಕಾರ್ಪ್‌ನ ಸ್ಟ್ರಾಟಜಿ ಮತ್ತು ಗ್ಲೋಬಲ್ ಪ್ರಾಡಕ್ಟ್‌ನ ಮುಖ್ಯಸ್ಥ ಮಾಲೋ ಲೆ ಮ್ಯಾಸನ್ ಅವರು ಮಾತನಾಡಿ, ಪ್ಲೆಷರ್ ಪಲ್ಸ್ 10 ಒಂದು ಟ್ರೆಂಡ್‌ಸೆಟರ್ ಆಗಿದ್ದು, ಇದು ದೇಶದ ಅತ್ಯಂತ ಮೆಚ್ಚುಗೆ ಮತ್ತು ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಎಕ್ಸ್‌ಟೆಕ್ ಮಾದರಿಯು ಪ್ಲಾಟಿನಂ ಆವೃತ್ತಿಯಿಂದ ಸ್ಫೂರ್ತಿ ಪಡೆದ ಸೊಗಸಾದ ಅಂಶಗಳೊಂದಿಗೆ ಹೆಚ್ಚಿನ ಮೋಡಿಯನ್ನು ತರುತ್ತದೆ.

ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಆಯಾಮಗಳಿಗೆ ಸಂಬಂಧಿಸಿದಂತೆ, ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಏಕೆಂದರೆ ಇದು ಒಟ್ಟಾರ 1,769 ಎಂಎಂ ಉದ್ದ, 704 ಎಂಎಂ ಅಗಲ ಮತ್ತು 1,162 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ, ಇನ್ನು 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 106 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಈ ಹೊಸ ಸ್ಕೂಟರ್ 4.8 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ,

ಇನ್ನು ಟಾಪ್ಲ್ ಅಲರ್ಟ್ ಫೀಚರ್ ಈಗ ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 ನೊಂದಿಗೆ ಲಭ್ಯವಿದೆ. ಬೈಕಿ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ. ಇದು ಬೈಕ್ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು.

ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ವೈಶಿಷ್ಟ್ಯವು ಜೀವ ರಕ್ಷಕವಾಗಬಹುದು. ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು. ಪರಿಸ್ಥಿತಿ ಅಗತ್ಯವಿದ್ದಲ್ಲಿ ವೈದ್ಯಕೀಯ ಸಹಾಯವನ್ನು ಕೋರಬಹುದು. ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ.

ಇನ್ನು ಹೀರೋ ಮೋಟೋಕಾರ್ಪ್ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹೀರೋ ಮೋಟೋಕಾರ್ಪ್ ಈ ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ ಇದು ಹೆಡ್ ಲ್ಯಾಂಪ್ ಮತ್ತು ಫ್ರಂಟ್ ಪ್ರೊಫೈಲ್ ಅನ್ನು ಬಹಿರಂಗಪಡಿಸುತ್ತದೆ.

ಟೀಸರ್ ಹೇಳುವಂತೆ "ಸ್ಟೆಲ್ತ್ ಮೋಡ್ ಶೀಘ್ರದಲ್ಲೇ ಬರಲಿದೆ" ಮತ್ತು "ಗೋ ಬೂಮ್ ಇನ್ ಸ್ಟೆಲ್ತ್ ಮೋಡ್. ಇದು ಇತ್ತೀಚೆಗಷ್ಟೇ ಅಂತರ್ಜಾಲದಲ್ಲಿ ಸೋರಿಕೆಯಾದ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಆಗಿದೆ, ಟೀಸರ್ ಈ ಬೈಕಿನ ಮುಂಭಾಗವು ಬಿಳಿ ಬಣ್ಣದಲ್ಲಿದೆ. ಇನ್ನು ಈ ಬೈಕ್ ಮೈನ್ ಹೆಡ್‌ಲೈಟ್‌ನಲ್ಲಿ ಎರಡು ಎಲ್‌ಇಡಿ ಪೈಲಟ್ ಲ್ಯಾಂಪ್ ಗಳಾಗಿ ಬದಲಾಗುತ್ತದೆ. ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಮುಂಭಾಗದ ವಿನ್ಯಾಸವು ಎಕ್ಸ್‌ಟ್ರಿಮ್ 16ಆರ್ ಮಾದರಿಗೆ ಹೋಲುತ್ತದೆ. ಇದನ್ನು ಕೂಡ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications