ಭಾರತದಲ್ಲಿ ಹೀರೋ ಮೋಟೊಕಾರ್ಪ್ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ದೇಶಾದ್ಯಂತ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಹೊಸ ವಾಹನ ಖರೀದಿದಾರರಿಗೆ ಪರಿಸರ ಸ್ನೇಹಿ ಮತ್ತು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಹೊಸ ಬದಲಾವಣೆಗಳಿಗೆ ಕಾರಣವಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ತೀವ್ರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೋ ಮೋಟೊಕಾರ್ಪ್ ಕೂಡಾ ಹೊಸ ಮಾದರಿಯ ಇವಿ ಸ್ಕೂಟರ್ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೀರೋ ಮೋಟೊಕಾರ್ಪ್ ಹೊಸ ಇವಿ ಸ್ಕೂಟರ್ ಬಿಡುಗಡೆಗಾಗಿ ದಿನಾಂಕ ಸಹ ನಿಗದಿಪಡಿಸಲಾಗಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು 2022ರ ಮಾರ್ಚ್ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಅಂಗಸಂಸ್ಥೆಯಾದ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ವಿವಿಧ ಇವಿ ಸ್ಕೂಟರ್ ನಿರ್ಮಾಣ ಮತ್ತು ಮಾರಾಟ ಹೊಂದಿದ್ದರೂ ಮಾಡುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಮುಖ್ಯ ಬ್ರಾಂಡ್ ಅಡಿಯಲ್ಲಿ ಪ್ರತ್ಯೇಕವಾಗಿ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುವ ಯೋಜನೆ ಹೊಂದಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಹೀರೋ ಮೋಟೊಕಾರ್ಪ್ ದ್ವಿಚಕ್ರ ವಾಹನ ಉತ್ಪಾದನಾ ಘಟಕದಲ್ಲಿಯೇ ಪ್ರತ್ಯೇಕವಾಗಿ ಇವಿ ವಾಹನ ಅಭಿವೃದ್ದಿ ಮತ್ತು ಉತ್ಪಾದನಾ ಘಟಕ ನಿರ್ಮಿಸುತ್ತಿದ್ದು, ಇವಿ ವಾಹನ ಉತ್ಪಾದನಾ ಘಟಕಕ್ಕೆ ಹೀರೋ ಕಂಪನಿಯು ಗಾರ್ಡನ್ ಫ್ಯಾಕ್ಟರಿ ಎಂದು ನಾಮಕರಣ ಮಾಡಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಬ್ಯಾಟರಿ ಪ್ಯಾಕ್ ತಯಾರಿಕೆ, ರೋಡ್ ಟೆಸ್ಟಿಂಗ್, ವಾಹನ ಜೋಡಣೆ ಮತ್ತು ವೆಹಿಕಲ್ ಎಂಡ್ ಆಫ್ ಲೈನ್ ಟೆಸ್ಟಿಂಗ್(EOL)ಗಾಗಿ ಅತ್ಯುತ್ತಮ ವಾಹನ ಉತ್ಪಾದನಾ ಘಟಕವನ್ನು ತೆರೆದಿದ್ದು, ಕಂಪನಿಯು ಶೀಘ್ರದಲ್ಲಿಯೇ ಹೊಸ ಇವಿ ಸ್ಕೂಟರ್ ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಸ್ಕೂಟರ್‌ಗಳ ಉತ್ಪಾದನಾ ಆವೃತ್ತಿಯ ಅನಾವರಣಕ್ಕೂ ಮುನ್ನ ಕಂಪನಿಯ ವರ್ಚುವಲ್ ಸೆಲೆಬ್ರೆಷನ್‌ನಲ್ಲಿ ಬಿಡುಗಡೆಯಾಗಲಿರುವ ವಿವಿಧ ವಿನ್ಯಾಸದ ಹೊಸ ಸ್ಕೂಟರ್‌ಗಳ ಚಿತ್ರಗಳನ್ನು ಬಹಿರಂಗಪಡಿಸಿದ್ದು, ಹೀರೋ ಹೊಸ ಇವಿ ಸ್ಕೂಟರ್‌ಗಳಲ್ಲಿ ಸಾಮಾನ್ಯ ಮಾದರಿಗಳೊಂದಿಗೆ ಟ್ರೈ ಸೈಕಲ್ ಮಾದರಿಯು ಸಹ ಬಿಡುಗಡೆಯಾಗಲಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಹೀರೋ ಹೊಸ ಸ್ಕೂಟರ್ ಚಿತ್ರಗಳ ಹೊರತಾಗಿ ಯಾವುದೇ ತಾಂತ್ರಿಕ ಮಾಹಿತಿ ಲಭ್ಯವಿಲ್ಲವಾದರೂ ಹೊಸ ಇವಿ ಸ್ಕೂಟರ್ ಮಾದರಿಗಳು ಶೀಘ್ರದಲ್ಲೇ ರೋಡ್ ಟೆಸ್ಟಿಂಗ್ ಆರಂಭಿಸಲಿದ್ದು, ಹೊಸ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾದ ಓಲಾ, ಸಿಂಪಲ್ ಎನರ್ಜಿ ಮಾದರಿಗಳಲ್ಲಿನ ಮೈಲೇಜ್‌ಗೆ ಪೈಪೋಟಿಯಾಗಿ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಲಿವೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಬಿಡುಗಡೆಯಾಗಲಿರುವ ಹೀರೋ ಮೊದಲ ಇವಿ ಸ್ಕೂಟರ್ ಸಹಭಾಗೀತ್ವ ಕಂಪನಿಯಾಗಿರುವ ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ವಿವಾ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲೂ ಹೊಸ ವಾಹನ ಬಿಡುಗಡೆಗಾಗಿ ನೋಂದಣಿ ಕೂಡಾ ಮಾಡಲಾಗಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಗೊಗೊರೊ ಕಂಪನಿಯು ಸದ್ಯ ತೈವಾನ್‌ನಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಂದಿಗೆ ಸೌರವಿದ್ಯುತ್ ಮೂಲಕವೇ ಬ್ಯಾಟರಿ ಸ್ವಾಪಿಂಗ್ ಸೌಲಭ್ಯವನ್ನು ಜೋಡಣೆ ಮಾಡುವಲ್ಲಿ ಯಶಸ್ವಿ ಕಂಡುಕೊಂಡಿದ್ದು, ಹೀರೋ ಕಂಪನಿಯು ಕೂಡಾ ಇದೀಗ ಗೊಗೊರೊ ಜೊತೆಗೂಡಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ವಾಹನಗಳ ಬಳಕೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ಸಮಸ್ಯೆ ನಿವಾರಣೆಗಾಗಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿವೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಬ್ಯಾಟರಿ ವಿನಿಯಮ ಕೇಂದ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಮುಗಿದಿರುವ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ಸದ್ಯ ಬೆಂಗಳೂರು, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ನಗರಗಳಲ್ಲಿನ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹಭಾಗಿತ್ವ ಯೋಜನೆ ಅಡಿಯಲ್ಲಿ ಹೊಸ ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ.

ಹೀರೋ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ

ದೇಶದ ಅತಿದೊಡ್ಡ ಬೈಕ್ ತಯಾರಕ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕೂಡಾ ಗೊಗೊರೊ ಜೊತೆಗಿನ ಸಹಭಾಗಿತ್ವ ಯೋಜನೆಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಮತ್ತು ಸ್ಥಿರ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಿದ್ದವಾಗಿದೆ.

Article Published On: Tuesday, November 16, 2021, 21:16 [IST]
English summary
Hero motocorp announced launching its first ever electric scoter in march 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+