ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ವಿಶ್ವದ ಅತಿದೊಡ್ಡ ಡ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero MotoCorp(ಹೀರೋ ಮೋಟೊಕಾರ್ಪ್) ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗಾಗಿ 70 ದ್ವಿಚಕ್ರ ವಾಹನಗಳನ್ನು ಹರಿಯಾಣ ಸರ್ಕಾರಕ್ಕೆ ಹಸ್ತಾಂತರಿಸಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಯೋಜನೆಯನ್ನು ಆರಂಭಿಸಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಈ ಹೊಸ ಯೋಜನೆಯ ಹೆಸರು 'ಕರೋನಾ ವಾರಿಯರ್ಸ್ ಆನ್ ವೀಲ್ಸ್' ಎಂದಾಗಿದೆ, ಹರಿಯಾಣ ರಾಜ್ಯದ ಆರೋಗ್ಯ ಇಲಾಖೆಯ ಸಹಯೋಗದಲ್ಲಿ, ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೀರೋ ಎಕ್ಸ್‌ಟ್ರೀಮ್ 160ಆರ್ ಮಾದರಿಯ 50 ಯೂನಿಟ್‌ಗಳು ಮತ್ತು ಡೆಸ್ಟಿನಿ 125 ಸ್ಕೂಟರ್‌ನ 20 ಯೂನಿಟ್‌ಗಳನ್ನು ಹರಿಯಾಣದ ಆರೋಗ್ಯ ಇಲಾಖೆಯ ಮಹಾನಿರ್ದೇಶಕರಿಗೆ ಹಸ್ತಾಂತರಿಸಿದೆ. ಹೀರೋ ಮೋಟೋಕಾರ್ಪ್‌ನ ಸಿಎಸ್‌ಆರ್ ಪ್ಲಾಟ್‌ಫಾರ್ಮ್ ಹೀರೋ ವೀಕೇರ್ ಅಡಿಯಲ್ಲಿ ಈ ಹೊಸ ಯೋಜನೆಯನ್ನು ರೂಪಿಸಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವರು ನೀಡಿದ ಸೇವೆಗಾಗಿ ರಾಜ್ಯದಾದ್ಯಂತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಈ ಎಲ್ಲಾ ವಾಹನಗಳನ್ನು ನೀಡಲಾಗುವುದು ಎಂದು ಹೀರೋ ಮೋಟೋಕಾರ್ಪ್ ಹೇಳಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಕೊರೋನಾ ಸಂಬಂಧಿತ ಕೆಲಸಕ್ಕಾಗಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ನಗರದಾದ್ಯಂತ ಪರೀಕ್ಷೆ, ಸ್ಯಾನಿಟೈಸೇಶನ್, ಸಮಾಲೋಚನೆ ಮತ್ತು ಮೊಬೈಲ್ ವ್ಯಾಕ್ಸಿನೇಷನ್ ನಂತಹ ಮನೆ-ಮನೆಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ಇದು ಸಹಾಯವಾಗುತ್ತದೆ ಎಂದು ಹೀರೋ ಮೋಟೊಕಾರ್ಪ್ ಕಂಪನಿ ಹೇಳುತ್ತದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಹರಿಯಾಣದಲ್ಲಿ ತನ್ನ ಉತ್ಪಾದನಾ ಘಟಕ ಹೊಂದಿರುವ ಹೀರೋ ಮೋಟೋ ಕಾರ್ಪ್, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಹಲವಾರು ಇತರ ಬೆಂಬಲ ಕಾರ್ಯಕ್ರಮಗಳನ್ನು ವಿಸ್ತರಿಸಿದೆ. ಇಲ್ಲಿಯವರೆಗೆ ಕಂಪನಿಯು ವಿಶೇಷವಾಗಿ ವಿನ್ಯಾಸಗೊಳಿಸಿದ ಆರು ಎಫ್‌ಆರ್‌ವಿ ವಾಹನಗಳನ್ನು ವಿವಿಧ ಆರೋಗ್ಯ ವಿಭಾಗಗಳಿಗೆ ನೀಡಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಗುರುಗ್ರಾಮ್ ಜಿಲ್ಲಾಡಳಿತದ ಸಹಯೋಗದೊಂದಿಗೆ, ಕಂಪನಿಯು ಸಂಪೂರ್ಣ ಸುಸಜ್ಜಿತ 100 ಹಾಸಿಗೆ ಕೋವಿಡ್ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದೆ. ಕಂಪನಿಯು ಹರಿಯಾಣದ ಕೆಲವು ಆಸ್ಪತ್ರೆಗಳಿಗೆ ತುರ್ತು ವೈದ್ಯಕೀಯ ಬಳಕೆಗಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಕೊಡುಗೆಯಾಗಿ ನೀಡಿದೆ ಮತ್ತು ಆರೋಗ್ಯ ಕಾರ್ಯಕರ್ತರಿಗಾಗಿ ವಿವಿಧ ರಾಜ್ಯಗಳಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಪಿಪಿಇ ಕಿಟ್‌ಗಳನ್ನು ಕೊಡುಗೆಯಾಗಿ ನೀಡುತ್ತಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಹೀರೋ ಮೋಟೊಕಾರ್ಪ್ ಕಳೆದ ತಿಂಗಳ 9 ರಂದು ಒಂದೇ ದಿನದಲ್ಲಿ ಒಂದು ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಅದೇ ದಿನ ಕಂಪನಿಯು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿತು. ದ್ವಿಚಕ್ರ ವಾಹನ ತಯಾರಕರು ಆಗಸ್ಟ್ 9ರ ಹೀರೋ ದಿನದಂದು ತನ್ನ ದೈನಂದಿನ ಸರಾಸರಿ ಸ್ಕೂಟರ್ ಮಾರಾಟವನ್ನು ದ್ವಿಗುಣಗೊಳಿಸಿದರು.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಹೊಸದಾಗಿ ಬಿಡುಗಡೆಯಾದ ಮೇಸ್ಟ್ರೋ ಎಡ್ಜ್ 125, ಡೆಸ್ಟಿನಿ ಮತ್ತು ಪ್ಲೆಶರ್ 110 ಸೇರಿದಂತೆ ಸ್ಕೂಟರ್‌ಗಳ ಮಾದರಿಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿತ್ತು. ಈಗಿರುವ ಶ್ರೇಣಿಯ ಜೊತೆಗೆ, ಇತ್ತೀಚೆಗೆ ಬಿಡುಗಡೆಯಾದ ಗ್ಲಾಮ ಮ್ಯಾಟ್, ಮ್ಯಾಟ್ ಶೀಲ್ಡ್ ಗೋಲ್ಡ್ ಬಣ್ಣದಲ್ಲಿ ಹೊಸ ಸ್ಪ್ಲೆಂಡರ್, ಮತ್ತು ಎಕ್ಸ್ ಟ್ರೇಮ್ 160ಆರ್ ಮಾದರಿಗಳು ಸೇರಿ ಒಟ್ಟಾರೆ ಒಂದು ಲಕ್ಷ ಚಿಲ್ಲರೆ ಮಾರಾಟವನ್ನು ದಾಖಲಿಸಿದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ತನ್ನ ಹಿಂದಿನ ಜಂಟಿ ಪಾಲುದಾರಿಕೆಯಿಂದ ಬೇರ್ಪಟ್ಟ ನಂತರ, ಹೀರೋ ಮೋಟೋಕಾರ್ಪ್ ತನ್ನ ಹೊಸ ಬ್ರಾಂಡ್ ಗುರುತನ್ನು ಲಂಡನ್‌ನ ಸಾಂಪ್ರದಾಯಿಕ O2 ಅರೆನಾದಲ್ಲಿ ಆಗಸ್ಟ್ 9, 2011 ರಂದು ಅನಾವರಣಗೊಳಿಸಿತು. ಈ ವರ್ಷ ಆಗಸ್ಟ್ 9, ಕಂಪನಿಯ 10ನೇ ವಾರ್ಷಿಕೋತ್ಸವವನ್ನು ಅಚರಿಸಿತು.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಹೀರೋ ಮೋಟೊಕಾರ್ಪ್ ಕೊರೋನಾ ವಾರಿಯರ್ಸ್‍ಗೆ ನೀಡಿದ ಡೆಸ್ಟಿನಿ 125 ಸ್ಕೂಟರ್‌ನ ಬಗ್ಗೆ ಹೇಳುವುದಾದರೆ, ಹೀರೋ ಮೋಟೊಕಾರ್ಪ್ ಕಂಪನಿಯು ಡೆಸ್ಟಿನಿ 125 ಸ್ಕೂಟರ್ ಅನ್ನು 2018ರ ಕೊನೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಸ್ವದೇಶೀ ವಾಹನ ತಯಾರಕರಾದ ಹೀರೋ ತನ್ನ ಡೆಸ್ಟಿನಿ 125 ಸ್ಕೂಟರ್ ಅನ್ನು ಐ3 ಎಸ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವ ಮೊದಲ ಸ್ಕೂಟರ್ ಆಗಿ ಪರಿಚಯಿಸಿತು.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಈ ಡೆಸ್ಟಿನಿ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹೀರೋ ಡೆಸ್ಟಿನಿ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಇನ್ನು ಎಕ್ಸ್‌ಟ್ರೀಮ್ 160ಆರ್ ಬೈಕನ್ನು ಕೂಡ ಕೊರೋನಾ ವಾರಿಯರ್ಸ್‍ಗೆ ನೀಡಿದ್ದಾರೆ. ಈ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಕೊರೋನಾ ವಾರಿಯರ್ಸ್‍ಗೆ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದ Hero MotoCorp

ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ಕ್ರಮಿಸುತ್ತದ ಎಂದು ಹೀರೋ ಹೇಳಿಕೊಂಡಿದೆ. ಇನ್ನು ಹೀರೋ ಮೋಟೊಕಾರ್ಪ್ ತನ್ನ ಪೋರ್ಟ್ಫೋಲಿಯೊದಲ್ಲಿರುವ ಹಲವಾರು ಜನಪ್ರಿಯ ಮಾದರಿಗಳನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸುತ್ತಿದೆ.

Most Read Articles

Kannada
English summary
Hero motocorp donates 70 two wheelers to haryana government for front line workers details
Story first published: Sunday, September 5, 2021, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X