ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ್ ಬೈಕ್‍ಗಳ ಬೆಲೆ ಪರಿಷ್ಕರಣೆಯನ್ನು ಘೋಷಿಸಿದೆ. ಈ ಇತ್ತೀಚಿನ ಹೆಚ್ಚಳವು ಸಂಪೂರ್ಣ ಪೋರ್ಟ್ಫೋಲಿಯೊ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೀರೋ ಪ್ಯಾಶನ್ ಪ್ರೊ(Hero Passion Pro) ಬೈಕಿನ ಬೆಲೆಯು ಕೂಡ ಹೆಚ್ಚಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಪ್ಯಾಶನ್ ಪ್ರೊ ಬೈಕಿನ ಬೆಲೆ ಏರಿಕೆಯಾದ ಬಳಿಕ, ಹೀರೋ ಪ್ಯಾಶನ್ ಪ್ರೊ 100 ಮಿಲಿಯನ್ ಎಡಿಷನ್ ಡ್ರಮ್ ರೂಪಾಂತರದ ಬೆಲೆಯು ರೂ.72,175 ಗಳಾದರೆ ಪ್ಯಾಶನ್ ಪ್ರೊ 100 ಮಿಲಿಯನ್ ಎಡಿಷನ್ ಡಿಸ್ಕ್ ರೂಪಾಂತರದ ಬೆಲೆಯು ರೂ.75,100 ಗಳಾಗಿದೆ. ಇನ್ನು ಪ್ಯಾಶನ್ ಪ್ರೊ ಸ್ಪೆಲ್ಫ್/ಅಲಾಯ್/ಡ್ರಮ್ ರೂಪಾಂತರದ ಬೆಲೆಯು ರೂ.70,375 ಗಳಾದರೆ. ಪ್ಯಾಶನ್ ಪ್ರೊ ಸ್ಪೆಲ್ಫ್/ಅಲಾಯ್/ಡಿಸ್ಕ್ ರೂಪಾಂತರದ ಬೆಲೆಯು ರೂ.73,300 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಪ್ಯಾಶನ್ ಪ್ರೊ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ. ಹೀರೋ ಮೋಟೊಕಾರ್ಪ್ ಬಿಎಸ್-6 ಪ್ಯಾಶನ್ ಪ್ರೊ ಬೈಕ್ ಡ್ರಮ್ ಬ್ರೇಕ್ ಮತ್ತು ಫ್ರಂಟ್ ಡಿಸ್ಕ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಹೀರೋ ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ನವೀಕರಿಸಿದ ಹೆಡ್‍‍ಲ್ಯಾಂಪ್‍ ಮತ್ತು ಟೇಲ್‍‍‍ಲೈ‍‍ಟ್‍‍ಗಳನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಈ ಪ್ಯಾಶನ್ ಪ್ರೊ ಬೈಕಿನಲ್ಲಿ ಟೇಲ್ ವಿಭಾಗವು ಹಿಂದಿನ ಮಾದರಿಗಿಂತ ಹೆಚ್ಚು ನಯವಾಗಿದೆ ಮತ್ತು ಬಾಡಿ ಪ್ಯಾನೆಲ್‍ಗಳು ಆಕರ್ಷಕವಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿರುವ ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್‍ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ಗ್ರಾಫಿಕ್ಸ್ ಆಕರ್ಷಕವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಹೀರೋ ಪ್ಯಾಶನ್ ಪ್ರೊ ಬೈಕ್ 6 ಹೊಸ ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಬಿಎಸ್-6 ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಹೀರೋ ಪ್ಯಾಶನ್ ಬೈಕಿ‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಒಳಗೊಂಡಿದೆ.ಈ ಹೊಸ ಕ್ಲಸ್ಟರ್ ಮೈಲೇಜ್ ಮತ್ತು ಇಂಧನ ದಕ್ಷತೆಯ ಅಂಕಿ ಅಂಶಗಳನ್ನು ಒಳಗೊಂಡಂತೆ ಹಲವಾರು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಬಿಎಸ್-6 ಹೀರೋ ಪ್ಯಾಶನ್ ಬೈಕಿನಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಫ್ರಂಟ್ ಸಸ್ಪೆಂಷನ್ ಅನ್ನು 15 ಎಂಎಂ ಅಷ್ಟು ಹೆಚ್ಚಿಸಿದೆ. ಇನ್ನು ಹೊಸ ಹೀರೋ ಪ್ಯಾಶನ್ ಪ್ರೊ ಬೈಕಿನಲ್ಲಿ ಹೊಸ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿದ್ದ ಕಾರ್ಬ್ಯುರೇಟರ್ ಅನ್ನು ಬದಲಾಯಿಸಿದೆ. ಹೊಸ ಪ್ಯಾಶನ್ ಪ್ರೊ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ಶೇ.5ರಷ್ಟು ಇಂಧನ ಸಾಮರ್ಥ್ಯ ಹೆಚ್ಚಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಈ ಹೊಸ ಬೈಕಿನಲ್ಲಿ ಆಟೋ ಸೈಲ್ ಪಂಕ್ಷನ್ ಅನ್ನು ಹೊಂದಿದೆ. ಇದು ಟ್ರಾಫಿಕ್‍‍ನಲ್ಲಿ ಸುಲಭವಾಗಿ ಸವಾರಿ ಮಾಡಲು ಸಹಕಾರಿಯಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿ ಬಿಎಸ್-6, 110 ಸಿಸಿ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಹೀರೋ ಮೋಟೊಕಾರ್ಪ್ ಇತ್ತೀಚೆಗೆ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಮೂಲಕ 10 ಕೋಟಿ(100 ಮಿಲಿಯನ್) ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸಿದ್ದು, ಹೊಸ ಮೈಲಿಗಲ್ಲು ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಲಾಯಿತು. 100 ಮಿಲಿಯನ್ ಮಿಲಿಯನ್ ಸ್ಪೆಷಲ್ ಎಡಿಷನ್ ಆಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿದರು.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಹೀರೋ ಮೋಟೊಕಾರ್ಪ್ 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್ ಪರಿಚಯಿಸಿದೆ. ಇದರಲ್ಲಿ ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಆಕರ್ಷಕ ಗ್ರಾಫಿಕ್‌ನೊಂದಿಗೆ ಹೊಸ ಮೈಲಿಗಲ್ಲು ಸಾಧನೆಯ 100 ಮಿಲಿಯನ್ ಬ್ಯಾಡ್ಜ್ ಪಡೆದುಕೊಂಡಿದೆ., ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾದ ಪೇಟಿಂಗ್ ಆಯ್ಕೆಯನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಹೊಸ ಪೇಟಿಂಗ್ ಮತ್ತು ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯಯಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯೆಂತೆ ಬೆಲೆ ಪಡೆದುಕೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Passion Pro ಬೈಕ್

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುವಷ್ಟು ಅತಿ ದೊಡ್ಡ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ಕಂಪನಿಯ ಪ್ಯಾಶನ್ ಪ್ರೊ ಬೈಕ್ ಆಕರ್ಷಕ ವಿನ್ಯಾಸ ಮತ್ತು ಉತ್ತಮ ಫೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದೆ.

Most Read Articles

Kannada
English summary
Hero motocorp hiked the prices of passion pro in india details
Story first published: Thursday, September 30, 2021, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X