ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಮಾರಾಟಕ್ಕಾಗಿ ಪ್ರತ್ಯೇಕ ವಿಭಾಗ ತೆರೆದ ಹೀರೋ ಮೊಟೋಕಾರ್ಪ್
ಭಾರತದಲ್ಲಿ ಹೀರೋ ಮೋಟೊಕಾರ್ಪ್ ಜೊತೆಗೂಡಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಅಮೆರಿಕ ಜನಪ್ರಿಯ ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಯೋಜನೆಯ ಭಾಗವಾಗಿ ಹೀರೋ ಮೊಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟಕ್ಕಾಗಿ ಪ್ರತ್ಯೇಕ ಮಾರಾಟ ಸೌಲಭ್ಯ ತೆರೆದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ತಗ್ಗಿಸುವುದಕ್ಕಾಗಿ ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗಿತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.

ಸ್ವತಂತ್ರ ಬೈಕ್ ಮಾರಾಟ ಮಳಿಗೆಗಳಿಂದಾಗುತ್ತಿರುವ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹೊಸ ಯೋಜನೆಗೆ ಚಾಲನೆ ನೀಡಿರುವ ಹಾರ್ಲೆ ಕಂಪನಿಯು ಹೀರೋ ಕಂಪನಿಯ ಜೊತೆಗೂಡಿ ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದು, ಹೀರೋ ಕಂಪನಿಯು ಹೊಸ ಯೋಜನೆಗಾಗಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ.

ಐಷಾರಾಮಿ ಬೈಕ್ ಬ್ರಾಂಡ್‌ಗೆ ಪೂರಕವಾದ ಯೋಜನೆಗಳನ್ನು ಸಿದ್ದಪಡಿಸಿರುವ ಹೀರೋ ಮೊಟೋಕಾರ್ಪ್ ಕಂಪನಿಯು ಬೆಂಗಳೂರಿನಲ್ಲಿ ಟಸ್ಕರ್ ಮೋಟಾರ್‌ಸೈಕಲ್ ಪ್ರೈ.ಲಿ ಸೇರಿದಂತೆ 11 ಹೊಸ ಡೀಲರ್ಸ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಉದ್ಯಮ ವ್ಯವಹಾರಕ್ಕಾಗಿ ಐಷಾರಾಮಿ ಬೈಕ್ ತಂತ್ರಜ್ಞಾನ ವಿಭಾಗದಲ್ಲಿ ಅನುಭವ ಹೊಂದಿರುವ ರವಿ ಅವಲೂರ್ ಅವರನ್ನು ಸಹಭಾಗೀತ್ವ ಯೋಜನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಪ್ರೀಮಿಯಂ ಮೋಟಾರ್ಸೈಕಲ್ ಮಾರುಕಟ್ಟೆಯ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಅನುಭವವನ್ನು ಹೊಂದಿರುವ ರವಿ ಅವಲೂರ್ ಅವರು ಈ ಹಿಂದೆ ಡುಕಾಟಿ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಹೀರೋ ಮೋಟೊಕಾರ್ಪ್ ಜೊತೆಗೂಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯ ಸಹಭಾಗಿತ್ವ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹೊಸ ಯೋಜನೆಯಲ್ಲಿ ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ ಕೂಡಾ ಉಸ್ತುವಾರಿ ವಹಿಸಲಿದ್ದಾರೆ.

ಇನ್ನು ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗಿತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ.

ಇದಕ್ಕಾಗಿ ಕಳೆದ ವರ್ಷವೇ ಹೀರೋ ಮೋಟೊಕಾರ್ಪ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ಕರೋನಾ ವೈರಸ್ ಪರಿಣಾಮ ಹೊಸ ಯೋಜನೆಯ ಬಗೆಗೆ ತಟಸ್ಥವಾಗಿತ್ತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಉದ್ಯಮ ವ್ಯವಹಾರಗಳು ತಿಳಿಗೊಂಡಿರುವ ಹಿನ್ನಲೆ ಸಹಭಾಗೀತ್ವ ಯೋಜನೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯು ಹಾರ್ಲೆ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟ ಕಾರ್ಯಾಚರಣೆಗೆ ಪ್ರತ್ಯೇಕ ಸೌಲಭ್ಯಗಳೊಂದಿಗೆ ಪರಸ್ಪರ ಸಹಕರಿಸಲಿವೆ.

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಹೀರೋ ಮೋಟೊಕಾರ್ಪ್ ಕಂಪನಿಯು ದೇಶಾದ್ಯಂತ ಮಾರಾಟ ಸರಪಳಿಯಲ್ಲಿ ಅತ್ಯುತ್ತಮ ಅವಕಾಶ ಹೊಂದಿದ್ದು, ಇದೇ ಕಾರಣಕ್ಕೆ ಹಾರ್ಲೆ ಕಂಪನಿಯು ಹೀರೋ ಕಂಪನಿಯ ಜೊತೆಗೆ ಕೈಜೋಡಿಸಲು ಪ್ರಮುಖ ಕಾರಣವಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಜೊತೆಗೆ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರೂ ಹಾರ್ಲೆ ಡೇವಿಡ್ಸನ್ ಕಂಪನಿಯಲ್ಲಿನ ಭಾರತೀಯ ಉದ್ಯೋಗಿಗಳು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಅಧಿಕೃತ ಕಚೇರಿ, ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಇನ್ನುಳಿದ ವ್ಯವಹಾರಗಳು ಸಾಮಾನ್ಯ ಮಾದರಿಯಲ್ಲೇ ಹೀರೋ ಜೊತೆಗೆ ಮುಂದುವರಿಯಲಿವೆ.


Click it and Unblock the Notifications








