ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್(Hero Xtreme 160R Stealth Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೀರೋ ಮೋಟೋಕಾರ್ಪ್ ಈ ಹೊಸ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಟೀಸರ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಈ ಹೊಸ ಮಾದರಿಯನ್ನು ಹೀರೋ ಮೋಟೋಕಾರ್ಪ್ ಬಿಡುಗಡೆಗೊಳಿಸಿದೆ, ಸ್ವದೇಶಿ ಬ್ರಾಂಡ್‌ನ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಆಗಮನದೊಂದಿಗೆ ಮತ್ತಷ್ಟು ನವೀಕರಿಸಲಾಗಿದೆ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಯೋಜನೆಯಲ್ಲಿ ನೀಡಲಾಗಿದೆ. ಹೊಸ ಹೀರೋ ಎಕ್ಸ್‌ಟ್ರೀಮ್ 160 ಆರ್ ಸ್ಟೆಲ್ತ್ ಎಡಿಷನ್ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ (ಸಿಂಗಲ್-ಚಾನೆಲ್ ಎಬಿಎಸ್‌ನೊಂದಿಗೆ ಡಬಲ್ ಡಿಸ್ಕ್) ಆಗಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಬೈಕ್ ಪ್ರಮುಖ ಮುಖ್ಯಾಂಶಗಳು ಎಲ್ಇಡಿ ಟರ್ನ್ಇಂಡಿಕೇಟರ್ಸ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಮತ್ತು ಎಲ್‌ಸಿಡಿ ಬ್ರೈಟ್ನೆಸ್ ಹೊಂದಾಣಿಕೆಯಂತಹ ಫಸ್ಟ್-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಇದರ ಜೊತೆಯಲ್ಲಿ, ಹೀರೋ ಸ್ಪೀಡೋಮೀಟರ್‌ನಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್ಸ್ ವೈಶಿಷ್ಟ್ಯವನ್ನು ಸಹ ಲಭ್ಯವಾಗುವಂತೆ ಮಾಡಿದೆ. ಸಾಮಾನ್ಯ ರೂಪಾಂತರದಿಂದ ತನ್ನನ್ನು ಪ್ರತ್ಯೇಕಿಸಲು ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಹೊಸ 3D ಲೋಗೋ ಬ್ರ್ಯಾಂಡಿಂಗ್ ಮತ್ತು ಹೊಸ 'ಸ್ಟೆಲ್ತ್' ಬ್ಯಾಡ್ಜ್ ಅನ್ನು ಪಡೆಯುತ್ತದೆ.ದೇಶದಲ್ಲಿ ಪ್ರಸ್ತುತ ಇರುವ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 160 ಸಿಸಿ ಬೈಕ್ ಗಳು ಲಭ್ಯವಿದೆ ಎಂದು ಹೀರೋ ಹೇಳುತ್ತಾರೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೀರೋ ಮೋಟೋಕಾರ್ಪ್‌ನ ಸ್ಟ್ರಾಟಜಿ ಮತ್ತು ಜಾಗತಿಕ ಉತ್ಪನ್ನ ಯೋಜನೆ ಮುಖ್ಯಸ್ಥ ಮಾಲೋ ಲೆ ಮ್ಯಾಸನ್‌ ಅವರು ಬಿಡುಗಡೆ ಕುರಿತು ಮಾತನಾಡಿ, ಹೀರೋ ಮೋಟೋಕಾರ್ಪ್‌ನ ಎಕ್ಸ್-ಸರಣಿಯ ಪ್ರೀಮಿಯಂ ಬೈಕ್ ಗಳಲ್ಲಿ ಎಕ್ಸ್‌ಟ್ರಿಮ್ ಸ್ಪೋರ್ಟಿ ಮತ್ತು ಅರ್ಬನ್ ಬ್ರಾಂಡ್ ಆಗಿದೆ.ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಮತ್ತಷ್ಟು ಶ್ರೇಷ್ಠ ತಂತ್ರಜ್ಞಾನ ಮತ್ತು ಆಕರ್ಷಕ ಶೈಲಿಯನ್ನು ತರುತ್ತಿದ್ದು ಅದು ಗ್ರಾಹಕರನ್ನು ಅವರ ದೈನಂದಿನ ಸವಾರಿಯಲ್ಲಿ ರೋಮಾಂಚನಗೊಳಿಸುತ್ತದೆ ಎಂದು ಹೇಳಿದರು.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೊಸ ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಯಾವುದೇ ಮಹತ್ವದ ಯಾಂತ್ರಿಕ ಬದಲಾವಣೆಗಳನ್ನು ಪಡೆದಿಲ್ಲ, ಇದರಲ್ಲಿ ಅದೇ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟ್ಯಾಂಡರ್ಡ್ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೀರೋ ಹೇಳಿಕೊಂಡಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬೇಸ್ ಸ್ಪೆಕ್ ಮಾದರಿಯು 138.5 ಕೆಜಿ ತೂಕವನ್ನು ಹೊಂದಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳ ಸೆಟಪ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ರೈಡರ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್ ಗಳೊಂದಿಗೆ ಎಬಿಎಸ್ ಅನ್ನು ನೀಡಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಇನ್ನು ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿತು. ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ ಈ ಹೊಸ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಅನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಇನ್ನು ಬಿಡುಗಡೆಗೊಂಡ 00 ಮಿಲಿಯನ್ ಸ್ಪೆಷಲ್ ಎಢಿಷನ್ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬೈಕ್ ಕೆಂಪು ಮತ್ತು ಬಿಳಿ ಬಣ್ಣದ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಈ ಬೈಕಿನ ಹೆಡ್ ಲೈಟ್ ಮಾಸ್ಕ್, ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗದ ಬಾಡಿ ಪ್ಯಾನೆಲ್‌ಗಳಲ್ಲಿ ಕೆಂಪು ಬಣ್ಣವನ್ನು ಹೊಂದಿರುವ 100 ಮಿಲಿಯನ್ ಎಡಿಷನ್ ಮಾದರಿಗಳಲ್ಲಿ ಮಾತ್ರ ಈ ವಿಶೇಷ ಬಣ್ಣವನ್ನು ಹೊಂದಿದೆ.

ಭಾರತದಲ್ಲಿ ಹೊಸ Hero Xtreme 160R Stealth Edition ಬಿಡುಗಡೆ

ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್ 160 ಮತ್ತು ಸುಜುಕಿ ಜಿಕ್ಸರ್ 150 ಬೈಕ್ ಗಳಿಗೆ ಪೈಪೋಟಿ ನೀಡುತ್ತಿದೆ. ಅಲ್ಲದೇ ಈ ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಹೀರೋ ಕಂಪನಿಯು ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಈ ಹೊಸ ಮಾದರಿಯು ನೆರವಾಗುತ್ತದೆ.

Most Read Articles

Kannada
English summary
Hero motocorp launched new xtreme 160r stealth edition in india price features details
Story first published: Friday, October 15, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X