ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಇತ್ತೀಚಿನ ದಿನಗಳಲ್ಲಿ ಸ್ಕೂಟರ್‌ಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬರುತ್ತಿವೆ. ಓಲಾ ಕಂಪನಿಯು ಇಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 10 ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಪ್ರಸಿದ್ಧ ಸ್ಕೂಟರ್ ಮಾದರಿಯಾದ ಫಾಸಿನೊ 125 ಸ್ಕೂಟರ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಇದರ ಬೆನ್ನಲ್ಲೇ ದೇಶದ ದೈತ್ಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್, ಅಪ್ ಡೇಟ್ ಮಾಡಲಾದ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಭಾರತದಲ್ಲಿ ತನ್ನ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಅಪ್ ಡೇಟ್ ಮಾಡಲಾದ ಈ ಹೊಸ 125 ಸಿಸಿ ಸ್ಕೂಟರ್ ಮೂರು ಮಾದರಿಗಳಲ್ಲಿ ಲಭ್ಯವಿರಲಿದೆ. ಈ ಸ್ಕೂಟರ್ ಅನ್ನು ಡ್ರಮ್, ಡಿಸ್ಕ್ ಹಾಗೂ ಕನೆಕ್ಟೆಡ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಡ್ರಮ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.72,250 ಗಳಾದರೆ, ಡಿಸ್ಕ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.76,500 ಗಳಾಗಿದೆ. ಇನ್ನು ಕನೆಕ್ಟೆಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.79,750 ಗಳಾಗಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಅಪ್ ಡೇಟ್ ಮಾಡಲಾದ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಹೊಸ ಪ್ರೊಜೆಕ್ಟರ್ ಎಲ್ಇಡಿ ಫ್ಲ್ಯಾಷ್ ಲೈಟ್, ಪೂರ್ಣ ಪ್ರಮಾಣದ ಡಿಜಿಟಲ್ ಸ್ಪೀಡೋಮೀಟರ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಮೂಲಕ ಮೊಬೈಲ್ ಫೋನ್‌ಗೆ ಒಳಬರುವ ಹಾಗೂ ಹೊರಹೋಗುವ ಕರೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಹೊಸ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅನ್ನು ಟರ್ನ್-ಬೈ-ಟರ್ನ್ ಮಾರ್ಗದ ಮಾಹಿತಿಯೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಫೀಚರ್ ಮೋಟಾರ್ ಸೈಕಲ್ ಉತ್ಸಾಹಿಗಳನ್ನು ಆಕರ್ಷಿಸುತ್ತದೆ. ಈ ಸ್ಕೂಟರ್‌ನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯ ಕನೆಕ್ಟೆಡ್ ಟೆಕ್ನಾಲಜಿಯನ್ನು ಸಹ ಪರಿಚಯಿಸಲಾಗಿದೆ. ಈ ಸ್ಕೂಟರ್‌ನಲ್ಲಿ ಸ್ವಲ್ಪ ತೀಕ್ಷ್ಣವಾದ ವಿನ್ಯಾಸವನ್ನು ನೀಡಲಾಗಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಈ ಸ್ಕೂಟರಿನ ಮುಂಭಾಗದಲ್ಲಿ ಶಾರ್ಪ್ ಆದ ಹೆಡ್‌ಲ್ಯಾಂಪ್, ಎರಡು ವಿಭಿನ್ನ ಬಣ್ಣಗಳು, ಮಾಸ್ಕ್ ವ್ರಾಪ್ ಮಾಡಲಾದ ಇಂಡಿಕೇಟರ್ ಲೈಟ್'ಗಳನ್ನು ನೀಡಲಾಗಿದೆ. ಕನೆಕ್ಟೆಡ್ ಮಾದರಿಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಎರಡು ವಿಶೇಷ ಬಣ್ಣಗಳನ್ನು ನೀಡಲಾಗಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಮಾದರಿಯನ್ನು ಪ್ರಿಸ್ಮಾಟಿಕ್ ಯೆಲ್ಲೊ ಹಾಗೂ ಪ್ರಿಸ್ಮಾಟಿಕ್ ಪರ್ಪಲ್‌ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಡಿಸ್ಕ್ ಮಾದರಿಯನ್ನು ಕ್ಯಾಂಡಿ ಪ್ಲೇಸಿಂಗ್ ರೆಡ್, ಪ್ಯಾಂಥರ್ ಬ್ಲ್ಯಾಕ್, ಪರ್ಲ್ ಸಿಲ್ವರ್ ವೈಟ್, ಮ್ಯಾಟ್ ಟೆಕ್ನೋ ಬ್ಲೂ, ಪ್ರಿಸ್ಮಾಟಿಕ್ ಹಳದಿ ಹಾಗೂ ಪ್ರಿಸ್ಮ್ಯಾಟಿಕ್ ಪರ್ಪಲ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಡ್ರಮ್ ಮಾದರಿಯನ್ನು ಕ್ಯಾಂಡಿ ಪ್ಲೇಸಿಂಗ್ ರೆಡ್, ಪ್ಯಾಂಥರ್ ಬ್ಲ್ಯಾಕ್, ಪಿಯರ್ ಸಿಲ್ವರ್ ವೈಟ್ ಹಾಗೂ ಮ್ಯಾಟ್ ಟೆಕ್ನೋ ಬ್ಲೂ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ವಿಭಿನ್ನ ಬಣ್ಣ ಹಾಗೂ ಮಾದರಿಗಳನ್ನು ಹೊಂದಿರುವ ಈ ಸ್ಕೂಟರಿನಲ್ಲಿ 124.6 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಕನೆಕ್ಟೆಡ್ ಫೀಚರ್ ಹೊಂದಿರುವ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರಿನಲ್ಲಿ ಅಳವಡಿಸಿರುವ 124.6 ಸಿಸಿ ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.4 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Hero Motocorp launches new Maestro Edge 125 scooter with connected feature. Read in Kannada.
Story first published: Thursday, July 22, 2021, 20:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X