ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಿಸಿದ ಹಿರೋ ಮೋಟೊಕಾರ್ಪ್
ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟ ಜವಾಬ್ದಾರಿ ಹೊತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಪಾಲುದಾರಿಕೆ ಯೋಜನೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಹೀರೋ ಕಂಪನಿಯು ಹಾರ್ಲೆ ಕಂಪನಿಯ ಆಯ್ದ ಬೈಕ್ ಮಾದರಿಗಳ ಮೇಲೆ ಹಲವಾರು ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ.

ಹೊಸ ಯೋಜನೆಯ ಭಾಗವಾಗಿ ಹೀರೋ ಮೊಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟಕ್ಕಾಗಿ ಪ್ರತ್ಯೇಕ ಮಾರಾಟ ಸೌಲಭ್ಯ ತೆರೆದಿದ್ದು, ಐಷಾರಾಮಿ ಬೈಕ್ ಮಾರಾಟ ಆರಂಭಿಸಿದ ಸಂಭ್ರಮಕ್ಕಾಗಿ ಆಯ್ದ ಬೈಕ್ ಮಾದರಿಗಳ ಖರೀದಿ ಮೇಲೆ ಗರಿಷ್ಠ ರೂ.2.50 ಲಕ್ಷದ ತನಕ ಆಫರ್ ನೀಡುತ್ತಿದೆ. ಹೊಸ ಆಫರ್‌ಗಳು ಸೀಮಿತ ಅವಧಿಯೊಳಗೆ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದ್ದು, ಶೀಘ್ರದಲ್ಲೇ ಹೀರೋ ಕಂಪನಿಯು ಮತ್ತಷ್ಟು ಹೊಸ ಹಾರ್ಲೆ ಬೈಕ್ ಮಾದರಿಗಳನ್ನು ಭಾರತದಲ್ಲಿ ಪರಿಚಯಿಸುವ ಸಿದ್ದತೆಯಲ್ಲಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಆರಂಭಿಸಿರುವ ಫಸ್ಟ್ ಟು ರೈಡ್ ಅಭಿಯಾನದಡಿ ಹಾರ್ಲೆ ಲೋ ರೈಡರ್, ಲೋ ರೈಡರ್ ಎಸ್, ಫ್ಯಾಟ್ ಬಾಯ್ 114 ಮತ್ತು ಫ್ಯಾಟ್ ಬಾಯ್ 107 ಬೈಕ್ ಮೇಲೆ ಆಫರ್ ಲಭ್ಯವಿದೆ.

ಹಾರ್ಲೆ-ಡೇವಿಡ್ಸನ್ ಕಂಪನಿಯೊಂದಿನ ಪಾಲುದಾರಿಕೆಯನ್ನು ಆಚರಿಸಲು ಈ ಕೊಡುಗೆಗಳನ್ನು ಘೋಷಿಸಲಾಗಿದ್ದು, ಕನಿಷ್ಠ ರೂ.1.25 ಲಕ್ಷದಿಂದ ಗರಿಷ್ಠ ರೂ. 2.50 ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಲೋ ರೈಡರ್ ಮಾದರಿಯ ಮೇಲೆ ರೂ.1.25 ಲಕ್ಷ ರಿಯಾಯ್ತಿ ಲಭ್ಯವಿದ್ದಲಿ ಲೋ ರೈಡರ್ ಎಸ್ ಮಾದರಿಯ ಮೇಲೆ ರೂ.1.50 ಲಕ್ಷ, ಫ್ಯಾಟ್ ಬಾಯ್ 114 ಬೈಕ್ ಮಾದರಿಯ ಮೇಲೆ ರೂ.2.20 ಲಕ್ಷ ಮತ್ತು ಫ್ಯಾಟ್ ಬಾಯ್ 107 ಬೈಕ್ ಮಾದರಿಯ ಮೇಲೆ ಗರಿಷ್ಠ ರೂ.2.50 ಲಕ್ಷದ ತನಕ ಆಫರ್ ನೀಡುತ್ತಿದೆ. ಸೀಮಿತ ಅವಧಿಗೆ ಮಾತ್ರ ಈ ಆಫರ್ ಲಭ್ಯವಿದ್ದು, ಐಷಾರಾಮಿ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಹೊಸ ಆಫರ್ ಮೂಲಕ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ತಗ್ಗಿಸುವುದಕ್ಕಾಗಿ ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿ ಪಾಲುದಾರಿಕೆ ಯೋಜನೆ ಆರಂಭಿಸಿದೆ.

ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗಿತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಹೀರೋ ಕಂಪನಿಯು ಹೊಸ ಯೋಜನೆಗಾಗಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಐಷಾರಾಮಿ ಬೈಕ್ ಬ್ರಾಂಡ್‌ಗೆ ಪೂರಕವಾದ ಯೋಜನೆಗಳನ್ನು ಸಿದ್ದಪಡಿಸಿರುವ ಹೀರೋ ಮೊಟೋಕಾರ್ಪ್ ಕಂಪನಿಯು ಬೆಂಗಳೂರಿನಲ್ಲಿ ಟಸ್ಕರ್ ಮೋಟಾರ್‌ಸೈಕಲ್ ಪ್ರೈ.ಲಿ ಸೇರಿದಂತೆ 11 ಹೊಸ ಡೀಲರ್ಸ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಉದ್ಯಮ ವ್ಯವಹಾರಕ್ಕಾಗಿ ಐಷಾರಾಮಿ ಬೈಕ್ ತಂತ್ರಜ್ಞಾನ ವಿಭಾಗದಲ್ಲಿ ಅನುಭವ ಹೊಂದಿರುವ ರವಿ ಅವಲೂರ್ ಅವರನ್ನು ಸಹಭಾಗೀತ್ವ ಯೋಜನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಪ್ರೀಮಿಯಂ ಮೋಟಾರ್‌ಸೈಕಲ್ ಮಾರುಕಟ್ಟೆಯ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಅನುಭವಿಯಾಗಿರುವ ರವಿ ಅವಲೂರ್ ಅವರು ಈ ಹಿಂದೆ ಡುಕಾಟಿ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಹೀರೋ ಮೋಟೊಕಾರ್ಪ್ ಜೊತೆಗೂಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯ ಸಹಭಾಗಿತ್ವ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹೊಸ ಯೋಜನೆಯಲ್ಲಿ ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ ಕೂಡಾ ಉಸ್ತುವಾರಿ ವಹಿಸಲಿದ್ದಾರೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗಿತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ.


Click it and Unblock the Notifications