ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದಿಗ ಹೀರೋ ಕಂಪನಿಯು ಹೊಸ ಎಕ್ಸ್‌ಪಲ್ಸ್ 200 4ವಿ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಟೀಸರ್ ಆರಂಭದಲ್ಲಿ, ನಾವು ಫೆಂಡರ್‌ನಲ್ಲಿ ನೀಲಿ ಗ್ರಾಫಿಕ್ಸ್ ಅನ್ನು ನೋಡಬಹುದು, ಅವುಗಳು ಇತ್ತೀಚಿನ ಸ್ಪೈ ಚಿತ್ರಗಳಲ್ಲಿ ನಾವು ನೋಡಿದಂತೆಯೇ ಇರುತ್ತವೆ. ಟೀಸರ್ ವೀಡಿಯೋದಲ್ಲಿರುವ ಎಕ್ಸ್‌ಪಲ್ಸ್ 200 4ವಿ ಬೈಕ್ ಎಂಬುದನ್ನು ಇದು ಖಚಿತಪಡಿಸುತ್ತದೆ. ಹೊಸ ನೀಲಿ-ಬಿಳಿ ಡ್ಯುಯಲ್-ಟೋನ್ ಬಣ್ಣವನ್ನು ಹೊರತುಪಡಿಸಿ, ಹೀರೋ ಮೋಟೋಕಾರ್ಪ್ ನೀಲಿ-ಕಪ್ಪು ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಸಹ ನೀಡಲಿದ್ದು, ಇದನ್ನು ಸ್ಫಾಟ್ ಟೆಸ್ಟ್ ಕೂಡ ನಡೆಸಲಾಗಿದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ನವೀಕರಿಸಿದ ಹೀರೋ ಎಕ್ಸ್‌ಪಲ್ಸ್ 200 ರಲ್ಲಿ ದೊಡ್ಡ ಬದಲಾವಣೆಯು ಎಂಜಿನ್ ಆಗಿರುತ್ತದೆ. ಇದು 2 ಬದಲಿಗೆ 4 ವೈಲ್ಸ್ ಹೊಂದಿರುತ್ತದೆ. ಇದರರ್ಥ ಮೋಟಾರ್ ಹೆಚ್ಚು ಪರಿಷ್ಕರಿಸಲ್ಪಡುತ್ತದೆ ಮತ್ತು ಕಡಿಮೆ ಕಂಪನಗಳನ್ನು ಹೊಂದಿರುತ್ತದೆ. ಇದು ಸ್ವಲ್ಪ ಹೆಚ್ಚು ಪವರ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ ಮತ್ತು ಹೆಚ್ಚಿದ ಇಂಧನ ದಕ್ಷತೆಯನ್ನು ನೀಡುತ್ತದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಪ್ರಸ್ತುತ ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ 199.6 ಸಿಸಿ ಸಿಂಗಲ್ ಸಿಲಿಂಡರ್ 2-ವಾಲ್ವ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 17.8 ಬಿಹೆಚ್‍ಪಿ ಪವರ್ ಮತ್ತು 16.45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಹೊಸ ಬೈಕಿನ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾದರಿಯ ಹಾರ್ಡ್‌ವೇರ್ ಬದಲಾಗದೆ ಉಳಿಯುತ್ತದೆ. ಇದರಲ್ಲಿ ಎಕ್ಸ್‌ಪಲ್ಸ್ 200 ಬೈಕಿನಲ್ಲಿರುವಂತೆ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಇನ್ನು ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ.

ಇತರ ನವೀಕರಣಗಳಲ್ಲಿ ದ್ವಿಚಕ್ರ ವಾಹನವು ಹಬ್ಬದ ಸೀಸನ್‌ಗೆ ಮುಂಚಿತವಾಗಿ ನವೀಕರಿಸಿದ ಹೀರೋ ಎಕ್ಸ್‌ಪಲ್ಸ್ 200 4ವಿಯನ್ನು ಬಿಡುಗಡೆಗೊಳಿಸಲಿದೆ. ಹೊಸ ಮಾದರಿಯು ಈಗಿರುವ ಮಾದರಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಬೈಕ್ ಹೊಸ ಬಣ್ಣದ ಯೋಜನೆಗಳು, ಉತ್ತಮ ಸ್ಟೈಲಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಇನ್ನು ಹೀರೋ ಕನೆಕ್ಟ್ ಹಲವಾರು ಕನೆಕ್ಟಿವಿಟಿ ಫೀಚರ್ಸ್ ಗಳನ್ನು ನೀಡುತ್ತದೆ. ಟಾಪ್ಲ್ ಅಲರ್ಟ್ ಫೀಚರ್ ಈಗ ಎಕ್ಸ್‌ಪಲ್ಸ್ 200 ನೊಂದಿಗೆ ಲಭ್ಯವಿದೆ. ಬೈಕಿ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಬೈಕ್ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ವೈಶಿಷ್ಟ್ಯವು ಜೀವ ರಕ್ಷಕವಾಗಬಹುದು. ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ, ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಪರಿಸ್ಥಿತಿ ಅಗತ್ಯವಿದ್ದಲ್ಲಿ ವೈದ್ಯಕೀಯ ಸಹಾಯವನ್ನು ಕೋರಬಹುದು. ಇನ್ನು ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ. ಹೀರೋ ಕನೆಕ್ಟ್ ಫೀಚರ್ ಎಕ್ಟ್ರೀಮ್ 160ಆರ್, ಎಕ್ಸ್‌ಪಲ್ಸ್ 200, ಪ್ಲೆಷರ್ ಪ್ಲಸ್ ಮತ್ತು ಪ್ಲೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಲ್ಲಿಯು ಲಭ್ಯವಿದೆ. ಈ ಹೀರೋ ಕನೆಕ್ಟ್ ಫೀಚರ್ ಹೆಚ್ಚು ಉಪಯುಕ್ತ ಫೀಚರ್ ಆಗಿದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಮೊದಲು ಕಾರುಗಳೊಂದಿಗೆ ಪರಿಚಯಿಸಲಾಯಿತು, ಕನೆಕಕ್ಟಿವಿಟಿ ಫೀಚರ್ಸ್ ದ್ವಿಚಕ್ರ ವಾಹನಗಳಿಗೂ ದಾರಿ ಮಾಡಿಕೊಟ್ಟಿತು. ಗ್ರಾಹಕರಲ್ಲಿ ಹೆಚ್ಚುತ್ತಿರುವ ಆದ್ಯತೆಯೊಂದಿಗೆ ಅನೇಕ ಸ್ಕೂಟರ್‌ಗಳು ಮತ್ತು ಬೈಕ್ ಗಳಿಗೆ ಈಗ ಮೀಸಲಾದ ಕನಕ್ಟಿವಿಟಿ ಫೀಚರ್ಸ್ ಗಳನ್ನು ನೀಡಲಾಗುತ್ತಿದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.ಇದರಿಂದ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಬೆಲೆ ಏರಿಕೆ ಪಡೆದುಕೊಂಡಿದೆ. ಬೆಲೆ ಏರಿಕೆ ಪಡೆದುಕೊಂಡ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ರೂ,1,23,150 ಗಳಾದರೆ ,2021ರ ಏಪ್ರಿಲ್ ತಿಂಗಳಿನಿಂದ ಈ ಬೈಕ್ ಮೂರನೇ ಬಾರಿ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಹೊಸ Hero Xpulse 200 4V ಬೈಕ್ ಟೀಸರ್ ಬಿಡುಗಡೆ

ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನಲ್ಲಿ ಬಿಡುಗಡೆ ದಿನಾಂಕವನ್ನು ಹೀರೋ ಮೋಟೋಕಾರ್ಪ್ ಇನ್ನೂ ಘೋಷಿಸಿಲ್ಲವಾದರೂ, ಕಂಪನಿಯು ಮುಂದಿನ ವಾರಗಳಲ್ಲಿ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ನವೀಕರಿಸಿದ ಹೊಸ ಬೈಕ್ ತುಸು ದುಬಾರಿಯಾಗಿರಬಹುದು.

Article Published On: Friday, October 1, 2021, 14:50 [IST]
English summary
Hero motocorp officially teased upcoming new xpulse 200 4v details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+