ಹೊಸ ಹೀರೋ ಗ್ಲ್ಯಾಮರ್ ಬೈಕಿನ ಟೀಸರ್ ಬಿಡುಗಡೆ
ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಹೀರೋ ಕಂಪನಿಯು ನವೀಕರಿಸಿದ ಹೊಸ ಗ್ಲ್ಯಾಮರ್ ಬೈಕಿನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಎಕ್ಸ್‌ಟೆಕ್ ಒಟ್ಟಾರೆಯಾಗಿ ವಿಭಿನ್ನ ಟ್ರಿಮ್ ಆಗಿದ್ದರೆ, ನವೀಕರಿಸಿದ ಗ್ಲ್ಯಾಮರ್ ಮಾರಾಟವಾಗುವ ಸ್ಟ್ಯಾಂಡರ್ಡ್ ಬೈಕಿನ ನವೀಕರಿಸಿದ ಮಾದರಿಯಾಗಿದೆ. ಟೀಸರ್ ಚಿತ್ರದಲ್ಲಿ ಅಗ್ರೇಸಿವ್ ಆಗಿ ಕಾಣುವ ಎಚ್-ಆಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಂಪ್ ಅನ್ನು ಕಾಣಬಹುದು. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಲ್ಲಿ ಹೀರೋ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಹೆಡ್‌ಲ್ಯಾಂಪ್ ಯುನಿಟ್ ಎಲ್ಇಡಿ ಆಗಿದ್ದರ ಟರ್ನ್ ಇಂಡಿಕೇಟರ್ಸ್ ಹ್ಯಾಲೊಜೆನ್ ಯುನಿಟ್ ಗಳಾಗಿದೆ.

ಇದಲ್ಲದೆ ಸಿಲೂಯೆಟ್ ಅನ್ನು ಟೀಸರ್ ಚಿತ್ರದಲ್ಲಿ ಕಾಣಬಹುದು. ಟ್ಯಾಂಕ್ ಮತ್ತು ಸೀಟ್ ಪ್ರೊಫೈಲ್ ನವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ನವೀಕರಿಸಿದ ಹೊಸ ಹೀರೋ ಗ್ಲ್ಯಾಮರ್ ಬೈಕಿನ ಮಾಹಿತಿಗಳು ಬಹಿರಂಗವಾಗುತ್ತದೆ.

ಇನ್ನು ಹೊಸದಾಗಿ ಬಿಡುಗಡೆಗೊಂಡ ಗ್ಲ್ಯಾಮರ್ ಎಕ್ಸ್‌ಟೆಕ್‌ಗೆ ಹೋಲಿಸಿದರೆ, ಸಾಮಾನ್ಯ ಗ್ಲ್ಯಾಮರ್‌ನ ನವೀಕರಿಸಿದ ಮಾದರಿಯು ಸ್ವಲ್ಪ ಭಿನ್ನವಾಗಿರುತ್ತದೆ. ಹೆಚ್ಚಾಗಿ ಇದು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಕಳೆದುಕೊಳ್ಳುತ್ತದೆ. ಸಣ್ಣ ವಿನ್ಯಾಸ ಬದಲಾವಣೆಗಳೊಂದಿಗೆ, ಇದು ತಾಜಾವಾಗಿ ಕಾಣುತ್ತದ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೈಕಿನಲ್ಲಿರುವ ಅದೇ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಸ ಮಾದರಿಯಲ್ಲಿ ಅಳವಡಿಸಬಹುದು. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ.

ಈ ಹೀರೋ ಗ್ಲ್ಯಾಮರ್ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಶೈನ್ ಮತ್ತು ಎಸ್‌ಪಿ 125 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಜೊತೆಗೆ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಬ್ಯಾಂಕ್ ಆಂಗಲ್ ಸೆನ್ಸರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

ಈ ಬೈಕಿನಲ್ಲಿ ಕರೆ ಮತ್ತು ಎಸ್‌ಎಂಎಸ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ನೀಡುತ್ತದೆ ಮ್ಯಾಪ್ ಜೊತೆ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಿದೆ. ಇನ್ನು ಒಟ್ಟಿನಲ್ಲಿ ಹೊಸ ಹೀರೋ ಗ್ಲ್ಯಾಮರ್ ಕೆಲವು ನವೀಕರಣಗಳನ್ನು ಪಡೆದುಕೊಳ್ಳುತ್ತಿದೆ. ಈ ಹೊಸ ಹೀರೋ ಗ್ಲ್ಯಾಮರ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications








